ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಯಾರಿಗೆ ಬೆಂಬಲ ಸ್ಪಷ್ಟಪಡಿಸಿ: ಸೇನೆಗೆ ಬಿಜೆಪಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯಾರಿಗೆ ಬೆಂಬಲ ಸ್ಪಷ್ಟಪಡಿಸಿ: ಸೇನೆಗೆ ಬಿಜೆಪಿ
ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸುವ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂಬುದಾಗಿ ಮಹಾರಾಷ್ಟ್ರ ಬಿಜೆಪಿಯು ಶಿವಸೇನೆಯನ್ನು ಒತ್ತಾಯಿಸಿದೆ. ಶಿವಸೇನೆಯು ಶರದ್ ಪವಾರ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿಯು ಈ ಸ್ಪಷ್ಟನೆ ಕೇಳಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಮುಂದೆ, ರಾಜ್ಯಾಧ್ಯಕ್ಷ ನಿತಿನ್ ಗಡ್ಕಾರಿ ಮತ್ತು ಎಂಎಲ್‌ಸಿ ವಿನೋದ್ ತಾವಡೆ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಕರೆದ ತುರ್ತು ಸಭೆಯಲ್ಲಿ ಸೇನೆಯು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂಬುದಾಗಿ ಕೇಳಲು ನಿರ್ಧರಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಿವಸೇನೆಯು ಪ್ರಧಾನಿ ಸ್ಥಾನಕ್ಕೆ ಮರಾಠಿ ಮಾತನಾಡುವ ವ್ಯಕ್ತಿಗೆ ಆದ್ಯತೆ ನೀಡಲಿದೆ ಎಂಬುದಾಗಿ ಶಿವಸೇನೆಯ ವಕ್ತಾರ ಸಂಜಯ್ ರಾವುತ್ ನೀಡಿರುವ ಹೇಳಿಕೆಯಿಂದ ಬಿಜೆಪಿಗೆ ಇರಿಸುಮುರಿಸುಂಟಾಗಿದೆ. ಗಡ್ಕಾರಿ ಅವರು ಈ ಹೇಳಿಕೆಗೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋಪಾಲಸ್ವಾಮಿ ವಿರುದ್ಧ ಕಹಿಇಲ್ಲ: ಚಾವ್ಲ
ಕಾಂಗ್ರೆಸ್-ಎಸ್ಪಿ ಮೈತ್ರಿ ಲಟಕ್!
ಮಲ್ಯ ಬಿಡ್: ಬೆನ್ನು ತಟ್ಟಿಕೊಳ್ಳುತ್ತಿರುವ ಸರ್ಕಾರ
ಮುಂದಿನ ವಾರ ಲಂಕೆಗೆ ವೈದ್ಯಕೀಯ ತಂಡ
ಆಡ್ವಾಣಿ-ಶೇಖಾವತ್ ಭೇಟಿ, ಊಟ
ಅಂಧರಿಗೆ ವೆಬ್‌ಸೈಟ್