ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈಗೆ ಬಂದಿಳಿದ ಅಮೆರಿಕದ ಎಫ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈಗೆ ಬಂದಿಳಿದ ಅಮೆರಿಕದ ಎಫ್‌ಬಿಐ
ವಾಣಿಜ್ಯ ನಗರಿಯಲ್ಲಿ ಸಂಭವಿಸಿದ್ದ ಭಯೋತ್ಪಾದನಾ ದಾಳಿಯ ತನಿಖೆಗೆ ಸಹಕರಿಸುವ ನಿಟ್ಟಿನಲ್ಲಿ ಅಮೆರಿಕದ ತನಿಖಾ ದಳ(ಎಫ್‌ಬಿಐ)ನ ಏಳು ಮಂದಿಯ ತಂಡ ಸೋಮವಾರ ಮುಂಬೈಗೆ ಆಗಮಿಸಿದೆ.

ಇಂದು ಸಂಜೆ ನಗರಕ್ಕೆ ಆಗಮಿಸಿರುವ ಏಳು ಮಂದಿಯ ತಂಡವೊಂದು ವಿಶೇಷ ವಿಧಿವಿಜ್ಞಾನ ಪರಿಕರಗಳೊಂದಿಗೆ ಆಗಮಿಸಿದ್ದು, ದಾಳಿಗೊಳಗಾದ ತಾಜ್, ಒಬೆರಾಯ್ ಹಾಗೂ ನಾರಿಮನ್ ಹೌಸ್‌ಗಳಲ್ಲಿ ಪರಿಶೀಲನೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೇ ಮುಂಬೈ ಭಯೋತ್ಪಾದನೆ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಮತ್ತೊಂದು ತಂಡವನ್ನು ಮುಂಬೈಗೆ ಕಳುಹಿಸುವುದಾಗಿಯೂ ಅಮೆರಿಕ ಹೇಳಿದೆ.

ಏತನ್ಮಧ್ಯೆ ಮುಂಬೈ ದಾಳಿಗೆ ಅನುಕಂಪ ವ್ಯಕ್ತಪಡಿಸಿರುವ ಜಪಾನ್, ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಸಹಕಾರ ನೀಡಲು ಸಿದ್ದ ಎಂದು ಭರವಸೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ರಾಜಕೀಯ ಮಾಡುತ್ತಿದೆ: ತಿವಾರಿ ಆರೋಪ
ದೇಶಾದ್ಯಂತ ವಿಶ್ವ ಏಡ್ಸ್ ದಿನಾಚರಣೆ
ಸೇನಾ ನೇಮಕಾತಿ ರ‌್ಯಾಲಿಯಲ್ಲಿ ಕಾಲ್ತುಳಿತ: 2 ಸಾವು
ದೇಶ್‌ಮುಖ್ ಉತ್ತರಾಧಿಕಾರಿಯಾಗಿ ಶಿಂಧೆ?
ಉಗ್ರವಾದದ ವಿರುದ್ಧ ಹೋರಾಟ: ಒಮ್ಮತಕ್ಕೆ ವಿಫಲ
ದೆಹಲಿಗೆ ಡೆಕ್ಕನ್ ಮುಜಾಹಿದೀನ್ ಇಮೇಲ್ ಬೆದರಿಕೆ