ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದ ವಿರುದ್ಧ ಪಾಕ್ ಉಗ್ರರನ್ನ ಎತ್ತಿಕಟ್ಟುತ್ತಿದೆ: ಹಿಲರಿ ಕ್ಲಿಂಟನ್ (Pakistan | Kashmir | Terror group | United States)
ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಡುತ್ತಿರುವ ಉಗ್ರಗಾಮಿ ಸಂಘಟನೆಗಳಿಗೆ ಎಲ್ಲ ರೀತಿಯ ನೆರವು ನೀಡುವ ಮೂಲಕ ಪಾಕಿಸ್ತಾನವು ಗಂಭೀರ ಮತ್ತು ಬರ್ಬರ ಪ್ರಮಾದ ಎಸಗಿದೆ ಎಂದು ಅಮೆರಿಕ ಆಪಾದಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನವು ದುಷ್ಟ ಮೃಗಗಳ ರೀತಿ ಇರುವ ಭಯೋತ್ಪಾದಕರನ್ನು ಹಿನ್ನೆಲೆಯಾಗಿಟ್ಟುಕೊಂಡ ನಂತರವೇ ನೆರೆಯ ರಾಷ್ಟ್ರಗಳ ಬಳಿ ಹೋಗುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್‌ ಹೇಳಿದ್ದಾರೆ.

ಪಾಕಿಸ್ತಾನದೊಂದಿಗೆ ಅಮೆರಿಕ ಹೊಂದಿರುವ ಬಾಂಧವ್ಯದಲ್ಲಿ ಉಂಟಾಗಿರುವ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವ ಮೂಲಕ ನಮ್ಮ ನಿರ್ದಿಷ್ಟ ಗುರಿ ತಲುಪಲು ಯತ್ನಿಸುತ್ತಿದ್ದೇವೆ. ಈ ಮೂಲಕ ಪಾಕಿಸ್ತಾನದಿಂದ ಉಗ್ರಗಾಮಿಗಳು ಅಮೆರಿಕದ ಮೇಲೆ ದಾಳಿ ನಡೆಸುವುದನ್ನು ತಡೆಗಟ್ಟುವುದರೊಂದಿಗೆ ಪಾಕಿಸ್ತಾನದಲ್ಲಿರುವ ಆಂತರಿಕ ಭೀತಿಯನ್ನು ನಿವಾರಿಸುವ ಮೂಲಕ ಸ್ಥಿರತೆಯನ್ನು ಕಾಪಾಡಲು ಯತ್ನಿಸುತ್ತಿದ್ದೇವೆ. ಅಲ್ಲದೇ ಅಫ್ಘಾನಿಸ್ತಾನದಲ್ಲೂ ಸಹಾ ಉತ್ತಮ ವಾತಾವರಣವನ್ನು ನಿರ್ಮಿಸುತ್ತೇವೆ ಎಂದು ಹಿಲರಿ ಕ್ಲಿಂಟನ್‌ ಹೇಳಿದ್ದಾರೆ.

ಸರಣಿ ಉಪನ್ಯಾಸ ಮಾಲಿಕೆಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಿಲರಿ ಕ್ಲಿಂಟನ್‌ ಈ ಎಲ್ಲ ವಿದ್ಯಮಾನಗಳಿಂದ ಪ್ರತಿದಿನವೂ ಕಷ್ಟಕರ ಎಂಬುದನ್ನು ನಾವು ಅರಿತಿದ್ದೇವೆ ಎಂದು ಹಿಲರಿ ತಿಳಿಸಿದ್ದಾರೆ.

ಪಾಕಿಸ್ತಾನದ ಜನರು ಭಿಗಿ ಭದ್ರತೆಯ ನಡುವೆ ಬದುಕಲು ಯತ್ನಿಸುತ್ತಿದ್ದಾರೆ ಎಂದು ಕ್ಲಿಂಟನ್‌ ಹೇಳಿದ್ದಾರೆ.

ನಮ್ಮ ಸಹೋದ್ಯೋಗಿಗಳು ತಮ್ಮ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧವೇ ಹೋರಾಡುತ್ತಿದ್ದಾರೆ. ಆದರೆ ಅವರು ಭಯೋತ್ಪಾದಕರ ವಿರುದ್ಧ ನಡೆಸುತ್ತಿರುವ ಹೋರಾಟವು ಭಾರತದೊಂದಿಗಿನ ಸಂಬಂಧದ ಬಗ್ಗೆ ಆತಂಕ ಮೂಡಿಸಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಮತ್ತು ಜಂಟಿ ಸೇನಾ ಪಡೆಯನ್ನು ಹಿಂತೆಗೆದುಕೊಂಡ ನಂತರದ ದಿನಗಳಲ್ಲಿ ಅಫ್ಘಾನಿಸ್ತಾನದ ಆಡಳಿತವನ್ನು ಅಸ್ಥಿರಗೊಳಿಸಲು ಯತ್ನಿಸಲಾಗುತ್ತಿದೆ ಎಂದು ಕ್ಲಿಂಟನ್‌ ಕಳವಳ ವ್ಯಕ್ತಪಡಿಸಿದರು.

ಅಫ್ಘಾನಿಸ್ತಾನದಲ್ಲಿದ್ದ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಭಯೋತ್ಪಾದಕ ಸಂಘಟನೆಗಳೊಂದಿಗೆ ಅಮೆರಿಕ ನೆರವು ನೀಡಿತ್ತು ಎಂದು ಪಾಕಿಸ್ತಾನ ಮಾಡಿರುವ ಆಪಾದನೆಯ ಕುರಿತು ಪ್ರತಿಕ್ರಿಯಿಸಿದ ಕ್ಲಿಂಟನ್‌, ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಾಕ್‌ ಅಧಿಕಾರಿಗಳು, ನೀವೇ ಹುಟ್ಟು ಹಾಕಿದ್ದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಹಕರಿಸುವಂತೆ ನಮಗೆ ಹೇಳಿದ್ದರು ಎಂದು ಕ್ಲಿಂಟನ್‌ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿದ್ದ ಸೋವಿಯತ್‌ ಒಕ್ಕೂಟದ ಪಡೆಗಳನ್ನು ಹೊಡೆದೋಡಿಸಲು ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳ ನೆರವು ನೀಡಿದ್ದು ನೀವೇ (ಅಮೆರಿಕ) ಎಂದು ಪಾಕಿಸ್ತಾನಿ ಅಧಿಕಾರಿಗಳು ಆಪಾದಿಸಿದ್ದರು ಎಂದು ಹೇಳಿದ ಕ್ಲಿಂಟನ್‌, ಸಂಕೀರ್ಣವಾಗಿರುವ ಈ ಪರಿಸ್ಥಿತಿಯನ್ನು ನಿಭಾಯಿಸಲು ಅಮೆರಿಕ ಹಾಗೂ ಪಾಕಿಸ್ತಾನ ಉಭಯ ದೇಶಗಳಿಗೂ ಹರಸಾಹಸ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಕಾಶ್ಮೀರ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಮೂಲಕ ದುಷ್ಕೃತ್ಯ ನಡೆಸುತ್ತಿದೆ ಎಂದು ಕ್ಲಿಂಟನ್‌ ಹೇಳಿದ್ದಾರೆ. ತಮ್ಮ ದೇಶದಲ್ಲೇ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನಿ ತಾಲಿಬಾನ್‌ ಸಂಘಟನೆಯನ್ನು ಸಂತೈಸುವ ಮೂಲಕ ಉತ್ತಮ ಭಯೋತ್ಪಾದಕರು ಮತ್ತು ಕೆಟ್ಟ ಭಯೋತ್ಪಾದಕರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಯತ್ನಿಸುತ್ತಿದೆ. ಏಕೆಂದರೆ ಉತ್ತಮ ಭಯೋತ್ಪಾದಕರು ಒಳ್ಳೆಯ ಸ್ನೇಹಿತರು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನವು ಭಯೋತ್ಪಾದಕರ ಜಾಲದೊಂದಿಗೆ ನಂಟು ಹೊಂದಿದ್ದು, ಪಾಕಿಸ್ತಾನ- ಅಫ್ಘಾನಿಸ್ತಾನ ಗಡಿ ಭಾಗದಲ್ಲಿರುವ ಅಲ್‌ ಖೈದಾ ಉಗ್ರಗಾಮಿ ಸಂಘಟನೆಗೆ ಪಾಕಿಸ್ತಾನವು ಆರ್ಥಿಕ ನೆರವು ನೀಡುತ್ತಿದೆ. ಮೃತ ಅಲ್‌ ಖೈದಾ ಮುಖಂಡ ಒಸಾಮಾ ಬಿನ್‌ ಲಾಡೆನ್‌ ಮತ್ತು ಆತನೊಂದಿಗೆ ಕಾರ್ಯನಿರ್ವಹಿಸಿದವರಿಗೆ ಅಮೆರಿಕ ಮತ್ತು ಇತರೆ ದೇಶಗಳಿಗೆ ಹೇಗೆ ಆಘಾತ ಉಂಟು ಮಾಡಬೇಕು ಎಂಬ ಕುರಿತು ಭಾರೀ ಯೋಜನೆಯೊಂದನ್ನು ರೂಪಿಸಿದ್ದರು ಎಂದು ಕ್ಲಿಂಟನ್‌ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಕಾಶ್ಮೀರ, ಭಯೋತ್ಪಾದಕ ಸಂಘಟನೆಗಳು, ಅಮೆರಿಕ, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ