ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚಾವ್ಲಾ ನೇಮಕಾತಿ ವಿರುದ್ಧ ಸು.ಕೋಗೆ ಅರ್ಜಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಾವ್ಲಾ ನೇಮಕಾತಿ ವಿರುದ್ಧ ಸು.ಕೋಗೆ ಅರ್ಜಿ
ನವೀನ್ ಚಾವ್ಲಾ ಅವರು ಚುನಾವಣಾ ಆಯುಕ್ತರಾಗಿ ಮುಂದುವರಿಯುವುದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದ್ದು, ಅರ್ಜಿಯಲ್ಲಿ ಅವರನ್ನು ವಜಾಗೊಳಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲ ಸ್ವಾಮಿ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ನಿರ್ದೇಶನ ನೀಡಲು ವಿನಂತಿಸಲಾಗಿದೆ.

ನೋಂದಾಯಿತ ರಾಜಕೀಯ ಪಕ್ಷವಾಗಿರುವ ಭಾರತೀಯ ಸಂಯುಕ್ತ ಕಮ್ಯೂನಿಸ್ಟ್ ಪಕ್ಷ(ಯುಸಿಪಿಐ)ವು ಈ ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಈ ಅರಿಕೆ ಮಾಡಿಕೊಂಡಿದೆ. ನ್ಯಾಯಪೀಠವು ಅರ್ಜಿಯ ವಿಚಾರಣೆಯನ್ನು ಮಾರ್ಚ್ 20ಕ್ಕೆ ನಿಗದಿಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗಳಿಗೆ ಮಾಡಿರುವ ಶಿಫರಸ್ಸಿನ ಆರೋಪಗಳನ್ನು ಸರ್ವೋಚ್ಚ ನ್ಯಾಯಾಲಯವು ಪರೀಕ್ಷಿಸಬೇಕು, ಇಲ್ಲವಾದರೆ, ಅದು ಚುನಾವಣಾ ಆಯುಕ್ತರ ನಿಷ್ಪಕ್ಷಪಾತಿತನವನ್ನು ನಾಶಪಡಿಸುತ್ತದೆ ಎಂಬುದಾಗಿ ಅರ್ಜಿದಾರರ ಪರ ವಕೀಲರಾಗಿರುವ ಸುಗ್ರೀವ್ ದುಬೆ ವಾದಿಸಿದ್ದಾರೆ.

ಮುಖ್ಯಚುನಾವಣಾ ಆಯುಕ್ತರು ರಾಷ್ಟ್ರಪತಿಗಳಿಗೆ ಮಾಡಿರುವ ತನ್ನ 90 ಪುಟಗಳ ಶಿಫಾರಸ್ಸಿನಲ್ಲಿ ಚಾವ್ಲಾ ಅವರ ದುರ್ನಡತೆಯ ಹಲವಾರು ದೃಷ್ಟಾಂತಗಳನ್ನು ಪಟ್ಟಿಮಾಡಿದ್ದು, ಇದರಲ್ಲಿ ಚುನಾವಣಾ ದಿನಾಂಕಗಳ ಮಾಹಿತಿ ಸೋರಿಕೆ ಹಾಗೂ ರಾಜಕೀಯ ಪಕ್ಷವೊಂದರ ಕುರಿತು ಪಕ್ಷಪಾತಿ ಧೋರಣೆ ಸೇರಿದೆ. ಮುಖ್ಯ ಚುನಾವಣಾ ಆಯುಕ್ತರು ಚಾವ್ಲಾರನ್ನು ವಜಾಮಾಡಬೇಕು ಎಂದು ರಾಷ್ಟ್ರಪತಿಗಳನ್ನು ಕೋರಿದ್ದರು.

ಚಾವ್ಲಾ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಪರಾಮರ್ಶೆ ನಡೆಸದೇ ಇದ್ದರೆ, ರಾಷ್ಟ್ರವು ಚುನಾವಣೆಗೆ ಸಿದ್ಧವಾಗುತ್ತಿರುವ ವೇಳೆಗೆ, ಗೋಪಾಲಸ್ವಾಮಿಯವರ ನಿವೃತ್ತಿಯ ಬಳಿಕ ಅವರ ಸ್ಥಾನಕ್ಕೆ ಚಾವ್ಲಾರನ್ನು ಮುಖ್ಯಚುನಾವಣಾ ಆಯುಕ್ತರನ್ನಾಗಿ ನೇಮಿಸುವುದು ಅಸಾವಿಂಧಾನಿಕ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸು.ಕೋ ಮೊರೆ ಹೋದ ಸಂಜಯ್ ದತ್
ಅಶಕ್ತರಿಗೆ ರಿಯಾಯಿತಿದರದಲ್ಲಿ ಭೂಮಿ ಮೀಸಲು: ಸು.ಕೋ
'ಜೈ ಹೋ'-ಕಾಂಗ್ರೆಸ್: 'ಹಾರ್ ಹೋ'- ಬಿಜೆಪಿ
ಬಿಜೆಪಿ ಕಾರ್ಯಕರ್ತನ ಕೊಲೆ
ಸರಕಾರಿ ಪ್ರಸಾರ ಕಾರ್ಯಕ್ರಮಕ್ಕೆ ನಿಷೇಧ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಹೊಂದಾಣಿಕೆ