ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!
ಕರಿಯ ಚಿನ್ನ ಎಂದೇ ಜನಜನಿತವಾಗಿರುವ ತೈಲ ಬೆಲೆ ನೀರಿಗಿಂತ ಅಗ್ಗವೇ? ಹೌದು. ಶುದ್ದೀಕೃತ ಪ್ಯಾಕ್ ಮಾಡಿದ ನೀರಿನ ದರಕ್ಕೆ ಹೋಲಿಸಿದರೆ, ಇದೀಗ ತೈಲಬೆಲೆ ಇಳಿಕೆಯ ಬಳಿಕ ಭಾರತೀಯ ಬೃಹತ್ ತೈಲ ಸಂಸ್ಥೆಗಳಿಗೆ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಕಡಿಮೆ.

ಸಾರಿಗೆ ಮತ್ತು ಇತರ ವೆಚ್ಚಗಳನ್ನು ಹೊರತುಪಡಿಸಿದರೆ ಪೆಟ್ರೋಲ್ ಲೀಟರೊಂದರ 11 ರೂಪಾಯಿಯಾದರೆ, ಡೀಸೆಲ್ 13 ರೂಪಾಯಿ. ಆದರೆ ನೀವು ಕರಿದಿರುವ ಪ್ಯೂರಿಫೈಡ್ ನೀರಿನ ಬೆಲೆ ಒಂದು ಲೀಟರಿಗೆ 12ರಿಂದ 15 ರೂಪಾಯಿ.

ಈ ಲೆಕ್ಕಾಚಾರ ಹೇಗಿದೆ ನೋಡೋಣ ಬನ್ನಿ. ಕಚ್ಚಾತೈಲದ ಒಂದು ಬ್ಯಾರೆಲ್‌ನಲ್ಲಿ 198 ಲೀಟರ್ ತೈಲವಿರುತ್ತದೆ. ತೈಲದ ಬೆಲೆ ಬ್ಯಾರಲೊಂದರ 38 ಡಾಲರ್. ಡಾಲರೊಂದರ ವಿನಿಮಯ ದರ 50 ರೂಪಾಯಿಯಂತೆ ಲೆಕ್ಕ ಹಾಕಿದರೆ, ಪ್ರತಿ ಲೀಟರ್ ಕಚ್ಚಾ ತೈಲದ ಬೆಲೆ 10 ರೂಪಾಯಿ. ಒಂದು ಬ್ಯಾರೆಲ್ ಕಚ್ಚಾ ತೈಲದಿಂದ ಅಂದಾಜು 28-29 ಲೀಟರು ಪೆಟ್ರೋಲು ಮತ್ತು 85 ಲೀಟರುಗಳಷ್ಟು ಡೀಸೆಲ್ ಸಂಸ್ಕರಿಸಲಾಗುತ್ತದೆ.

ಸಂಸ್ಕರಣಾ ವಿಧಾನ ಮತ್ತು ಸಂಸ್ಕರಣೆಗೆ ಬಳಸಿದ ತಾಂತ್ರಿಕತೆಯ ಮೇಲೆ ಇದರ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. ಹಗಾಗಿ ಇತರ ಯಾವುದೇ ವೆಚ್ಚವಿಲ್ಲದಿದ್ದರೆ, ಒಂದು ಲೀಟರ್ ತೈಲ ಬೆಲೆ ಎಷ್ಟಾಗುತ್ತದೆ?

ಪೆಟ್ರೋಲ್‌ಗೆ ಲೀಟರೊಂದರ ಮಾರಾಟ ಬೆಲೆ 45 ರೂಪಾಯಿಗಳಾದರೆ, 22 ರೂಪಾಯಿಗಳಷ್ಟು ತೆರಿಗೆ ಮತ್ತು ಇತರ ವೆಚ್ಚಗಳು. 12 ರೂಪಾಯಿ ತೈಲ ಸಂಸ್ಥೆಗಳ ಲಾಭ. ಅಲ್ಲಿಗೆ, ಪೆಟ್ರೋಲು ಲೀಟರೊಂದರ ಮೂಲದರ 11 ರೂಪಾಯಿ! ಅಂತೆಯೇ ಡೀಸೆಲ್ ದರ 32 ರೂಪಾಯಿ ಆಗಿದ್ದರೆ, ಅದರ ಮೂಲದರ 13 ರೂಪಾಯಿ. ಇದರಲ್ಲಿ ತೈಲ ಸಂಸ್ಥೆಯ ಲಾಭ ಮೂರು ರೂಪಾಯಿ. ಮಿಕ್ಕವುಗಳು ತೆರಿಗೆ ಮತ್ತಿತರ ವೆಚ್ಚ!

ಈ ಲೆಕ್ಕಾಚಾರದಲ್ಲಿ ತೈಲ ಸಂಸ್ಕರಣೆಯ ಇತರ ಉತ್ಪನ್ನಗಳಾದ ಸೀಮೆಎಣ್ಣೆ, ಜೆಟ್ ಇಂಧನ, ಅಡುಗೆ ಇಂಧನ, ನಾಫ್ತಾ ಇತ್ಯಾದಿಗಳನ್ನು ಪೆಟ್ರೋಲ್ ಮತ್ತು ಡೀಸೆಲ್‌ನೊಂದಿಗೆ ಉತ್ಪಾದಿಸಲಾಗುತ್ತದೆ. ಇವೆಲ್ಲವುಗಳಿಗೂ ಅಂತಿಮ ಬೆಲೆ ಬೇರೆಯೇ ಇದೆ. ಈ ಅಂಕೆಸಂಖ್ಯೆಗಳಿಗೂ ಔದ್ಯಮಿಕ ಲೆಕ್ಕಾಚಾರದ ಅಂಕೆ-ಸಂಖ್ಯೆಗಳಿಗೂ ಅಂತಹ ವ್ಯತ್ಯಾಸವೇನೂ ಇರಲಾರದು.

ಜಾಗತಿಕ ತೈಲ ಬೆಲೆಗಳು ಇದೀಗ ಕುಸಿಯುತ್ತಾ ತಳಮುಟ್ಟಿದ್ದರೂ, ಜನಸಾಮಾನ್ಯರಿಗೆ ಇದರ ಅನುಕೂಲ ಯಾವಾಗ ಲಭಿಸಲಿದೆ ಎಂಬುದೇ ಈಗಿನ ಪ್ರಶ್ನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
ವಿಐಪಿ ಭದ್ರತೆಗೆ ಹೊಸ ಸಂಸ್ಥೆ ರಚಿಸಿ: ಎನ್‌ಎಸ್‌ಜಿ
ಸಿಬಿಐ ತನಿಖೆ ಅಗತ್ಯವಿಲ್ಲ-ಮಾಯಾ
ಕ್ರಿಸ್‌ಮಸ್: ಗೋವಾದಲ್ಲಿ ಬಿಗಿಭಧ್ರತೆ, ಕಟ್ಟೆಚ್ಚರ
ಉ.ಪ್ರ. ಬಂದ್‌ ಕರೆ: ಪೊಲೀಸರಿಂದ ಗೋಲಿಬಾರ್
ಇಂಜೀನಿಯರ್ ಹತ್ಯೆ ಪ್ರಕರಣ:ಯುಪಿ ಬಂದ್