ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಡಪಕ್ಷಗಳಿಗೆ ಸವಾಲು ಹಾಕಿದ ವೆಂಕಯ್ಯ ನಾಯ್ಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡಪಕ್ಷಗಳಿಗೆ ಸವಾಲು ಹಾಕಿದ ವೆಂಕಯ್ಯ ನಾಯ್ಡು
ಎಡಪಕ್ಷಗಳು ತಮ್ಮ ದ್ವಂದ್ವ ನಡೆಯಿಂದ ಜನತೆಯನ್ನು ಮೂರ್ಖರಾಗಿಸುವುದರ ಬದಲಿಗೆ, ಕಾಂಗ್ರೆಸ್‌ನೊಂದಿಗೆ ಚುನಾವಣಾ ನಂತರದ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ದೃಢಹೇಳಿಕೆಯನ್ನು ನೀಡಲಿ ಎಂಬುದಾಗಿ ಹಿರಿಯ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಸವಾಲು ಹಾಕಿದ್ದಾರೆ.

"ಕಾಂಗ್ರೆಸ್ ಮತ್ತು ಬಿಜೆಪಿಯ ವಿರುದ್ಧ ಸಮಾನವಾಗಿ ಹೋರಾಡುತ್ತೇವೆ ಎಂದು ಎಡಪಕ್ಷದ ನಾಯಕರು ಹೇಳುತ್ತಾರೆ. ಆದರೆ, ಚುನಾವಣೆಯ ಬಳಿಕ ಅವರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವುದು ಖಚಿತ. ಎಡಪಕ್ಷಗಳ ಮಾತನ್ನು ನಂಬಬೇಕಿದ್ದರೆ, ಚುನಾವಣಾ ನಂತರದ ಅವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಾಯ್ಡು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯದಿಂದಾಗಿ ಉಂಟಾಗಿರುವ 'ಸರ್ವಾಂಗೀಣ ನಿರಾಸೆ ಮತ್ತು ನೀರಸತೆ'ಯನ್ನು ಪಕ್ಷವು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳಲಿದೆ ಎಂದು ನಾಯ್ಡು ತಿಳಿಸಿದರು.

ಕರ್ನಾಟಕ ಹೊರತು ಪಡಿಸಿದರೆ, ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಗೆ ಅವಕಾಶವಿಲ್ಲ ಎಂಬ ವಿರೋಧಿಗಳ ಹೇಳಿಕೆಯನ್ನು ಅಲ್ಲಗಳೆದ ಅವರು ಆಂಧ್ರಪ್ರದೇಶದಲ್ಲಿ ಪಕ್ಷವು ಸ್ವತಂತ್ರವಾಗಿ ಸ್ಫರ್ಧಿಸಲಿದೆ ಎಂದು ನುಡಿದರು.

ಚಿರಂಜೀವಿ ಅವರ ಪ್ರಜಾರಾಜ್ಯಂ ಜತೆಗೆ ಒಪ್ಪಂದದ ಸಾಧ್ಯತೆಯನ್ನು ಅವರು ಈ ಸಂದರ್ಭದಲ್ಲಿ ತಳ್ಳಿಹಾಕಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ, ಟಿಎಂಸಿ ನಡುವೆ ರಹಸ್ಯ ಒಪ್ಪಂದ: ಸಿಪಿಐ
ಜಾಹೀರಾತು ದುಡ್ಡು ಕಕ್ಕಲು ಚು.ಆಯೋಗದ ತಾಕೀತು
ತಮಿಳ್ನಾಡಿನಲ್ಲಿ ದಲಿತರಿಬ್ಬರ ಕೊಚ್ಚಿ ಕೊಲೆ
ತಾರಾ ಪ್ರಚಾರಕರು ಆಯೋಗದ ಸೂಕ್ಷ್ಮ ಪರಿಶೀಲನೆಯಲ್ಲಿ
ಮುಂಬೈ ಪೊಲೀಸರಿಂದ ಪಾಕ್‌ಗೆ ಉತ್ತರ ಸಿದ್ದ
ಮಾಲೆಗಾಂವ್ ಆರೋಪಿಗೆ ಚುನಾವಣಾ ಸ್ಫರ್ಧಾ ಬಯಕೆ