ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಂಟರ್‌ಪೋಲ್ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಗಡಾಫಿ ಪುತ್ರ (Muammer Gaddafi | Al-Saadi Gaddafi | Interpol | Niger)
ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್‌ ಗಡಾಫಿ ಅವರ ಪುತ್ರ ಅಲ್‌ ಸಾದಿ ಅವರನ್ನು ಇಂಟರ್‌ ಪೋಲ್‌ ಮೋಸ್ಟ್‌ ವಾಂಟೆಡ್‌ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲಿಬಿಯಾದಲ್ಲಿರುವ ಮಧ್ಯಂತರ ಸರಕಾರದ ಮನವಿಯ ಮೇರೆಗೆ ಅಲ್‌ ಸಾದಿಗೆ ರೆಡ್‌ ನೋಟಿಸ್‌ ನೀಡಲಾಗಿದೆ ಎಂದು ಅಂತಾರಾಷ್ಟ್ರೀಯ ಪೊಲೀಸ್‌ ಏಜೆನ್ಸಿಯಾಗಿರುವ ಇಂಟರ್‌ ಪೋಲ್‌ ತಿಳಿಸಿದೆ.

ಇಂಟರ್‌ ಪೋಲ್‌ ಇದೇ ಮೊದಲ ಬಾರಿಗೆ ಗಡಾಫಿಯ ನಂತರ ಆಡಳಿತಕ್ಕೆ ಬಂದ ಸರಕಾರದ ಮನವಿಯ ಮೇರೆಗೆ ರೆಡ್‌ ನೋಟಿಸ್‌ ಜಾರಿಗೊಳಿಸಿದೆ.

ಲಿಬಿಯಾ ಫುಟ್ಬಾಲ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಲ್‌ ಸಾದಿ ಗಡಾಫಿ ತಮ್ಮ ತಂಡದ ಸದಸ್ಯರಿಗೆ ಶಸ್ತ್ರಾಸ್ತ್ರಗಳಿಂದ ಬೆದರಿಕೆ ಹಾಕಿದ್ದರು ಎಂಬ ಆಪಾದನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಇಂಟರ್‌ಪೋಲ್‌ ತಿಳಿಸಿದೆ.

ಗಡಾಫಿ ಪಡೆಯ ವಿಶೇಷ ಪಡೆಯ ಮುಖ್ಯಸ್ಥರೂ ಆಗಿದ್ದ ಅಲ್‌ ಸಾದಿ ದಮನಕಾರಿ ನೀತಿ ಅನುಸರಿಸುತ್ತಿದ್ದರು ಎಂದು ಆಪಾದಿಸಲಾಗಿತ್ತು.

ಬಂಡು ಕೋರ ಪಡೆದಳು ದಾಳಿ ನಡೆಸಿದ್ದರಿಂದ ಅಲ್‌ ಸಾದಿ ಮತ್ತು ಇತರೆ ಗಡಾಫಿ ಬೆಂಬಲಿಗರು ಕಳೆದ ತಿಂಗಳು ನಿಗೇರ್‌ ರಾಷ್ಟ್ರದ ಗಡಿಯನ್ನು ದಾಟಿದ್ದರು.

ಗಡಾಫಿಯನ್ನು ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಪ್ಪಿಸುವಂತೆ ನಿಗೇರ್‌ ಹಾಗೂ ನೆರೆಹೊರೆಯ ರಾಷ್ಟ್ರಗಳಿಗೆ ಇಂಟರ್‌ ಪೋಲ್‌ ಒತ್ತಾಯಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ