ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎನ್‌ಡಿಎ ಗೆದ್ದರೆ ಸ್ವಿಸ್ ಬ್ಯಾಂಕಲ್ಲಿದ್ದ ಹಣ ರಾಷ್ಟ್ರಕ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್‌ಡಿಎ ಗೆದ್ದರೆ ಸ್ವಿಸ್ ಬ್ಯಾಂಕಲ್ಲಿದ್ದ ಹಣ ರಾಷ್ಟ್ರಕ್ಕೆ
PTI
ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ, ಸ್ವಿಸ್ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ 25,000 ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ಕಪ್ಪುಹಣವನ್ನು ದೇಶಕ್ಕೆ ಮರಳಿ ತಂದು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂಬುದಾಗಿ ಬಿಜೆಪಿ ನಾಯಕ, ಎನ್‌ಡಿಎ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ.

ರಾಜಕಾರಣಿಗಳು ಸೇರಿದಂತೆ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇರಿಸಿದ ಹಣವನ್ನು ಭಾರತಕ್ಕೆ ಮರಳಿ ತಂದರೆ, ರಾಷ್ಟ್ರದ ಎಲ್ಲಾ ಆರು ಲಕ್ಷ ಗ್ರಾಮಗಳು ತಲಾ ನಾಲ್ಕು ಕೋಟಿ ರೂಪಾಯಿಗಳನ್ನು ಪಡೆಯಲಿವೆ ಎಂದು ನುಡಿದರು. ಅವರು ಒರಿಸ್ಸಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಸಮಾವೇಶ ಒಂದರಲ್ಲಿ ಮಾತನಾಡುತ್ತಿದ್ದರು.

ಯುಪಿಎ ಆಡಳಿತದಲ್ಲಿ ಹಣದುಬ್ಬರ, ಭ್ರಷ್ಟಾಚಾರ ಮತ್ತು ಬಡತನವು ರಾಕೆಟ್‌ನಂತೆ ಮೇಲೇರಿದೆ ಎಂದು ಅವರು ದೂರಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಹಣದುಬ್ಬರ, ಭ್ರಷ್ಟಾಚಾರ ಮತ್ತು ಬಡತನಗಳಲ್ಲಿ ದಾಖಲೆಗಳನ್ನು ಮುರಿದಿದ್ದು, ಹೊಸ ಎತ್ತರವನ್ನು ತಲುಪಿದೆ ಎಂದು ಹೇಳಿದ ಅವರು, ರಾಷ್ಟ್ರದಲ್ಲಿ ಬಡತನ ತಾಂಡವವಾಡುತ್ತಿದ್ದು, ಬಡ ರೈತರನ್ನು ನಿರ್ಲಕ್ಷ್ಯಿಸಿದ ಪರಿಣಾಮ ಹೆಚ್ಚಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.

ಸಾಲದಲ್ಲಿ ಮುಳುಗಿದ ರೈತರು ಮಾತ್ರವಲ್ಲದೆ, ತಪ್ಪು ನೀತಿಗಳಿಂದಾಗಿ ಅಗತ್ಯವಸ್ತುಗಳ ಬೆಲೆ ಏರಿಕೆ ಹಾಗೂ ಬಡತನದ ಬೇಗೆಯಿಂದ ಬಳಲುತ್ತಿರುವ ಇತರ ಕ್ಷೇತ್ರಗಳ ಜನತೆಯು ಸಹ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ ಎಂದವರು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ರಾಹುಲ್ ಗಾಂಧಿ
ವ್ಯಕ್ತಫಲಿತಾಂಶ ತೋರುವ ತನಕ ಪಾಕ್ ಜತೆ ಮಾತಿಲ್ಲ: ಸಿಂಗ್
ಸಂಜಯ್ ಚುನಾವಣಾ ಸ್ಫರ್ಧಾಕಾಂಕ್ಷೆ ಠುಸ್!
ವರುಣ್ ವಿರುದ್ಧ ಎನ್ಎಸ್ಎ ಸರಿಯಲ್ಲ: ಮುಲಾಯಂ
ವಕೀಲೆ ಮನೆ ಮೇಲೆ ದಾಳಿ: 9 ಶಿವಸೈನಿಕರ ಬಂಧನ
ಗಡ್ಡಧಾರಣೆಗೆ ಮುಸ್ಲಿಂ ವಿದ್ಯಾರ್ಥಿಗೆ ಅವಕಾಶ ನಿರಾಕರಿಸಿದ ಸು.ಕೋ