ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗಡಾಫಿ ಬೇಟೆಗೆ ನಾವು ಸಹಕರಿಸುತ್ತೇವೆ: ಬ್ರಿಟನ್ ಭರವಸೆ (David Cameron | Nicolas Sarkozy | Muammar Gaddafi | Libya | Latest News in Kannada)
ತಲೆಮರೆಸಿಕೊಂಡಿರುವ ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ಅವರನ್ನು ಪತ್ತೆ ಹಚ್ಚಲು ಬ್ರಿಟನ್‌ ನೆರವು ನೀಡಲಿದೆ ಎಂದು ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲಿಬಿಯಾ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿ ವಿರುದ್ಧ ಬಂಡುಕೋರರು ನಡೆಸುತ್ತಿದ್ದ ದಾಳಿಗೆ ನ್ಯಾಟೋ ಪಡೆಗಳೂ ಸಹಕಾರ ನೀಡಿದ್ದರಿಂದ 42 ವರ್ಷಗಳ ದುರಾಡಳಿತಕ್ಕೆ ತೆರೆ ಬಿದ್ದಿತ್ತು. ಜೀವ ಭಯದಿಂದಾಗಿ ನಿರಂಕುಶ ಪ್ರಭು ಮುಅಮ್ಮರ್‌ ಗಡಾಫಿ ಪಲಾಯನ ಮಾಡಿದ್ದರು.

ಜನ ವಿರೋಧಿ ಆಡಳಿತ ನಡೆಸಿದ್ದ ಮುಅಮ್ಮರ್‌ ಗಡಾಫಿಯನ್ನು ಹಿಡಿದು ಅವರ ನ್ಯಾಯಾಂಗ ವಿಚಾರಣೆ ಮಾಡಲು ನಾವು ಸಹಕರಿಸುತ್ತೇವೆ ಎಂದು ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಯಾಮರೂನ್‌ ತಿಳಿಸಿದ್ದಾರೆ.

ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ ಅವರು ಫ್ರಾನ್ಸ್‌ ಅಧ್ಯಕ್ಷ ನಿಕೋಲಸ್‌ ಸರ್ಕೋಜಿ ಅವರೊಂದಿಗೆ ಲಿಬಿಯಾದ ರಾಜಧಾನಿ ಟ್ರಿಪೋಲಿಗೆ ಭೇಟಿ ನೀಡಿದ್ದರು. ಲಿಬಿಯಾ ಕ್ರಾಂತಿಯ ಮೂಲಕ ಸರ್ವಾಧಿಕಾರಿ ಮುಅಮ್ಮರ್‌ ಗಡಾಫಿಯ ಪತನಕ್ಕೆ ಕಾರಣವಾಗಿದ್ದ ಬೆಂಗಾಜಿ ನಗರಕ್ಕೂ ಉಭಯ ನಾಯಕರು ಭೇಟಿ ನೀಡಲಿದ್ದಾರೆ.

ನಾವು ಲಿಬಿಯಾಕ್ಕೆ ಅಗತ್ಯ ನೆರವು ನೀಡಲು ಸಿದ್ಧವಾಗಿದ್ದೇವೆ ಆದರೆ ನಮ್ಮಿಂದ ಯಾವ ರೀತಿಯ ನೆರವು ಪಡೆಯಲು ಲಿಬಿಯಾ ಜನತೆ ಬಯಸಿದ್ದಾರೆ ಎಂದು ತಿಳಿಯಲು ಬಯಸಿದ್ದೇವೆ ಎಂದು ಕ್ಯಾಮರೂನ್‌ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಲಿಬಿಯಾ, ಡೇವಿಡ್ ಕ್ಯಾಮರೂನ್, ನಿಕೋಲಸ್ ಸರ್ಕೋಜಿ, ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ರಾಷ್ಟ್ರೀಯ ಸುದ್ದಿ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ