ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಧಿಕ ತೂಕದ 10 ಗಗನಸಖಿಯರಿಗೆ ಪಿಂಕ್‌ಸ್ಲಿಪ್
ನವದೆಹಲಿ: ಅಧಿಕ ತೂಕದ ಕಾರಣಕ್ಕಾಗಿ 10 ಏರ್‌ಹೋಸ್ಟೆಸ್‌ಗಳಿಗೆ ಏರ್ ಇಂಡಿಯಾ ಪಿಂಕ್ ಸ್ಲಿಪ್ ನೀಡಿದೆ.

ಕೆಲವು ತಿಂಗಳ ಹಿಂದೆ ನೇಮಕವಾಗಿದ್ದ ಇವರನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಉದ್ಯೋಗದಿಂದ ತೆಗೆದು ಹಾಕುವ ನೋಟೀಸು ನೀಡಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಏರ್ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆನ್ನಲಾಗಿದೆ. ಈ ಎಲ್ಲಾ ಗಗನ ಸಖಿಯರು ದೇಶಿ ವಿಮಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪದಚ್ಯುತಗೊಂಡಿರುವ ಗಗನಸಖಿಯರಲ್ಲಿ ಒಬ್ಬಾಕೆ ಎರಡು ವರ್ಷಗಳ ಹಿಂದೆ ನೇಮಕವಾಗಿದ್ದು, ಆ ಬಳಿಕ ವೇತನವನ್ನೇ ನೀಡಿಲ್ಲ. ಇದೀಗ ಟರ್ಮಿನೇಶನ್ ಪತ್ರದೊಂದಿಗೆ ಒಂದು ತಿಂಗಳ ವೇತನವನ್ನು ನೀಡಲಾಗಿದೆ ಎಂದು ದೂರಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಅಧಿಕ ತೂಕದ ಕಾರಣಕ್ಕಾಗಿ ಕೆಲಸದಿಂದ ತೆಗೆದು ಹಾಕುವ ಏರ್ ಇಂಡಿಯಾ ನಿರ್ಧಾರವನ್ನು ಗಗನಸಖಿಯರು ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಗಗನ ಸಖಿಯರ ಎತ್ತರ ಮತ್ತು ತೂಕದ ಬಗ್ಗೆ ಕಾನೂನುಗಳಿರುವ ಕಾರಣ ಇದರಲ್ಲಿ ತಪ್ಪೇನಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಮೂರುಕೆಜಿ ತೂಕದ ಮಿತಿ ಏರಿಕೆಯನ್ನು ಹಿಂತೆಗೆದುಕೊಂಡಿರುವ ಸುತ್ತೋಲೆಯನ್ನು ಗಗನ ಸಖಿಯರು ವಿರೋಧಿಸಿದ್ದರು. ಆದರೆ ತನ್ನ ಈ ಕ್ರಮವನ್ನು ಸಮರ್ಥಿಸಿಕೊಂಡಿರುವ ಏರ್ ಇಂಡಿಯಾ ಇದನ್ನು ಒಪ್ಪಂದ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೇಳಿದೆ.

18ರ ಹರೆಯದ ಗಗನ ಸಖಿಯ ಎತ್ತರ 152ಸೆಂಟಿ ಮೀಟರ್ ಆಗಿದ್ದರೆ, ಆಕೆಯ ದೇಹದ ತೂಕ 50 ಕೆ.ಜಿ ಮೀರುವಂತಿಲ್ಲ. ಇದೇ ಎತ್ತರದ 26ರಿಂದ 30ರ ಹರೆಯದವರೆಗಿನ ಗಗನಸಖಿಯರ ತೂಕವು 56ಕೆ.ಜಿ ಮೀರುವಂತಿಲ್ಲ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಯಂಕರ ಚಳಿಗೆ ನಡುಗುತ್ತಿರುವ ಉತ್ತರ ಭಾರತ
ಪೂಂಛ್‌: 5ನೆ ದಿನಕ್ಕೆ ಮುಂದುವರಿದ ಗುಂಡಿನ ಕಾಳಗ
ಭಾರತದಿಂದ ಪಾಕ್ ಹೈಕಮಿಷನರ್‌ಗೆ ಪುರಾವೆ ಹಸ್ತಾಂತರ
ಇನ್‌ಫೋಸಿಸ್, ವಿಪ್ರೊಗೆ ಉಗ್ರರ ಬೆದರಿಕೆ
ಜಮ್ಮು: ಮುಂದುವರಿದ ಉಗ್ರರ ದಮನ ಕಾರ್ಯ
ಪ್ರಭಾಕರನ್ ಸಿಕ್ಕರೆ ಭಾರತಕ್ಕೆ ಹಸ್ತಾಂತರಿಸಿ: ಕಾಂಗ್ರೆಸ್