ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಂಗ್ರೆಸ್-ಎಸ್ಪಿ ಮೈತ್ರಿ ಲಟಕ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್-ಎಸ್ಪಿ ಮೈತ್ರಿ ಲಟಕ್!
ಉತ್ತರಪ್ರದೇಶ ಲೋಕಸಭಾ ಕ್ಷೇತ್ರಗಳಿಗೆ ಏಕಪಕ್ಷೀಯವಾಗಿ 24 ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್‌ನ ಕ್ರಮದಿಂದ ವ್ಯಗ್ರಗೊಂಡಿರುವ ಸಮಾಜವಾದಿ ಪಕ್ಷವು ಕಾಂಗ್ರೆಸ್‌ನೊಂದಿಗಿನ ತನ್ನ ಮೈತ್ರಿಯನ್ನು ಮುರಿದಿರುವುದಾಗಿ ಘೋಷಿಸಿದೆ.

"ಯಾವುದೇ ಕಠಿಣ ಶಬ್ದಗಳನ್ನು ಬಳಸಲು ನಾನು ಇಚ್ಛಿಸುವುದಿಲ್ಲ. ಆದರೆ, ಮೈತ್ರಿ ಮುರಿದಿದೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ 24 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ ದಿನವೇ ಮೈತ್ರಿಯ ಮರಣವಾರ್ತೆ ಬರೆಯಲಾಗಿದೆ" ಎಂದು ಎಸ್ಪಿಯ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಅತಿಹೆಚ್ಚು ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದ ಒಟ್ಟು 80 ಸ್ಥಾನಗಳಲ್ಲಿ ಕಾಂಗ್ರೆಸ್ ಕನಿಷ್ಠ 25 ಸ್ಥಾನಗಳಿಗೆ ಪಟ್ಟು ಹಿಡಿದಿದ್ದರೆ, ಎಸ್ಪಿಯು ಗರಿಷ್ಠ 17 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿತ್ತು.

ಯಾವುದೇ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳು ತಾನು ಗೆದ್ದಿರುವ ಸ್ಥಾನಗಳನ್ನು ಮೈತ್ರಿಯ ಹೆಸರಿನಲ್ಲಿ ಬಿಟ್ಟುಕೊಡುವುದಿಲ್ಲ ಎಂದಿರುವ ಸಿಂಗ್, ಕಾಂಗ್ರೆಸ್‌ ಉತ್ತಮವಾದ ಎಲ್ಲವೂ ಬೇಕು ಎಂಬ ಇಚ್ಚೆ ವ್ಯಕ್ತಪಡಿಸುತ್ತದೆ ಎಂದು
ದೂರಿದ್ದಾರೆ.

ಮಾತುಕತೆಗಳು ನಡೆಯುತ್ತಿರುವಂತೆಯೇ ಎಸ್ಪಿಯು ಏಕಪಕ್ಷೀಯವಾಗಿ 62 ಅಭ್ಯರ್ಥಿಗಳನ್ನು ಘೋಷಿಸಿರುವ ಕ್ರಮಕ್ಕೆ ತಿರುಗೇಟು ಎನ್ನುವಂತೆ ಕಾಂಗ್ರೆಸ್ ಬುಧವಾರ ತನ್ನ 24 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಆದರೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸ್ಫರ್ಧಿಸುವ ರಾಯ್‌ಬರೇಲಿ ಹಾಗೂ ಅಮೇಠಿ ಕ್ಷೇತ್ರಗಳಲ್ಲಿ ಎಸ್ಪಿಯು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಮೈತ್ರಿ ಇದ್ದರೂ, ಇಲ್ಲದಿದ್ದರೂ ಇಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಅಮರ್ ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಲ್ಯ ಬಿಡ್: ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ
ಮುಂದಿನ ವಾರ ಲಂಕೆಗೆ ವೈದ್ಯಕೀಯ ತಂಡ
ಆಡ್ವಾಣಿ-ಶೇಖಾವತ್ ಭೇಟಿ, ಊಟ
ಅಂಧರಿಗೆ ವೆಬ್‌ಸೈಟ್
ಅಸ್ಸಾಂನಲ್ಲಿ ಬಿಜೆಪಿ-ಎಜೆಪಿ ಮೈತ್ರಿ
ಗಾಂಧೀಜಿ ವಸ್ತುಗಳು ಭಾರತಕ್ಕೆ ಬರಲಿ: ಪಿಎಂ