ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರತೀಯ ರಾಜಕಾರಣಿಗಳು ಬಳೆ ತೊಟ್ಟಿದ್ದಾರೆ: ಠಾಕ್ರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ರಾಜಕಾರಣಿಗಳು ಬಳೆ ತೊಟ್ಟಿದ್ದಾರೆ: ಠಾಕ್ರೆ
PTI
ಮುಂಬೈದಾಳಿಯ ಬಳಿಕ ಪುಟಿದೆದ್ದಿರುವ ಸ್ಫೂರ್ತಿಯ ವೈಭವೀಕರಣವನ್ನು ನಿಲ್ಲಿಸಿ, ನಮ್ಮ ವಿರೋಧಿ ನೆರೆಯನ್ನು ಪುಡಿಗಟ್ಟಲು ಭಾರತೀಯ ಸಶಸ್ತ್ರ ಪಡೆಗಳನ್ನು ನಿಯೋಜಿಸುವ 'ಕಬ್ಬಿಣದಂತಹ ಇಚ್ಚಾಶಕ್ತಿ'ಯನ್ನು ತೋರಿಸುವಂತೆ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ ಭಾರತೀಯ ರಾಜಕಾರಣಿಗಳಿಗೆ ಶನಿವಾರ ಕರೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ತರಬೇತುಗೊಂಡಿರುವ ಹತ್ತು ಮಂದಿ ಉಗ್ರರು ಸಮುದ್ರಮಾರ್ಗವಾಗಿ ಬಂದು ಭಾರತದ ವಾಣಿಜ್ಯ ರಾಜಧಾನಿಯ ಮೇಲೆ ದಾಳಿ ನಡೆಸಿ 200 ಅಮಾಯಕರು ಮತ್ತು 18 ಮಂದಿ ಭಾರತೀಯ ಸಮವಸ್ತ್ರಧಾರಿಗಳನ್ನು ಕೊಂದಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದು ಠಾಕ್ರೆ ಅವರು ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದ್ದಾರೆ.

ಪಾಕಿಸ್ತಾನದ ಭಾರತವಿರೋಧಿ ಬೆಂಬದ ಕುರಿತು ವಿಶ್ವಕ್ಕೇ ಗೊತ್ತಿದ್ದರೂ, ಪಾಕಿಸ್ತಾನವು ಕಸಬ್‌ನ ಪಾಕಿಸ್ತಾನದ ರಾಷ್ಟ್ರೀಯತೆಯನ್ನು ಅಲ್ಲಗಳೆಯುತ್ತಿದೆ ಮಾತ್ರವಲ್ಲ ಭಾರತಕ್ಕೆ ಸೂಕ್ತ ಉತ್ತರ ಕೊಡುವ ಮಾತುಗಳನ್ನು ಆಡುತ್ತಿದೆ ಎಂದು ಸಂಪಾದಕೀಯ ಹೇಳಿದೆ.

ಮುಂಬೈಯ ಜನತೆಯು ಸಹಜಸ್ಥಿತಿಗೆ ಮರಳಿರುವ ಕುರಿತು ಪ್ರಸ್ತಾಪಿಸಿರುವ ಅವರು, 1993ರಲ್ಲಿಯೂ ಸರಣಿ ಬಾಂಬ್ ಸ್ಫೋಟಗಳು ನಡೆದಾಗ ನಗರವು ಮರುದಿನವೇ ಸಹಜಸ್ಥಿತಿಗೆ ಮರುಕಳಿಸಿತ್ತು ಮತ್ತು ಶೇರುಮಾರುಕಟ್ಟೆಯೂ ಕಾರ್ಯಾಚರಿಸಿತ್ತು ಎಂದು ಹೇಳಿದ್ದಾರೆ.

ಇದೀಗ ತಾಜ್ ಮತ್ತು ಒಬೆರಾಯ್ ಕೂಡ ಪುನಾರಂಭಗೊಳ್ಳುವ ಮೂಲಕ ಮುಂಬೈ ಸ್ಫೂರ್ತಿಯನ್ನು ತೋರಿದ್ದು ಹೊಗಳಿಕೆಗೆ ಆರ್ಹವಾಗಿವೆ. ಆದರೆ, ನಗರವು ಸಹಜಸ್ಥಿತಿಗೆ ಮರುಕಳಿಸಿದೆ ಎಂದ ಮಾತ್ರಕ್ಕೆ ಅದು ನವೆಂಬರ್ 26ರ ದಾಳಿಯನ್ನು ಮರೆತಿದೆ ಎಂದು ಭಾವಿಸಿದ್ದರೆ, ರಾಜಕೀಯ ನಾಯಕರು ತಪ್ಪುತಿಳಿದಿದ್ದಾರೆ ಎಂದೇ ಅರ್ಥ ಎಂದು ಠಾಕ್ರೆ ಹೇಳಿದ್ದಾರೆ.

ಜನತೆ ಭೀತಿಗೊಂಡಿದ್ದಾರೆ. ಆದರೆ ಜೀವನೋಪಾಯಕ್ಕಾಗಿ ಹಣಸಂಪಾದನೆ ಅವರನ್ನು ಬೀದಿಗಿಳಿಯುವಂತೆ ಒತ್ತಡ ಉಂಟುಮಾಡಿದೆ. ಅವರು ದುಡಿಮೆಗಾಗಿ ಪ್ರತಿದಿನ ಮನೆ ತೊರೆಯುವಾಗ ಮತ್ತು ತಮ್ಮ ಕಾಯಕದಲ್ಲಿ ನಿರತವಾಗಿದ್ದಾಗ ಆತಂಕದಲ್ಲಿ ಇರುತ್ತಾರೆ ಎಂದು ಮಾರ್ಮಿಕವಾಗಿ ಹೇಳಿರುವ ಅವರು ಈ ಕಹಿ ಸತ್ಯವನ್ನು ರಾಜಕಾರಣಿಗಳು ಮರೆಯಬಾರದು ಎಂದು ಹೇಳಿದ್ದಾರೆ.

ಪಾಕಿಸ್ತಾನವು ಅಮಾಯಕ ಪ್ರಜೆಗಳ ಕೈಗೆ ಬಂಧೂಕು ಬಳಕೆಯ ತರಬೇತು ನೀಡುತ್ತಿದ್ದರೆ, ಭಾರತದ ರಾಜಕಾರಣಿಗಳು ಕೈಗೆ ಬಳೆತೊಟ್ಟು ಕೂತಿದ್ದಾರೆ ಎಂಬ ನೋಟವನ್ನು ನೀಡುತ್ತಿದ್ದಾರೆ. ಆದರೆ ಮುಂಬೈ ಮತ್ತು ಭಾರತದ ಜನತೆಯು ಆಡಳಿತಗಾರರಿಲ್ಲದೆ ಇರುತ್ತಿದ್ದರೆ, ಇದಕ್ಕೆ ತಕ್ಕ ಪ್ರತೀಕಾರ ನೀಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿಎಂಕೆ ಅಧ್ಯಕ್ಷರಾಗಿ ಕರುಣಾ ಪುನರಾಯ್ಕೆ
2 ವರ್ಷಗಳ ಹಿಂದೆ ಬಂಧಿತ 26/11ರ ರೂವಾರಿ?
ಸರ್ಕಾರದ ಪರಿಹಾರ ಬೇಡವೆಂದ ಗುಪ್ತಾ ಕುಟುಂಬ
'ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಭಾರತ, ಪಾಕಿಸ್ತಾನವಲ್ಲ'
ಪಾಕ್‌‌ಗೆ ಭಾರತೀಯರು ಪ್ರಯಾಣ ಬೆಳೆಸಬೇಡಿ: ಭಾರತ
ಜನತೆಯ ಸಹಕಾರ ಕೋರಿದ ಗೃಹಸಚಿವ ಚಿದು