ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸು.ಕೋ ಮೊರೆ ಹೋದ ಸಂಜಯ್ ದತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸು.ಕೋ ಮೊರೆ ಹೋದ ಸಂಜಯ್ ದತ್
ತನಗೆ ವಿಧಿಸಲಾಗಿರುವ ಶಿಕ್ಷೆಯನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಕೋರಿ ಬಾಲಿವುಡ್ ತಾರೆ ಸಂಜಯ್ ದತ್ ಸುಪ್ರೀಂಕೋರ್ಟಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಮಾತ್ರ ಸಂಜಯ್ ದತ್ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಬಹುದಾಗಿದೆ.

ಲಕ್ನೋ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಲುಧ್ಯುಕ್ತವಾಗಿರುವ ಸಂಜಯ್ ದತ್‌ಗೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ. ದತ್ ಅರ್ಜಿಯು ಶುಕ್ರವಾರ ವಿಚಾರಣೆಗೆ ಬರಲಿದೆ.

ಟಾಡಾ ಕಾಯ್ದೆಯಡಿ ಸಂಜಯ್ ದತ್‌ಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಅಪರಾಧಕ್ಕಾಗಿ ಶಿಕ್ಷೆ ವಿಧಿಸಲಾಗಿದೆ. 1993ರ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 50ರ ಹರೆಯದ ದತ್‌ಗೆ ಅರು ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಜಾಮೀನು ಅರ್ಜಿ ಆಧಾರದಲ್ಲಿ ದತ್‌ಗೆ ಜಾಮೀನು ಮಂಜೂರು ಮಾಡಲಾಗಿದೆ.

2007ರ ನವೆಂಬರ್ 27ರಂದು ಜಾಮೀನು ಮಂಜೂರು ಮಾಡಿದ ವೇಳೆಗೆ ನ್ಯಾಯಾಲಯವು ಪಾಸ್‌ಪೋರ್ಟ್ ಸಲ್ಲಿಸುವಂತೆ ಮತ್ತು ಅನುಮತಿ ಇಲ್ಲದೆ ರಾಷ್ಟ್ರವನ್ನು ತೊರೆಯಬಾರದು ಎಂಬ ನಿರ್ದೇಶನ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಶಕ್ತರಿಗೆ ರಿಯಾಯಿತಿದರದಲ್ಲಿ ಭೂಮಿ ಮೀಸಲು: ಸು.ಕೋ
'ಜೈ ಹೋ'-ಕಾಂಗ್ರೆಸ್: 'ಹಾರ್ ಹೋ'- ಬಿಜೆಪಿ
ಬಿಜೆಪಿ ಕಾರ್ಯಕರ್ತನ ಕೊಲೆ
ಸರಕಾರಿ ಪ್ರಸಾರ ಕಾರ್ಯಕ್ರಮಕ್ಕೆ ನಿಷೇಧ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಹೊಂದಾಣಿಕೆ
ಮುಂದಿನ ಸಿಇಸಿಯಾಗಿ ಚಾವ್ಲಾ: ರಾಷ್ಟ್ರಪತಿ ಅಂಗೀಕಾರ