ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರಧಾನಿ ಅಭ್ಯರ್ಥಿ - ರಾಹುಲ್‌ಗಿಂತಲೂ ಮೋದಿಯೇ ಪ್ರಭಾವಿ: ಅಮೆರಿಕ (2014 Polls | Congressional Research Service | Narendra Modi | Rahul Gandhi)
2014ರ ಮಹಾ ಚುನಾವಣೆಗಳಲ್ಲಿ ಗುಜರಾತ್‌ನ ವಿವಾದಾತ್ಮಕ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಅಮೆರಿಕದ ಕಾಂಗ್ರೆಸ್‌ ಸಂಶೋಧನಾ ವರದಿ(ಸಿಆರ್‌ಎಸ್‌) ಅಂದಾಜಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿಯಿಂದ ಮೋದಿ ಪ್ರಭಾವಿ ಅಭ್ಯರ್ಥಿಯಾಗಲಿದ್ದು, ಅವರ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷವು ರಾಹುಲ್‌ ಗಾಂಧಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ಅಮೆರಿಕ ಕಾಂಗ್ರೆಸ್‌ನ ಸ್ವತಂತ್ರ ವಿಭಾಗವಾಗಿರುವ ಸಿಆರ್‌ಎಸ್‌ ಭಾರತದ ವಿದ್ಯಮಾನಗಳ ಕುರಿತು ನೀಡಿದ ವರದಿಯಲ್ಲಿ ತಿಳಿಸಿದೆ.

ಭಾರತದ ಅಂತಾರಾಷ್ಟ್ರಿಯ ರಾಜಕೀಯ ಆಯಾಮಗಳ ಕುರಿತು ವರದಿ ನೀಡಿರುವ ಸಿಆರ್‌ಎಸ್‌, ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ ಅವರ ನಡುವೆ ನೇರ ಹಣಾಹಣಿ ಸ್ಫರ್ಧೆ ನಡೆಯಲಿದೆಯೇ ಎಂಬುದನ್ನು ಕುರಿತು ಸ್ಪಷ್ಟವಾಗಿ ಹೇಳಿಲ್ಲ.

2009ರಲ್ಲಿ ನಡೆದ ಚುನಾವಣೆಯಲ್ಲಿ ಯುವ ಮುಖಂಡರಾಗಿರುವ ರಾಹುಲ್‌ ಗಾಂಧಿ ಅವರು 2014ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಂಬಿಸಲಾಗಿತ್ತು ಎಂದು ಸಿಆರ್‌ಎಸ್‌ ವರದಿಯಲ್ಲಿ ತಿಳಿಸಲಾಗಿದೆ. ಸಿಆರ್‌ಎಸ್‌ ಸಿದ್ಧಪಡಿಸಿರುವ ವರದಿಯನ್ನು, ಅಮೆರಿಕ ವಿಜ್ಞಾನಿಗಳ ಒಕ್ಕೂಟವು ಬಹಿರಂಗಪಡಿಸಿದೆ.

ಸಿಆರ್‌ಎಸ್‌ ವರದಿ ಅಮೆರಿಕದ ಜನ ಪ್ರತಿನಿಧಿಗಳಿಗೆ ಮಾತ್ರ ಮೀಸಲಾಗಿದ್ದು, ಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ. ಆದರೆ ಕೆಲವೊಮ್ಮೆ ಚಿಂತಕರು ಹಾಗೂ ಸರಕಾರೇತರ ಸಂಘಟನೆಗಳಿಂದಾಗಿ ಸಿಆರ್‌ಎಸ್‌ ವರದಿ ಸಾರ್ವಜನಿಕರಿಗೆ ಲಭ್ಯವಾಗುತ್ತದೆ.

ಆದರೂ ಕೂಡ, ರಾಹುಲ್‌ ಗಾಂಧಿ ಅವರು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯಗಳ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳಿವೆ. ಚುನಾವಣಾ ತಂತ್ರಗಾರಿಕೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರ ಬಗೆಗಿನ ಹಿಂಜರಿತ ಮುಂತಾದವುಗಳಿಂದಾಗಿ ಈ ಶಂಕೆ ಹುಟ್ಟಿಕೊಂಡಿದೆ ಎಂದು ಸಿಆರ್‌ಎಸ್‌ ವರದಿಯಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯುಪಿಎ ಮೈತ್ರಿಕೂಟದ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

2004ರಲ್ಲಿ ವಿದೇಶೀ ಮೂಲದ ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ಅವಕಾಶವನ್ನು ಕಾಂಗ್ರೆಸಿಗರ ಒತ್ತಡದ ಹೊರತಾಗಿಯೂ ನಿರಾಕರಿಸಿ ಅಚ್ಚರಿ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ಉತ್ತರಾಧಿಕಾರಿ ಎಂದೇ ಪಕ್ಷೀಯರಿಂದ ಕರೆಸಿಕೊಂಡಿರುವ ರಾಹುಲ್‌ ಗಾಂಧಿ ಅವರೇ ಪಕ್ಷದ ನೇತೃತ್ವ ವಹಿಸಲಿದ್ದಾರೆ ಎಂದು ಬಿಂಬಿಸಲಾಗುತ್ತಿದೆ.

ಬಿಜೆಪಿಯಿಂದ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ ಪೈಕಿ ನರೇಂದ್ರ ಮೋದಿ ಅವರೇ ಪ್ರಬಲರಾಗಿದ್ದಾರೆ ಎಂದು ಸಿಆರ್‌ಎಸ್‌ ವರದಿಯಲ್ಲಿ ಹೇಳಲಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: 2014ರ ಚುನಾವಣೆ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಸಿಆರ್ಎಸ್, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ