ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೋರ್ಟ್ ದಯೆಯಿಂದ ಅರ್ಜಿ ಹಾಕಿದ 16 ವರ್ಷದ ಬಳಿಕ ಉದ್ಯೋಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋರ್ಟ್ ದಯೆಯಿಂದ ಅರ್ಜಿ ಹಾಕಿದ 16 ವರ್ಷದ ಬಳಿಕ ಉದ್ಯೋಗ
ರಾಜಸ್ಥಾನ ಹೈಕೋರ್ಟಿನ ದಯೆಯಿಂದಾಗಿ ಕೆಲಸಕ್ಕೆ ಅರ್ಜಿ ಗುಜರಾಯಿಸಿದ 16 ವರ್ಷಗಳ ಬಳಿಕ ವ್ಯಕ್ತಿಯೊಬ್ಬ ಉದ್ಯೋಗ ಪಡೆಯುವಂತಾಗಿದೆ. ನ್ಯಾಯನಿರ್ಣಯದಲ್ಲಿನ ವಿಳಂಬಕ್ಕಾಗಿ ವ್ಯಕ್ತಿಯೊಬ್ಬನ ಹಕ್ಕನ್ನು ನಿರಾಕರಿಸಲಾಗದು ಎಂದು ನ್ಯಾಯಾಲಯ ತೀರ್ಪು ನೀಡಿರುವ ಕಾರಣ ನತ್‌ಮಲ್ ಲಾಲ್ ಬಿಶ್ನೋಯಿ ಎಂಬಾತ 1992ರಲ್ಲಿ ಅರ್ಜಿಸಲ್ಲಿಸಿದ್ದ ಉದ್ಯೋಗವನ್ನು 2009ರಲ್ಲಿ ಪಡೆಯುವಂತಾಗಿದೆ.

ಬಿಕನೇರ್‌ನ ಬಾರ್ಡರ್ ಹೋಮ್ ಗಾರ್ಡ್ಸ್‌ನ ತೃತೀಯ ಬೆಟಾಲಿಯನ್‌ಗೆ ಈತ ಗಾರ್ಡ್ ಹುದ್ದೆಗಾಗಿ 1992ರಲ್ಲಿ ಅರ್ಜಿಸಲ್ಲಿಸಿದ್ದರು. ಇವರ ಸಂದರ್ಶನದ ವೇಳೆ ವೈದ್ಯಕೀಯ ಪರಿಕ್ಷೆಯಲ್ಲಿ ಮೊದಲಿಗೆ ನಪಾಸು ಎಂದು ಘೋಷಿಸಲಾಗಿತ್ತು. ಬಳಿಕ ನ್ಯಾಯಾಲಯದ ಆದೇಶದ ಪ್ರಕಾರ ಮರುವೈದ್ಯಕೀಯ ಪರೀಕ್ಷೆ ನಡೆಸಿ ಪಾಸು ಎಂದು ಘೋಷಿಸಲಾಗಿತ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ನಪಾಸು ಕಾರಣದಲ್ಲಿ ನಿರಾಕರಿಸಿದ್ದ ಉದ್ಯೋಗ ನೀಡಿರಲಿಲ್ಲ.

ಬಿಶ್ನೋಯಿ ಅವರು, 1997ರಲ್ಲೇ ರಿಟ್ ಅರ್ಜಿ ಸಲ್ಲಿಸಿದ್ದರೂ, 2009ರ ಫೆ.19ರಂದು ಅದು ಅಂತಿಮ ವಿಚಾರಣೆಗೆ ಬಂದಿತ್ತು. ಈ ಹುದ್ದೆಗೆ ಜಾಹೀರಾತು ನೀಡಿ 16 ವರ್ಷ ಕಳೆದಿರುವ ಕಾರಣ ಬಿಶ್ನೋಯಿ ಯಾವುದೇ ನೇಮಕ ಇಲ್ಲವೇ ಪರಿಹಾರಕ್ಕೆ ಅರ್ಹರಲ್ಲ ಎಂದು ರಾಜ್ಯದ ಪರವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಈ ಸುದೀರ್ಘ ಅವಧಿಯ ಬಳಿಕ ಅಭ್ಯರ್ಥಿಯು ಹುದ್ದೆಗೆ ಅರ್ಹರಲ್ಲ ಹಾಗೂ ಅವರು ಹುದ್ದೆಗೆ ಅಗತ್ಯವಿರುವ ವಯೋಮಿತಿಯಡಿ ಬರುವುದಿಲ್ಲ ಎಂದೂ ವಾದಿಸಿದ್ದರು.

ಆದರೆ, ನ್ಯಾಯಮೂರ್ತಿ ಗೋವಿಂದ ಮಾಥೂರ್ ಅವರು ಬಿಶ್ನೋಯಿಯನ್ನು ಅದೇ ಬೆಟಾಲಿಯನ್‌ಗೆ ಸೇರ್ಪಡೆಗೊಳಿಸುವಂತೆ ರಾಜ್ಯಸರ್ಕಾರಕ್ಕೆ ನೋಟಿಸು ನೀಡಿದ್ದಾರೆ ಮಾತ್ರವಲ್ಲ, ಈತ ಅರ್ಜಿ ಸಲ್ಲಿಸಿದ್ದ ಬ್ಯಾಚಿನ ಇತರ ವ್ಯಕ್ತಿಗಳನ್ನು ನೇಮಿಸಿಕೊಂಡ ದಿನಾಂಕದಿಂದ ಅನ್ವಯವಾಗುವಂತೆ ನೇಮಿಸಿಕೊಳ್ಳಬೇಕು ಎಂದು ಆದೇಶ ನೀಡಿದ್ದಾರೆ.

ಇದಲ್ಲದೆ, ಬಿಶ್ನೋಯಿ ಅವರು ಹಿರಿತನ, ಭಡ್ತಿ, ವೇತನ ನಿಗದಿ, ವೇತನ ಪರಿಷ್ಕರಣೆ ಮುಂತಾದ ಎಲ್ಲಾ ಅನುಕೂಲಗಳನ್ನು ಪಡೆಯಲು ಅರ್ಹರು ಎಂದೂ ನ್ಯಾಯಲಯ ಹೇಳಿದೆ. ಆದರೆ ಸಂಪೂರ್ಣ ವೇತನದ ಬದಲಿಗೆ ವೇತನದ ಅರಿಯರ್ಸ್ ಎಂಬಂತೆ ಒಂದು ಲಕ್ಷ ರೂಪಾಯಿ ಇಡಿಗಂಟು ನೀವಂತೆ ಆದೇಶ ನೀಡಿದೆ.

ನ್ಯಾಯಾಲಯದ ಮೇಲೆ ವಿಶ್ವಾಸವಿರಿಸಿ ತನ್ನ ಹಕ್ಕಿಗಾಗಿ ಹೋರಾಡುವ ವ್ಯಕ್ತಿಗಳಿಗೆ ನೋವುಂಟು ಮಾಡುವ ಬದಲಿಗೆ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ನ್ಯಾಯಾಲಯ ನಿರ್ವಹಣೆ ವಿಧಾನಗಳಿಗೆ ಸುಧಾರಣೆ ತರುವ ಕುರಿತು ಚಿಂತಿಸಬೇಕಾಗಿದೆ ಎಂದೂ ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ಬಿಶ್ನೋಯಿ ಭಾಗದಿಂದ ಯಾವುದೇ ತಪ್ಪಿಲ್ಲ. ಅವರು ಸೂಕ್ತ ಸಮಯದಲ್ಲೇ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ವಿಳಂಬವಾಗಿರುವುದು ನ್ಯಾಯಾದಾನ ವ್ಯವಸ್ಥೆಯಿಂದಾಗಿ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರತಿಭಟನಾ ಕರೆನೀಡಿದವರು ನಷ್ಟಭರ್ತಿಮಾಡಲಿ: ಸು.ಕೋ
ತೃತೀಯರಂಗ ಚುನಾವಣೆಯ ತನಕವೂ ಬಾಳದು: ಗುಜ್ರಾಲ್
ಪ್ರಧಾನಿಯಾಗಲು ಆಡ್ವಾಣಿಗೆ ಉಮಾ ಬೆಂಬಲ
ಯಾವುದೇ ಧರ್ಮವನ್ನು ದೂಷಿಸಿಲ್ಲ, ಕ್ಷಮೆಯಾಚಿಸಬೇಕಿಲ್ಲ: ವರುಣ್
ಭಾಷಣಕ್ಕೆ ಕ್ಷಮೆ ಯಾಚಿಸಿದ ವರುಣ್ ಗಾಂಧಿ
ಪ್ರತಿಹುಡುಗಿಯನ್ನು ಲಕ್ಷಾಧಿಪತಿಯಾಗಿಸುವ ಆಡ್ವಾಣಿ ಕನಸು