ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮೆರಿಕ ಸೆನೆಟರ್ ಜಾನ್ ಕೆರ್ರಿ ಪ್ರಧಾನಿ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ ಸೆನೆಟರ್ ಜಾನ್ ಕೆರ್ರಿ ಪ್ರಧಾನಿ ಭೇಟಿ
PTI
ಅಮೆರಿಕದ ಪ್ರಭಾವಿ ಸೆನೆಟರ್ ಜಾನ್ ಕೆರ್ರಿ ಅವರು ಸೋಮವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮುಂಬೈ ದಾಳಿ ಹಾಗೂ ಅದರ ಬಳಿಕದ ಪರಿಸ್ಥಿತಿಗಳ ಕುರಿತು ಮಾತುಕತೆ ನಡೆಸಿದರು.

ಪಾಕಿಸ್ತಾನ ಮೂಲದ ಲಷ್ಕರೆ ಸಂಘಟನೆಯು ನಡೆಸಿರುವ ದಾಳಿ ವಿವರಣೆಗಳನ್ನು ಸೆನೆಟ‌ರ್‌ಗೆ ಪ್ರಧಾನಿಯವರು ನೀಡಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕದ ನಿಯೋಜಿತ ಅಧ್ಯಕ್ಷ ಒಬಾಮರಿಗೆ ನಿಕಟವಾಗಿರುವ ಡೆಮಾಕ್ರೆಟಿಕ್ ಪಕ್ಷದ ಸದಸ್ಯರಾಗಿರುವ ಕೆರ್ರಿ ಅವರು ಭಯೋತ್ಪಾದನೆ ಸಂಘಟನೆಯನ್ನು ಹುಟ್ಟು ಹಾಕಿರುವ ಲಷ್ಕರೆಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಹಾಯ ನೀಡುತ್ತಿದೆ ಎಂದು ಹೇಳಿದ್ದಾರೆ.

ಅವರು ಈ ಸಂದರ್ಭದಲ್ಲಿ ಐಎಸ್ಐಗೆ ಸುಧಾರಣೆ ತರಲೂ ಒತ್ತಾಯಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಎಲ್ಲಾ ಉಗ್ರಗಾಮಿ ಸಂಘಟನೆಗಳನ್ನು ತನ್ನ ನೆಲದಿಂದ ಕಿತ್ತೊಗೆದು, ಇದು ಉಗ್ರರಿಗೆ ಸ್ವರ್ಗೀಯ ತಾಣ ಮತ್ತು ತರಬೇತಿ ಶಾಲೆಯಾಗಿಲ್ಲ ಎಂಬುದನ್ನು ಖಚಿತ ಪಡಿಸಲು ಅಮೆರಿಕ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕರೆ ನೀಡಿರುವ ನಾಲ್ಕು ದಿನಗಳ ಬಳಿಕ ಕೆರ್ರಿ ಭಾರತ್ಕೆ ಭೇಟಿ ನೀಡಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಜಾ ರೈಸ್, ಉಪ ಕಾರ್ಯದರ್ಶಿ ಜಾನ್ ನೆಗ್ರೊಪಾಂಟೆ, ಅಧ್ಯಕ್ಷ ಅಭ್ಯರ್ಥಿಯಾಗಿದ್ದ ಜಾನ್ ಮೆಕೆಯ್ನ್, ಸೇನಾಧಿಕಾರಿ ಮ್ಯಾಕ್ ಮುಲನ್ ಅವರುಗಳ ಭೇಟಿಯ ಸಾಲಿಗೆ ಇದೀಗ ಕೆರ್ರಿಯವರ ಭೇಟಿ ಸೇರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೋಟಿಗಾಗಿ ನೋಟು: ಅಮರ್ ಸಿಂಗ್‌ಗೆ ಕ್ಲೀನ್‌ಚಿಟ್
2012ರ ವೇಳೆಗೆ ಎಲ್ಲರಿಗೂ ವಿದ್ಯುತ್: ಶಿಂಧೆ
26/11ರ ಉಗ್ರರು ಎಲ್ಲಿಂದ ಬಂದರೆಂದು ವಿಶ್ವಕ್ಕೆ ಗೊತ್ತಿದೆ
ಇಂಜನೀಯರಿಂಗ್ ವಿಧ್ಯಾರ್ಥಿ ಮೇಲೆ ಆಸಿಡ್ ದಾಳಿ
ನಕ್ಸಲೀಯರಿಂದ ಮಾಜಿ ಸಚಿವರ ನಿವಾಸ ಸ್ಫೋಟ
ಪಾಕ್ ಉಗ್ರಗಾಮಿಗಳ ತಾಣವಾಗಬಾರದು: ಪ್ರಧಾನಿ