ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಸಬ್‌ಗೆ ಅಂಜಲಿಯೇ ವಕೀಲರು: ಮಹಾ ಸರ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್‌ಗೆ ಅಂಜಲಿಯೇ ವಕೀಲರು: ಮಹಾ ಸರ್ಕಾರ
ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್ ಪರ ನಿಯೋಜಿತ ವಕೀಲೆ ಅಂಜಲಿ ವಾಘಮಾರೆ ಅವರೇ ವಾದಿಸಲಿದ್ದಾರೆ ಎಂದು ಮಹಾರಾಷ್ಟ್ರ ಗೃಹಸಚಿವ ಜಯಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಕಸಬ್ ಪರ ವಾದಿಸಲು ವಿಶೇಷ ನ್ಯಾಯಾಲಯವು ಅಂಜಲಿ ಅವರನ್ನು ಸೋಮವಾರ ನೇಮಿಸಿತ್ತು. ಇದನ್ನು ಪ್ರತಿಭಟಿಸಿದ್ದ ಶಿವಸೇನಾ ಸೈನಿಕರು ಅಂಜಲಿ ನಿವಾಸದ ಮೇಲೆ ದಾಳಿ ನಡೆಸಿ ತೀವ್ರ ಒತ್ತಡ ತಂದ ಹಿನ್ನೆಲೆಯಲ್ಲಿ, ಅವರು ಕಸಬ್‌ನನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದರು. ದಾಳಿಯ ಸಂಬಂಧ ಮಂಗಳವಾರ ಒಂಬತ್ತು ಶಿವಸೈನಿಕರನ್ನು ಬಂಧಿಸಲಾಗಿದೆ.

ಶಿವಸೇನಾ ಕಾರ್ಯಕರ್ತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಪೊಲೀಸ್ ಅಧಿಕಾರಿಗಳು ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಿ ವರ್ಲಿಯಲ್ಲಿರುವ ಅವರ ನಿವಾಸಕ್ಕೆ ಸೂಕ್ತ ಭದ್ರತೆಯ ಭರವಸೆ ನೀಡಿದ್ದು, ಕಸಬ್ ವಕೀಲರಾಗಿ ಮುಂದುವರಿಯುವಂತೆ ವಕೀಲೆ ಅಂಜಲಿಯವರ ಮನಒಲಿಸಿದ್ದಾರೆ.

ಏತನ್ಮಧ್ಯೆ, ವಿಶೇಷ ಸರ್ಕಾರಿ ವಕೀಲರಾಗಿರುವ ಉಜ್ವಲ್ ನಿಕಂ ಅವರು ವಕೀಲರ ವಿರುದ್ಧ ಪ್ರತಿಭಟನೆಯು ನ್ಯಾಯಾಂಗ ನಿಂದನೆಯಾದೀತು ಎಂದು ಹೇಳಿದ್ದಾರೆ.

ಅಂಜಲಿ ಪತಿ ರಮೇಶ್ ವಾಘಮಾರೆ ಅವರು ಪೊಲೀಸ್ ಅಧಿಕಾರಿಯಾಗಿದ್ದಾರೆ. ಇಂತಹ ಪ್ರಮುಖ ಪ್ರಕರಣದ ಆರೋಪಿ ಪರ ವಕೀಲರು ಲಭ್ಯವಾಗದೆ ವಿಚಾರಣೆ ವಿಳಂಬವಾಗುವುದು ಬೇಡ ಎಂಬ ಹಿನ್ನೆಲೆಯಲ್ಲಿ ತಾನು ಕಸಬ್ ಪರ ವಾದಿಸಲು ಒಪ್ಪಿರುವುದಾಗಿ ಅಂಜಲಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೇರಳದಲ್ಲಿ ರಾಜನಾಥ್ ಸಿಂಗ್
ಅಸ್ಸಾಂ: ಬಾಂಬ್ ಸ್ಫೋಟಕ್ಕೆ ಓರ್ವ ಬಲಿ
ಎನ್‌ಡಿಎ ಗೆದ್ದರೆ ಸ್ವಿಸ್ ಬ್ಯಾಂಕಲ್ಲಿದ್ದ ಹಣ ರಾಷ್ಟ್ರಕ್ಕೆ
ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ರಾಹುಲ್ ಗಾಂಧಿ
ವ್ಯಕ್ತಫಲಿತಾಂಶ ತೋರುವ ತನಕ ಪಾಕ್ ಜತೆ ಮಾತಿಲ್ಲ: ಸಿಂಗ್
ಸಂಜಯ್ ಚುನಾವಣಾ ಸ್ಫರ್ಧಾಕಾಂಕ್ಷೆ ಠುಸ್!