ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟೆಕ್ಸಾಸ್: ಮೆದುಳಿಗೆ 4 ಇಂಚಿನ ಮೊಳೆ ಹೊಕ್ಕರೂ ಬದುಕುಳಿದ! (Man survives | 4-inch nail in brain | Texas | America)
ಮೆದುಳಿಗೆ ಮೊಳೆಹೊಕ್ಕ ವ್ಯಕ್ತಿಯೊಬ್ಬ ಪವಾಡ ಸದೃಶವಾಗಿ ಬದುಕಳಿದ ಘಟನೆ ಅಮೆರಿಕದ ಟೆಕ್ಸಾಸ್‌ ಪಟ್ಟಣದಲ್ಲಿ ನಡೆದಿದೆ. ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನ ಮೆದುಳಿಗೆ ನಾಲ್ಕು ಇಂಚಿನ ಮೊಳೆ ಹೊಕ್ಕಿತ್ತು. ವೈದ್ಯರು ಸಕಾಲಕ್ಕೆ ಶಸ್ತ್ರ ಚಿಕಿತ್ಸೆ ನಡೆದಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ[linkend>

ಟೆಕ್ಸ್ಕಾಸ್‌ನ ಪ್ಲಾನೋದಲ್ಲಿರುವ ಆಸ್ಪತ್ರೆಗೆ ದಾಖಲಾಗಿರುವ ಅಪರಿಚಿತ ವ್ಯಕ್ತಿಯ ಮೆದುಳಿಗೆ ನಾಲ್ಕು ಇಂಚಿನ ಮೊಳೆ ಹೊಕ್ಕಿತ್ತು, ಇದು ಇನ್ನೊಂದು ಮಿಲಿಮೀಟರ್‍ ಮುಂದೆ ಚುಚ್ಚಿದ್ದರೆ ವ್ಯಕ್ತಿ ಸಾಯುತ್ತಿದ್ದ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ನರ ರೋಗ ತಜ್ಞ ಡಾ. ರಾಬ್‌ ಡಿಕರ್‌ಮೆನ್‌ ವ್ಯಕ್ತಿಯ ಮೆದುಳಿಗೆ ಹೊಕ್ಕಿದ್ದ ಮೊಳೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊಳೆ ಒಂದು ಮಿಲಿಮೀಟರ್‍ ಹೆಚ್ಚು ಒಳ ಹೊಕ್ಕಿದ್ದರೂ ಆತ ಸಾಯುವ ಸಾಧ್ಯತೆಯಿತ್ತು ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ನಂತರ ವ್ಯಕ್ತಿ ಆರೋಗ್ಯದಿಂದಿದ್ದಾನೆ ಎಂದು ತಿಳಿಸಿರುವ ವೈದ್ಯರು, ಇದು ಕುತೂಹಲ ಸಂಗತಿಯಾಗಿದ್ದು,ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಒಳ್ಳೆಯದೇ ಆಗಿದೆ ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಟೆಕ್ಸಾಸ್, ಮೆದುಳು, ಅಮೆರಿಕ, ಪವಾಡ, ಕರ್ನಾಟಕ ನ್ಯೂಸ್, ಕನ್ನಡ ಸುದ್ದಿ