ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೌದಿಗೆ ಪಾಕ್ ಕೈವಾಡದ ಬಗ್ಗೆ ಪುರಾವೆ ನೀಡಿದ ಭಾರತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌದಿಗೆ ಪಾಕ್ ಕೈವಾಡದ ಬಗ್ಗೆ ಪುರಾವೆ ನೀಡಿದ ಭಾರತ
ಭಯೋತ್ಪಾದನಾ 'ಕ್ಯಾನ್ಸರ್' ದಮನಕ್ಕಾಗಿ ಅಂತಾರಾಷ್ಟ್ರೀಯ ಮಂಡಳಿಯೊಂದನ್ನು ಹುಟ್ಟುಹಾಕುವ ಉದ್ದೇಶದಿಂದ ಭಾರತ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ವಿದೇಶಾಂಗ ಸಚಿವರಿಗೆ ಉಗ್ರವಾದಿ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ಭಾರತ ಪುರಾವೆಗಳನ್ನು ನೀಡಿದೆ ಎನ್ನಲಾಗಿದೆ.

ಭಯೋತ್ಪಾದನೆಗೆ ಮುಕ್ತಾಯ ಹಾಡುವಲ್ಲಿ ಇದೀಗ ಭಾರತದೊಂದಿಗೆ ಕೈ ಜೋಡಿಸಿರುವ ಸೌದಿ, ಇದಕ್ಕಾಗಿ ಎಲ್ಲಾ ರಾಷ್ಟ್ರಗಳು ತಕ್ಷಣದ ಮತ್ತು ಪಾರದರ್ಶಕ ಸಹಕಾರ ನೀಡಬೇಕು ಎಂದು ಒತ್ತಾಯಿಸಿದೆ.

ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಸೌದಿ ವಿದೇಶಾಂಗ ಸಚಿವ ರಾಜಕುಮಾರ ಸವುದ್ ಆಲ್ ಫೈಸಾಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಮುಂಬೈದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಕುರಿತ ಸಂಕೀರ್ಣ ಪುರಾವೆಗಳನ್ನು ಒದಗಿಸಿದ್ದು, ದಾಳಿಯ ನಿರ್ಮಾತೃಗಳನ್ನು ನ್ಯಾಯಾಲಯದ ಕಟಕಟೆಗೆ ತರಲು ಬೆಂಬಲ ಯಾಚಿಸಿದರು.

ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಮುಂಬೈ ನರಮೇಧ ಕೃತ್ಯದ ಹಿಂದಿರುವವರನ್ನು ನ್ಯಾಯಾಲಯಕ್ಕೆ ಎಳೆದು ತರಲು ಸೌದಿಯು ಪಾಕಿಸ್ತಾನದ ಮೇಲೆ ಪ್ರಭಾವಬೀರಬೇಕಿರುವ ಅವಶ್ಯಕತೆಯನ್ನು ಮುಖರ್ಜಿ ಅವರು ಅಲ್-ಫೈಸಲ್ ಅವರಿಗೆ ಮನವರಿಕೆ ಮಾಡಿದ್ದಾರೆನ್ನಲಾಗಿದೆ.

ಭಯೋತ್ಪಾದನೆಯು ಕ್ಯಾನ್ಸರ್, ಇದನ್ನು ನಾವು ತೊಡೆದು ಹಾಕಬೇಕಿದೆ ಎಂದ ಸೌದಿ ಸಚಿವರು, ಮುಂಬೈಯಂತಹ ಭಯೋತ್ಪಾದನಾ ದಾಳಿಯ ಕುರಿತಂತೆ ವ್ಯವಹರಣೆಗಾಗಿ ಅಂತಾರಾಷ್ಟ್ರೀಯ ಮಂಡಳಿಯನ್ನು ಹುಟ್ಟುಹಾಕುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಧಾನಿ - ಸೇನಾಮುಖ್ಯಸ್ಥರ ಉನ್ನತ ಸಭೆ
ಔರಯ್ಯಾಗೆ ಎಸ್ಪಿ ಸತ್ಯ ಶೋಧನಾ ತಂಡ
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!
ಸನ್ನದ್ಧರಾಗಿರಲು ಬಿಎಸ್‌ಎಫ್ ಜವಾನರಿಗೆ ಸೂಚನೆ
ವಿಐಪಿ ಭದ್ರತೆಗೆ ಹೊಸ ಸಂಸ್ಥೆ ರಚಿಸಿ: ಎನ್‌ಎಸ್‌ಜಿ
ಸಿಬಿಐ ತನಿಖೆ ಅಗತ್ಯವಿಲ್ಲ-ಮಾಯಾ