ಪಾಕಿಸ್ತಾನದ ನೆಲವನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸಲು ಆಸ್ಪದ ನೀಡಬಾರದು ಎಂದು ಪ್ರದಾನಿ ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ಹೇಳಿಕೆ ನೀಡಿದ್ದಾರೆ.
ವಾಯುಪಡೆಗಳು ಪಾಕ್ ಗಡಿಯನ್ನು ಅನಧಿಕೃತವಾಗಿ ಪ್ರವೇಶಿಸಿವೆ ಎನ್ನುವುದನ್ನು ತಳ್ಳಿಹಾಕಿದ ಪ್ರಧಾನಿ, ಪಾಕ್‌ನಲ್ಲಿ ರಕ್ತದೊಕಳಿ ಹರಿಸುವ ಉಗ್ರಗಾಮಿ ಸಂಘಟನೆಗಳಿರುವುದರಿಂದ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪಾಕಿಸ್ತಾನ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಭಾರತ ಪಾಕಿಸ್ತಾನದೊಂದಿಗೆ ಬಾಂಧವ್ಯ ವೃದ್ಧಿಗಾಗಿ ಪ್ರಯತ್ನಿಸುತ್ತಿದೆ. ಆದರೆ ಉಭಯ ದೇಶಗಳು ಪರಸ್ಪರರ ಸಹಕಾರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದಾಗ ಮಾತ್ರ ಸಾಧ್ಯ ಎಂದು ನುಡಿದರು.
ಜಮ್ಮು ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯಿಂದ ಮಾತ್ರ ಸಾಧ್ಯ. ಗಡಿ ಬದಲಾವಣೆ ಸಾಧ್ಯವಿಲ್ಲ. ಗಡಿಯಲ್ಲಿರುವ ಕೆಲ ಕಠಿಣ ನಿಯಮಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ಪ್ರಧಾನಿ ಹೇಳಿದರು. |