ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವೋಟಿಗಾಗಿ ನೋಟು: ಅಮರ್ ಸಿಂಗ್‌ಗೆ ಕ್ಲೀನ್‌ಚಿಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೋಟಿಗಾಗಿ ನೋಟು: ಅಮರ್ ಸಿಂಗ್‌ಗೆ ಕ್ಲೀನ್‌ಚಿಟ್
PTI
ವೋಟಿಗಾಗಿ ನೋಟು ಪ್ರಕರಣದ ತನಿಖೆ ನಡೆಸಿರುವ ಲೋಕ ಸಭಾ ಸಮಿತಿಯು ಸೋಮವಾರ ತನ್ನ ವರದಿಯನ್ನು ಲೋಕಸಭಾ ಸ್ಪೀಕರ್‌ರಿಗೆ ಸಲ್ಲಿಸಿದ್ದು, ಪ್ರಕರಣದ ಆರೋಪಿಗಳಾದ ಸಮಾಜವಾದಿ ಪಕ್ಷದ ಸಂಸದ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ಸಂಸದ ಹಾಗೂ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ಪಟೇಲ್ ಅವರಿಗೆ ಕ್ಲೀನ್‌ಚಿಟ್ ನೀಡಿದೆ.

ಬಿಜೆಪಿಯ ವಿ.ಕೆ.ಮಲ್ಹೋತ್ರಾ ಹಾಗೂ ಸಿಪಿಎಂ ಸಂಸದ ಮಹಮ್ಮದ್ ಸಲೀಂ ಅವರುಗಳು, ಕಾಂಗ್ರೆಸ್ ಸಂಸದ ಕಿಶೋರ್ ಚಂದ್ರ ಸುರ್ಯನಾರಾಯಣ ದೇವ್ ಅವರು ಸಲ್ಲಿಸಿರುವ 466 ಪುಟಗಳ ವರದಿಯ ಕುರಿತು ತಮ್ಮ ಅಸಮ್ಮತಿ ಸಲ್ಲಿಸಿದ್ದಾರೆ.

ಅಮರ್‌ಸಿಂಗ್ ಅವರ ಸಹಚರ ಎನ್ನಲಾಗಿರುವ ಸಂಜೀವ್ ಸಕ್ಸೇನಾ , ಸೊಹೈಲ್ ಹಿಂದೂಸ್ತಾನಿ ಹಾಗೂ ಎಲ್.ಕೆ.ಆಡ್ವಾಣಿ ಅವರ ಸಹಚರ ಸುಧೀಂದ್ರ ಕುಲಕರ್ಣಿ ಅವರುಗಳ ಕುರಿತು ಸೂಕ್ತ ಏಜೆನ್ಸಿಯಿಂದ ಪ್ರತ್ಯೇಕ ತನಿಖೆಗೆ ಸಮಿತಿ ಶಿಫಾರಸ್ಸು ಮಾಡಿದೆ.

ಜುಲೈ 22ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಲೋಕಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಿದ್ದ ವೇಳೆ, ಮೂವರು ಬಿಜೆಪಿ ಸಂಸದರು ಲೋಕಸಭೆಯಲ್ಲಿ ನೋಟಿನ ಕಂತೆಗಳನ್ನು ಪ್ರದರ್ಶನ ಮಾಡಿದ್ದರು. ಇದು ಸರಕಾರದ ಪರವಾಗಿ ಮತಚಲಾಯಿಸುವಂತೆ ಅಥವಾ ತಟಸ್ಥವಾಗಿರುವಂತೆ ಅಮರ್ ಸಿಂಗ್ ಅವರು ನೀಡಿರುವ ಲಂಚದ ಹಣ ಎಂದು ಬಿಜೆಪಿ ಸಂಸದರು ಹೇಳಿದ್ದರು. ಅಹ್ಮದ್ ಪಟೇಲ್ ಅವರು ಇದರಲ್ಲಿ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಬಿಜೆಪಿ ಸಂಸದರಾದ ಅಶೋಕ್ ಅರ್ಗಲ್, ಫಗನ್ ಸಿಂಗ್ ಕುಲಾಸ್ತೆ ಮತ್ತು ಮಹಾವೀರ್ ಬಗೋಡಾ ಈ ಲಂಚದ ಆರೋಪ ಮಾಡಿದ್ದರು.

ಈ ಪ್ರಕರಣ ತನಿಖೆಗಾಗಿ ನೇಮಿಸಿರುವ ಏಳುಮಂದಿಯ ಸಮಿತಿಯು ಪ್ರಕರಣದಲ್ಲಿ ಅಮರ್ ಸಿಂಗ್ ಪಾಲ್ಗೊಂಡಿರುವುದಕ್ಕೆ ಸಾಕ್ಷಿಯಾಗಿ ಸಲ್ಲಿಸಿರುವ ವೀಡಿಯೋ ತುಣುಕಿನಲ್ಲಿ ಯಾವುದೇ ನೇರ ಸಾಕ್ಷಿ ಇಲ್ಲ ಎಂದು ಹೇಳಿದೆ. ಅಮರ್ ಸಿಂಗ್ ನಿವಾಸಕ್ಕೆ ತೆರಳುವ ಅಥವಾ ಹೊರಬರುವ ಕಾರಿನ ಎದುರು ಸೀಟಿನಲ್ಲಿ ಕುಳಿತಿರುವ ವ್ಯಕ್ತಿಗಳ (ಅರ್ಗಲ್ ಮತ್ತು ಕುಲಾಸ್ತೆ ಎಂದು ಹೇಳಲಾಗಿರುವ) ಮುಖ ವೀಡಿಯೋದಲ್ಲಿ ಸ್ಪಷ್ಟವಿಲ್ಲ ಎಂದು ಸಮಿತಿ ಅಭಿಪ್ರಾಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2012ರ ವೇಳೆಗೆ ಎಲ್ಲರಿಗೂ ವಿದ್ಯುತ್: ಶಿಂಧೆ
26/11ರ ಉಗ್ರರು ಎಲ್ಲಿಂದ ಬಂದರೆಂದು ವಿಶ್ವಕ್ಕೆ ಗೊತ್ತಿದೆ
ಇಂಜನೀಯರಿಂಗ್ ವಿಧ್ಯಾರ್ಥಿ ಮೇಲೆ ಆಸಿಡ್ ದಾಳಿ
ನಕ್ಸಲೀಯರಿಂದ ಮಾಜಿ ಸಚಿವರ ನಿವಾಸ ಸ್ಫೋಟ
ಪಾಕ್ ಉಗ್ರಗಾಮಿಗಳ ತಾಣವಾಗಬಾರದು: ಪ್ರಧಾನಿ
ಒತ್ತೆಯಾಳಾಗಿಸಿ ಬೇಡಿಕೆ ಸಲ್ಲಿಸಲು ನಿರ್ದೇಶನ:ಕಸಬ್