ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಡ್ವಾಣಿ, ಅಭಿನವ ಭಾರತದಿಂದ ರಾಷ್ಟ್ರಕ್ಕೆ ಭಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಡ್ವಾಣಿ, ಅಭಿನವ ಭಾರತದಿಂದ ರಾಷ್ಟ್ರಕ್ಕೆ ಭಯ
PTI
ಮಾಲೆಗಾಂವ್ ಪ್ರಕರಣದ ಬಿಸಿಯನ್ನು ಬಿಜೆಪಿಯೆಡೆ ತಿರುಗಿಸುವ ಪ್ರಯತ್ನ ಮಾಡಿರುವ ಕಾಂಗ್ರೆಸ್, ರಾಷ್ಟ್ರದ ಅಂತರಿಕ ಭದ್ರತೆಗೆ "ಅಡ್ವಾಣಿ ಮತ್ತು ಅಭಿನವ ಭಾರತ" ಎಂಬ ಎರಡು 'ಅ'ಗಳಿಂದ ಅಪತ್ತುಂಟಾಗಿದೆ ಎಂದು ಅಪಾದಿಸಿದೆ.

ಕೇಸರಿ ಪಕ್ಷ ಮತ್ತು ಅದರ ಧ್ಯೇಯೊದ್ದೇಶಗಳು ಅಡಾಲ್ಫ್ ಹಿಟ್ಲರ್ ಅವರಿಂದ ಪ್ರಭಾವಿತವಾದುವು ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ವರದಿಗಾರರಿಗೆ ನೆನಪಿಸಿದರು.

ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿ ಎಲ್.ಕೆ ಅಡ್ವಾಣಿ ಅವರನ್ನು ಗುರಿಯಾಗಿಸಿ ಮಾತನಾಡಿದ ಮೊಯ್ಲಿ, ಭಯೋತ್ಪಾದನೆಯ ಪ್ರಕರಣದಲ್ಲಿ ಪ್ರಥಮ ಬಾರಿಗೆ ರಾಜಕೀಯ ಹಸ್ತಕ್ಷೇಪವನ್ನು ಮಾಡುವುದರ ಮೂಲಕ ಮೂಗು ತೂರಿಸಿದವರು ಅಡ್ವಾಣಿ ಎಂದು ಅಪಾದಿಸಿದರು.

ತಮ್ಮ ಟೀಕಾ ಬಾಣವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರತ್ತಲೂ ತಿರುಗಿಸಿದ ಮೊಯ್ಲಿ, ಮೋದಿ ಮೊದ್ಸಾ ಸ್ಪೋಟ ಪ್ರಕರಣದಲ್ಲಿ ತನಿಖೆಯನ್ನು 'ತಡೆಹಿಡಿಯಲು' ಪ್ರಯತ್ನಿಸಿದರು ಎಂದು ಅರೋಪಿಸಿದ್ದಾರೆ.

ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಅರೋಪ ಹೊತ್ತಿರುವ ಅಭಿನವ್ ಭಾರತದ ಸದಸ್ಯರು ಬಾಂಗ್ಲದೇಶಿಯರನ್ನು ಈ ವರ್ಷದ ಫೆಬ್ರವರಿಯಲ್ಲಿ ಭೇಟಿಯಾಗಿದ್ದರು ಎಂದು ತಿಳಿದು ಬಂದಿರುವ ಹಿನ್ನಲೆಯಲ್ಲಿ ಅವರು ತಮ್ಮ ಬಾಹುಗಳನ್ನು ಗಡಿ ಪ್ರದೇಶದುದ್ದಕ್ಕೂ ಚಾಚುತ್ತಿರುವ ಬಗ್ಗೆ ಕಾಂಗ್ರೆಸ್ ಚಿಂತಿತವಾಗಿದೆ ಎಂದು ಅವರು ಹೇಳಿದರು.

ಮಾಲೆಗಾಂವ್ ಪ್ರಕರಣದ ಅರೋಪಿಗಳ ಮೇಲಿನ ಕಿರುಕುಳದ ವಿಷಯವನ್ನು ಅಡ್ವಾಣಿ ಅವರು ಎತ್ತಿಕೊಂಡಿರುವುದು ಕೇವಲ ಹೆಚ್ಚಿನ ಮತ ಗಳಿಸುವ ಪ್ರಯತ್ನವಾಗಿದೆ, ಅವರು ರಾಷ್ಟ್ರೀಯ ಭದ್ರತೆಯನ್ನು ಬಲಿಕೊಟ್ಟು ಮತ ಗಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮೊಯ್ಲಿ ದೂರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಂಸದ ಸಿಧು ವಿರುದ್ಧ ದೂರು ದಾಖಲು
ಮುಂಬೈ ರೈಲು ಸ್ಫೋಟ: ಪ್ರಮುಖ ಆರೋಪಿ ಸೆರೆ
ಸಾಧ್ವಿ ಕಿರುಕುಳ: ಮಹಾರಾಷ್ಟ್ರ ಸರಕಾರಕ್ಕೆ ನೋಟಿಸ್
ಛತ್ತೀಸ್‌ಗಢ: ಮಾವೋವಾದಿಗಳ ಅಟ್ಟಹಾಸಕ್ಕೆ 7 ಪೊಲೀಸರ ಬಲಿ
'ಆಡ್ವಾಣಿ ಅಸಮರ್ಥ; ಆರ್ಥಿಕ ಬಿಕ್ಕಟ್ಟು ಅಟಲ್ ಕೊಡುಗೆ'
ಡೈವೋರ್ಸ್: ಪತ್ನಿಗೆ 40 ಲಕ್ಷ ಪರಿಹಾರ ಆದೇಶ