ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆ ವೇಷದಲ್ಲಿ ಪರಾರಿ ಯತ್ನ-ಗಡಾಫಿ ಆಪ್ತನ ಸೆರೆ (Muammar Gaddafi | Mussa Ibrahim | Libya | Sirte)
ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್‌ ಗಡಾಫಿಯ ವಕ್ತಾರ ಮೌಸಾ ಇಬ್ರಾಹಿಂ ಅವರನ್ನು ಸಿರ್ಟೆ ನಗರದ ಹೊರ ಭಾಗದಲ್ಲಿ ಬಂಧಿಸಲಾಗಿದೆ. ಅವರು ಮಹಿಳೆಯ ವೇಷದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಅಮ್ಮರ್‌ ಗಡಾಫಿ ಅವರ ಅಧಿಕೃತ ವಕ್ತಾರರಾಗಿದ್ದ ಮೌಸಾ ಇಬ್ರಾಹಿಂ ಅವರು ರಾತ್ರಿ ವೇಳೆ ಸ್ತ್ರೀ ವೇಷ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಸಿರ್ಟೆ ನಗರದಲ್ಲಿ ಬಂಧಿತರಾಗಿದ್ದಾರೆ ಎಂದು ಡೈಲಿ ಟೆಲಿಗ್ರಾಫ್‌ ಆನ್‌ಲೈನ್‌ ವರದಿ ಮಾಡಿದೆ.

ಸಿರ್ಟೆ ನಗರದ ಹೊರ ಭಾಗದಲ್ಲಿರುವ ಮಿಸೂರ್ಟಾದಲ್ಲಿ ಹೋರಾಟ ನಡೆಸುತ್ತಿರುವ ಲಿಬಿಯಾ ಮಧ್ಯಂತರ ಸರಕಾರದ ಯೋಧರು ವಾಹನದಲ್ಲಿ ಹೋಗುತ್ತಿದ್ದ ಮೌಸಾ ಇಬ್ರಾಹಿಂ ಅವರನ್ನು ಬಂಧಿಸಿದ್ದಾರೆ ಎಂದು ಎನ್‌ಟಿಸಿಯ ಜಿಂಟಾನ್‌ ಬ್ರಿಗೇಡ್‌ ಕಮಾಂಡರ್‌ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಟೆಲಿಗ್ರಾಫ್‌ ಆನ್‌ಲೈನ್‌ ವರದಿ ಮಾಡಿದೆ.

ನ್ಯಾಟೊ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಲಿಬಿಯಾದ ಮೇಲೆ ದಾಳಿ ನಡೆಸುವ ಮೂಲಕ ಪಾಪಕೃತ್ಯವೆಸಗುತ್ತಿವೆ ಎಂದು ಟ್ರಿಪೋಲಿಯಲ್ಲಿರುವ ರಿಕ್ಸೋಸ್‌ ಹೋಟೆಲ್‌ನಲ್ಲಿ ವಿದೇಶೀ ಮಾಧ್ಯಮಗಳಿಗೆ ಗಡಾಫಿ ಉಪನ್ಯಾಸ ನೀಡಿದ್ದರು.

ಶುಕ್ರವಾರ ವಿದೇಶಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿದ್ದ ಮೌಸಾ ಇಬ್ರಾಹಿಂ, ನ್ಯಾಟೋ ಪಡೆಗಳೊಂದಿಗೆ ದೇಶ ದ್ರೋಹಿಗಳು ಸೇರಿಕೊಂಡು ಲಿಬಿಯಾದ ಮೇಲೆ ಆಕ್ರಮಣ ನಡೆಸುತ್ತಿದ್ದರೂ ವಿಶ್ವ ಸಮುದಾಯ ಏಕೆ ಮೌನವಾಗಿದೆ ಎಂದು ಮೌಸಾ ಇಬ್ರಾಹಿಂ ಆಪಾದಿಸಿದ್ದರು.

ತಲೆಮರೆಸಿಕೊಂಡಿರುವ ಲಿಬಿಯಾದ ಪದಚ್ಯುತ ಅಧ್ಯಕ್ಷ ಮುಅಮ್ಮರ್‌ ಗಡಾಫಿಯಂತೆ ಮೌಸಾ ಇಬ್ರಾಹಿಂ ಕೂಡ ಎಲ್ಲಿದ್ದಾರೆ ಎಂದು ಗುರುವಾರದ ವರೆಗೂ ಪತ್ತೆಯಿರಲಿಲ್ಲ. ಗಡಾಫಿಯ ತವರೂರಾದ ಸಿರ್ಟೆಯಲ್ಲಿರುವ ವಿಮಾನ ನಿಲ್ದಾಣವನ್ನು ಮಧ್ಯಂತರ ಸರಕಾರದ ಪಡೆಗಳು ವಶಪಡಿಸಿಕೊಂಡ ನಂತರ ಮೌಸಾ ಇಬ್ರಾಹಿಂ ಬಂಧನಕ್ಕೊಳಗಾಗಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ