ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಅಮ್ಮರ್ ಗಡಾಫಿ ಅಲ್ಜೀರಿಯಾ ಸಮೀಪ ಅಡಗಿದ್ದಾರೆ: ಎನ್‌ಟಿಸಿ (Muammar Gaddafi | Libya | SIRTE | NATO)
ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಅಲ್ಜೀರಿಯಾ ಗಡಿಯ ಸಮೀಪದಲ್ಲೇ ಅಡಗಿದ್ದಾರೆ ಎಂದು ಲಿಬಿಯಾದ ಹೊಸ ಆಡಳಿತಗಾರರು ಹೇಳಿದ್ದಾರೆ. ಗಡಾಫಿ ಅವರ ಬೆಂಬಲಿಗರು ಅವರ ತವರೂರಿನಲ್ಲಿ ದಾಳಿಯನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಅಮ್ಮರ್‌ ಗಡಾಫಿ ಬೆಂಬಲಿಗರು ನಡೆಸುತ್ತಿದ್ದ ಗೆರಿಲ್ಲಾ ಮಾದರಿಯ ಯುದ್ಧವನ್ನು ಬಹುತೇಕ ತಡೆಗಟ್ಟಲಾಗಿದ್ದು, ಮಧ್ಯಂತರ ಸರಕಾರದ ಪಡೆಗಳು ಸಿರ್ಟೆ ಪಟ್ಟಣವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಳೆದ ಎರಡು ವಾರದಿಂದ ಹೋರಾಟ ನಡೆಸಿದ್ದವು.

ಮಧ್ಯಂತರ ಸರಕಾರ (ಎನ್‌ಟಿಸಿ)ದ ಸೇನಾ ಪಡೆ ಹಾಗೂ ನ್ಯಾಟೋ ಪಡೆಗಳು ದಾಳಿ ನಡೆಸುವ ಮೂಲಕ ಲಿಬಿಯಾದ ಸರ್ವಾಧಿಕಾರಿಯಾಗಿದ್ದ ಮುಅಮ್ಮರ್‌ ಗಡಾಫಿ ಪಡೆಯ ಬಿಗಿ ಹಿಡಿತದಲ್ಲಿದ್ದ ಬನೀ ವಾಲಿದ್‌ ಹಾಗೂ ಸಿರ್ಟೆ ನಗರಗಳ ಪೈಕಿ ಸಿರ್ಟೆ ನಗರವನ್ನು ವಶಪಡಿಸಿಕೊಂಡಿವೆ.

ಏತನ್ಮಧ್ಯೆ ಸಿರ್ಟೆ ನಗರದಲ್ಲಿ ನೀರು, ಆಹಾರ ಇಲ್ಲದೇ ಶೋಚನೀಯ ಸ್ಥಿತಿಯಲ್ಲಿರುವ ನಾಗರಿಕರ ಬಗ್ಗೆ ವಿಶ್ವ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಎನ್‌ಟಿಸಿ ಪಡೆಗಳು ಲಿಬಿಯಾ ರಾಜಧಾನಿ ಟ್ರಿಪೋಲಿಯನ್ನು ವಶಪಡಿಸಿಕೊಂಡು ಒಂದು ತಿಂಗಳು ಕಳೆದ ನಂತರವೂ ಸಹಾ ಮುಅಮ್ಮರ್‌ ಗಡಾಫಿ ಪರ ಯೋಧರು ಹೊಸ ಸರಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಜೀರಿಯಾದ ಗಡಿ ಭಾಗದಲ್ಲಿರುವ ಮುಅಮ್ಮರ್ ಗಡಾಫಿ ಅವರಿಗೆ ಟ್ಯೂರಿಗ್‌ ಬುಡಕಟ್ಟು ಜನರು ರಕ್ಷಣೆ ನೀಡುತ್ತಿದ್ದಾರೆ ಎಂದು ಎನ್‌ಟಿಸಿ ಸೇನಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಅಮ್ಮರ್‌ ಗಡಾಫಿ ನಿಷ್ಠರಾಗಿರುವ ಟ್ಯೂರಿಗ್‌ ಬುಡಕಟ್ಟು ಜನರು ಮತ್ತು ನಗರದ ದಕ್ಷಿಣ ಭಾಗದಲ್ಲಿರುವ ಅರಬ್‌ ಸಮುದಾಯದವರ ನಡುವೆ ಯುದ್ಧ ನಡೆಯುತ್ತಿದೆ. ನಾವು ಈ ಕುರಿತು ಸಂಧಾನ ಮಾತುಕತೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಅಮ್ಮರ್‌ ಗಡಾಫಿ ಅವರ ಬೇಟೆಗಾಗಿ ಹೊಸ ರೀತಿಯ ತಂತ್ರವನ್ನು ಅನುಸರಿಸಲಾಗುತ್ತಿದೆ ಎಂದು ಹಿಶಾಂ‌ ಬುಹಾಗಿಯಾರ್‌ ತಿಳಿಸಿದ್ದಾರೆ.

1970ರ ದಶಕದಲ್ಲಿ ಮಾಲಿ ಹಾಗೂ ನಿಗೇರ್‌ನಿಂದ ಬಂದು ಆ ದೇಶಗಳ ವಿರುದ್ಧ ಹೋರಾಡುತ್ತಿರುವ ಟ್ಯೂರಿಗ್‌ ಮತ್ತು ನೋಮಡ್‌ ಬುಡಕಟ್ಟು ಜನರು ಗಡಾಫಿ ಅವರನ್ನು ಬೆಂಬಲಿಸುತ್ತಿದ್ದಾರೆ. ಗಡಾಫಿ ತಮಗೆ ಲಿಬಿಯಾದಲ್ಲಿ ಉಳಿಯಲು ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ಅವರು ತಮ್ಮ ನಿಷ್ಠೆ ತೋರಿಸುತ್ತಿದ್ದಾರೆ.

ಲಿಬಿಯಾ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಮುಅಮ್ಮರ್‌ ಗಡಾಫಿ ಅವರ ಪುತ್ರ ಸೈಫ್‌ ಅಲ್‌ ಇಸ್ಲಾಂ ಅವರು ಬನೀ ವಾಲಿದ್‌ನಲ್ಲಿದ್ದಾರೆ. ಅವರ ಇನ್ನೊಬ್ಬ ಪುತ್ರ ಮುತಸ್ಸೇಮ್‌ ಅವರು ಸಿರ್ಟೆಯಲ್ಲಿ ಹೋರಾಡುತ್ತಿದ್ದಾರೆ ಎಂದು ಬುಹಾಗಿಯಾರ್‌ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮುಅಮ್ಮರ್ ಗಡಾಫಿ, ಅಲ್ಜೀರಿಯಾ, ಎನ್ಟಿಸಿ, ಸಿರ್ಟೆ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ