ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಾಡೆನ್ ನಿಕಟವರ್ತಿಗಳು ದೇಶ ಬಿಟ್ಟು ಹೊರಹೋಗುವಂತಿಲ್ಲ: ಪಾಕ್ (Osama bin Laden | Pakistan | CIA | Latest News in Kannada)
ಅಲ್‌ ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ನೊಂದಿಗೆ ನಂಟು ಹೊಂದಿರುವವರು ದೇಶದಿಂದ ಹೊರ ಹೋಗುವುದಂತೆ ಪಾಕಿಸ್ತಾನ ಸರಕಾರ ನಿಷೇಧಿಸಿದೆ. ಪಾಕ್‌ ರಾಜಧಾನಿ ಇಸ್ಲಾಮಾದ್‌ ಸಮೀಪದ ಅಬೋಟಾಬಾದ್‌ನಲ್ಲಿ ಒಸಾಮಾ ಬಿನ್‌ ಲಾಡೆನ್‌ ಅಡಗಿದ್ದ ಬಗ್ಗೆ ಅಮೆರಿಕ ಗುಪ್ತಚರ ಸಂಸ್ಥೆ ಸಿಐಎಗೆ ಮಾಹಿತಿ ನೀಡಿದ್ದ ಪಾಕಿಸ್ತಾನಿ ವೈದ್ಯನಿಗೆ ದೇಶಬಿಟ್ಟು ಹೊರ ಹೋಗುವುದನ್ನು ನಿಷೇಧಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಡಾ. ಶಕೀಲ್‌ ಅಫ್ರಿದಿ ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕ ಕೋರಿದ ಕೆಲ ದಿನಗಳಲ್ಲೇ ಅವರು ದೇಶಬಿಟ್ಟು ಹೊರ ಹೋಗುವುದನ್ನು ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ.

ಒಸಾಮಾ ಬಿನ್‌ ಲಾಡೆನ್‌ ಅಡಗುತಾಣದ ಮೇಲೆ ಮೇ 2 ರಂದು ಅಮೆರಿಕ ಪಡೆಗಳು ದಾಳಿ ನಡೆಸುವ ಕೆಲವೇ ತಿಂಗಳ ಮೊದಲುಡಾ. ಶಕೀಲ್‌ ಅಫ್ರೀದಿ, ಅಬೋಟಾಬಾದ್‌ನಲ್ಲಿ ಒಸಾಮಾ ಬಿನ್‌ ಲಾಡೆನ್‌ ಕುಟುಂಬದ ಡಿಎನ್‌ಎ ಪತ್ತೆಗಾಗಿ ನಕಲಿ ಪೊಲಿಯೋ ಲಸಿಕಾ ಕಾರ್ಯಕ್ರಮ ಆಯೋಜಿಸಿದ್ದರು. ಅಫ್ರಿದಿ ಪ್ರಸ್ತುತ ಭದ್ರತಾ ಪಡೆಗಳ ವಶದಲ್ಲಿದ್ದಾರೆ.

ಡಾ.ಶಕೀಲ್‌ ಅಹಮದ್‌ ಸೇರಿದಂತೆ ಅಬೋತಾಬಾದ್‌ ಘಟನೆಗೆ ಸಂಬಂಧಪಟ್ಟಿರುವವರೆಲ್ಲರಿಗೂ ದೇಶ ಬಿಟ್ಟು ಹೊರ ಹೋಗುವುದನ್ನು ನಿಷೇಧಿಸಿ ಅಬೋಟಾಬಾದ್‌ ಕಮಿಷನ್‌ ಆದೇಶ ಹೊರಡಿಸಿದೆ ಎಂದು ಕಮಿಷನ್‌ ವಕ್ತಾರರೊಬ್ಬರು ತಿಳಿಸಿದ್ದಾರೆ.

ಅಬೋಟಾಬಾದ್‌ ಕಮಿಷನ್‌ ಅನುಮತಿಯಿಲ್ಲದೇ ಯಾರೊಬ್ಬರೂ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮೆರಿಕ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್‌ ಪಾಕಿಸ್ತಾನ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರಿಗೆ ಜುಲೈ 28ರಂದು ಕರೆ ಮಾಡಿ ಅಫ್ರೀದಿ ಅವರನ್ನು ಬಿಡುಗಡೆ ಮಾಡುವಂತೆ ಕೋರಿದ್ದರು ಎಂದು ಎಕ್ಸ್‌ಪ್ರೆಸ್‌ಟ್ರಿಬ್ಯೂನ್‌ ದೈನಿಕ ವರದಿ ಮಾಡಿತ್ತು.

ಹಿಲೆರಿ ಕ್ಲಿಂಟನ್‌ ಅವರ ಬೇಡಿಕೆಯನ್ನು ತಿರಸ್ಕರಿಸಿದ್ದ ಜರ್ದಾರಿ, ಒಸಾಮಾ ಬಿನ್‌ ಲಾಡೆನ್‌ ಅಡಗುತಾಣದ ಮೇಲೆ ನಡೆದ ದಾಳಿ ಕುರಿತ ಈ ಪ್ರಕರಣವು ನ್ಯಾಯಾಂಗ ಆಯೋಗದ ಮುಂದಿರುವುದರಿಂದ ಡಾ. ಶಕೀಲ್‌ ಅಹಮದ್‌ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಒಸಾಮಾ ಬಿನ್ ಲಾಡೆನ್, ಅಲ್ ಖೈದಾ ಉಗ್ರ, ಶಕೀಲ್ ಅಫ್ರೀದಿ, ಪಾಕಿಸ್ತಾನ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ