ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 26/11: ಖಾಮ, ಜಹರ್ ಶಾ ನೈಜ ಗುರುತು ಪತ್ತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
26/11: ಖಾಮ, ಜಹರ್ ಶಾ ನೈಜ ಗುರುತು ಪತ್ತೆ
ಮುಂಬೈ ದಾಳಿಯ ತನಿಖಾ ತಂಡವು, ಮೋಸ್ಟ್ ವಾಂಟೆಡ್ ಲಷ್ಕರ್-ಇ-ತೋಯ್ಬಾ ಉಗ್ರರಾಗಿರುವ ಅಬು ಅಲ್ ಖಾಮಾ ಮತ್ತು ಜಹರ್ ಶಾ ಅವರ ನೈಜ ಗುರುತಿನ ಜಾಡು ಹಿಡಿದಿದ್ದು, ಇವರು ಪಾಕಿಸ್ತಾನದ ನಿವಾಸಿಗಳೆಂದು ಪತ್ತೆ ಮಾಡಿದೆ.

ಪಂಜಾಬ್ ಪ್ರಾಂತ್ಯದ ಮಂಡಿ ತೆಹ್ಶಿಲ್ ನಿವಾಸಿ ಮಜ್‌ಹರ್ ಇಕ್ಬಾಲ್ ಎಂಬಾತನನ್ನು ಲಷ್ಕರೆ ಸಂಘಟನೆಯು "ಅಬು ಅಲ್ ಖಾಮ' ಎಂಬ ಸಂಕೇತ ಹೆಸರಿನಿಂದ ಕರೆಯುತ್ತಿತ್ತು ಎಂದು ಅಧಿಕೃತ ಮಾಹಿತಿಗಳು ಹೇಳಿವೆ.

ಕೇಂದ್ರೀಯ ಭದ್ರತಾ ಸಂಸ್ಥೆಗಳು ಮತ್ತು ಎಫ್‌ಬಿಐ ನಡುವಿನ ಸಹಕಾರದಿಂದಾಗಿ ಈ ಮಹತ್ವದ ಅಂಶ ಪತ್ತೆಯಾಗಿದೆ. ಈ ಎರಡು ಸಂಸ್ಥೆಗಳು ವಿಶ್ವಾದ್ಯಂತ ಬಂಧನಕ್ಕೀಡಾಗಿರುವ ಲಷ್ಕರೆ ಉಗ್ರರ ವಿಸ್ತೃತ ತನಿಖೆ ನಡೆಸಿರುವ ಫಲವಾಗಿ ಅಬು ಅಲ್ ಖಾಮನ ಗುರುತು ಪತ್ತೆಯಾಗಿದೆ.

ಇನ್ನೊಬ್ಬ ಲಷ್ಕರೆ ಉಗ್ರ ಜಹರ್ ಶಾ‌ನ ನಿಜ ಹೆಸರು ಅಬ್ದುಲ್ ವಾಜಿದ್ ಎಂಬುದಾಗಿದ್ದು, ಈತನೂ ಪಂಜಾಬ್ ಪ್ರಾಂತ್ಯದ ಶೇಖ್‌ಪುರ ಜಿಲ್ಲೆಯ ನಿವಾಸಿಯಾಗಿದ್ದಾನೆ.

ಅಬು ಅಲ್ ಖಾಮ ಮುಂಬೈ ದಾಳಿ ನಡೆಸಿರುವ ಉಗ್ರರಿಗೆ ತರಬೇತಿ ನೀಡುವ ಜವಾಬ್ದಾರಿ ವಹಿಸಿದ್ದ. ಅಮ್ಜದ್ ಸೇರಿದಂತೆ ಹಲವು ಅಲಿಯಾಸ್‌ಗಳನ್ನು ಹೊಂದಿರುವ ಈತ ಕೆಂಪು ಕೋಟೆ ಎನ್‌ಕೌಂಟರ್, ಅಕ್ಷರಧಾಮ ದೇವಾಲಯದಲ್ಲಿ ದಾಳಿ ಮತ್ತು 2005ರಲ್ಲಿ ದೀಪಾವಳಿ ವೇಳೆ ದೆಹಲಿಯಲ್ಲಿ ನಡೆಸಿರುವ ಸರಣಿ ಬಾಂಬ್ ಸ್ಫೋಟಕ್ಕೂ ಈತನೇ ಕಾರಣವಾಗಿದ್ದಾನೆ.

ಜಮ್ಮು ಕಾಶ್ಮೀರ ಹೊರತುಪಡಿಸಿದಂತೆ ಭಾರತದ ಉಳಿದೆಡೆ ಲಷ್ಕರ್ ಕಾರ್ಯಾಚರಣೆಗಳ ಜವಾಬ್ದಾರಿಯನ್ನೂ ಇಕ್ಬಾಲ್ ವಹಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಾವ್ಲಾ ನೇಮಕಾತಿ ವಿರುದ್ಧ ಸು.ಕೋಗೆ ಅರ್ಜಿ
ಸು.ಕೋ ಮೊರೆ ಹೋದ ಸಂಜಯ್ ದತ್
ಅಶಕ್ತರಿಗೆ ರಿಯಾಯಿತಿದರದಲ್ಲಿ ಭೂಮಿ ಮೀಸಲು: ಸು.ಕೋ
'ಜೈ ಹೋ'-ಕಾಂಗ್ರೆಸ್: 'ಹಾರ್ ಹೋ'- ಬಿಜೆಪಿ
ಬಿಜೆಪಿ ಕಾರ್ಯಕರ್ತನ ಕೊಲೆ
ಸರಕಾರಿ ಪ್ರಸಾರ ಕಾರ್ಯಕ್ರಮಕ್ಕೆ ನಿಷೇಧ