ಅಕ್ಟೊಬರ್ 23ರಂದು ವರ್ನಾದಲ್ಲಿ ನಡೆಯಲಿರುವ ನ್ಯೂ ಬಲ್ಗೇರಿಯಾ ಪಾರ್ಟಿಯಿಂದ ಸ್ಫರ್ಧಿಸಿರುವ ಕತ್ತೆ ಮಾರ್ಕೋ, ಕಠಿಣ ಪರಿಶ್ರಮದ ವಾಗ್ದಾನ ನೀಡಿದೆ.
ಈಗಿನ ಮೇಯರ್ ಕಿರಿಲ್ ಯಾರ್ಡನೋವ್ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಬೇಸತ್ತ ಸ್ಥಳೀಯ ಜನರು ಕತ್ತೆಯನ್ನೇ ಮೇಯರ್ ಸ್ಥಾನದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಮೇಯರ್ ಸ್ಥಾನಕ್ಕೆ ಸ್ಫರ್ಧಿಸಿರುವ ಇತರೆ ಅಭ್ಯರ್ಥಿಗಳಂತೆ ಮಾರ್ಕೋ (ಕತ್ತೆ ) ಕದಿಯುವುದಿಲ್ಲ, ಸುಳ್ಳು ಹೇಳುವುದಿಲ್ಲ ಎಂದು ಪ್ರಚಾರ ನಿರ್ದೇಶಕ ಏಂಜಲ್ ಡ್ಯಾಂಕೋವ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.
ಅಧಿಕಾರದಲ್ಲಿರುವ ಮೇಯರ್ ಯಾರ್ಡನೋವ್ ಅವರು ಆಡಳಿತ ಪಕ್ಷದ ಅಭ್ಯರ್ಥಿಯಾಗಿದ್ದು, ತಮ್ಮ ಎದುರಾಳಿ ಮಾರ್ಕೋ (ಕತ್ತೆ )ಯೊಂದಿಗೆ ವೇದಿಕೆ ಹಂಚಿಕೊಂಡರೆ ಘನತೆಗೆ ಕುಂದು ಉಂಟಾಗುತ್ತದೆ ಎಂದು ಹೇಳಿದ್ದಾರೆ.