ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನ್ಯಾನೋ 'ಬಿಡುಗಡೆ' ನೀತಿ ಸಂಹಿತೆ ಉಲ್ಲಂಘನೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ 'ಬಿಡುಗಡೆ' ನೀತಿ ಸಂಹಿತೆ ಉಲ್ಲಂಘನೆ!
ನ್ಯಾನೋ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಕ್ಕಾಗಿ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ! ಅಚ್ಚರಿಪಡಬೇಕಾಗಿಲ್ಲ. ಪಶ್ಚಿಮ ಬಂಗಾಳದಿಂದ ವರ್ಗಾವಣೆಗೊಂಡ ಬಳಿಕ ನ್ಯಾನೋ ಕಾರು ತಯಾರಿಕಾ ಘಟಕಕ್ಕೆ ಜಮೀನು ಒದಗಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಸಹಾಯ ಮಾಡಲೆಂದೇ ಈ ಕಾರನ್ನು ಚುನಾವಣೆಗೆ ಮುನ್ನ ಬಿಡುಗಡೆ ಮಾಡಲಾಗಿದೆ ಎಂಬುದು ಬಿಹಾರದ ವಕೀಲರೊಬ್ಬರ ವಾದ.

ಇಲ್ಲಿನ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಅರ್ಜಿ ಹಾಕಿದ್ದು ಪಾಟ್ನಾ ಹೈಕೋರ್ಟಿನ ವಕೀಲೆ ಶ್ರುತಿ ಸಿಂಗ್. ನ್ಯಾನೋ ಕಾರು ಬಿಡುಗಡೆಯು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ, ಈ ಮೂಲಕ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂಬುದು ಆಕೆಯ ವಾದ. ನ್ಯಾನೋದ ವಾಣಿಜ್ಯ ವಾಹನಗಳ ಬಿಡುಗಡೆಗೆ ತಡೆ ವಿಧಿಸಬೇಕೆಂದೂ ಆಕೆ ಕೋರಿದ್ದಾರೆ.

1 ಲಕ್ಷ ರೂ. ಕಾರಿನ ಬಿಡುಗಡೆಯನ್ನು ಉದ್ದೇಶಪೂರ್ವಕವಾಗಿ ಚುನಾವಣೆಗಳ ಮೇಲೆ ಪ್ರಭಾವ ಬೀರುವ ನಿಟ್ಟಿನಲ್ಲಿಯೇ ಬಿಡುಗಡೆ ಮಾಡಲಾಗಿದೆ ಎಂದಾಕೆ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಸಿಖ್ ವಿರೋಧಿ' ವರುಣ್: ಸಿಡಿ ವಿತರಿಸಲಿರುವ ಕಾಂಗ್ರೆಸ್
ಅಲಹಾಬಾದ್ ಹೈಕೋರ್ಟಿನಿಂದ ವರುಣ್ ಅರ್ಜಿ ವಜಾ
ಅಸ್ಸಾಮಿ ಪತ್ರಿಕಾ ಸಂಪಾದಕನ ಗುಂಡಿಕ್ಕಿ ಹತ್ಯೆ
ಕುಪ್ವಾರ ಗುಂಡಿನಕಾಳಗ ಅಂತ್ಯ, 17 ಉಗ್ರರ ಸಾವು
ರಾಷ್ಟ್ರದ ಜನತೆಗೆ ಎಲ್ಲವೂ ಅರ್ಥವಾಗುತ್ತೆ: ಪ್ರಿಯಾಂಕ
ವಿನಯ್ ಕಟಿಯಾರ್‌ಗೆ ನೋಟಿಸ್