ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರುಣ್ ಕೊಲೆ ಸಂಚು: ಬಂಧಿತ ಮಲಬಾರಿಯಿಂದ ಬಯಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರುಣ್ ಕೊಲೆ ಸಂಚು: ಬಂಧಿತ ಮಲಬಾರಿಯಿಂದ ಬಯಲು
PTI
ಭಾರತೀಯ ಜನತಾ ಪಕ್ಷದ ಪಿಲಿಭಿತ್ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಅವರನ್ನು ಕೊಲ್ಲುವ ಸಂಚು ಹೂಡಲಾಗಿದೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ರಾತೋರಾತ್ರಿ ಪಿಲಿಭಿತ್‌ನಿಂದ 200 ಕಿಲೋಮೀಟರ್ ದೂರದ ಇತಾ ಜೈಲಿಗೆ ವರ್ಗಾಯಿಸಲಾಗಿದೆ.

ಪಿಲಿಭಿತ್ ಜಿಲ್ಲಾ ಜೈಲಿನ ಅಧಿಕಾರಿ ಮುಖೇಶ್ ಆರೋರಾ ಅವರು ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ವರುಣ್ ಗಾಂಧಿಯವರನ್ನು ಭದ್ರತಾ ಕಾರಣಗಳಿಗಾಗಿ ರಾತ್ರಿ ಸುಮಾರು ಒಂದೂವರೆ ಗಂಟೆಯ ವೇಳೆಗೆ ಇತಾ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಬಂಧನಕ್ಕೀಡಾದ ಮಲಬಾರಿ
ಸೋಮವಾರ ಮಂಗಳೂರಿನ ಉಳ್ಳಾಲದಲ್ಲಿ ಬಂಧನಕ್ಕೀಡಾಗಿರುವ ಭೂಗತ ದೊರೆ ಚೋಟಾ ಶಕೀಲ್‌ನ ಸಹಚರ ಶಾರ್ಪ್ ಶೂಟರ್ ರಶೀದ್ ಮಲಬಾರಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾನೆ. ಖಚಿತ ಮಾಹಿತಿಯಾಧಾರದಲ್ಲಿ ಮಲಬಾರಿ ಹಾಗೂ ಇತರ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು. ಇದೀಗ ವರುಣ್ ಗಾಂಧಿಯನ್ನು ಮುಗಿಸಲು ಹೂಡಿರುವ ಸಂಚು ಬಯಲಾಗುತ್ತಲೇ ಈ ಏಕಾಏಕಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವರುಣ್ ಗಾಂಧಿ ಪಿಲಿಭಿತ್‌ನಲ್ಲಿ ಬಂಧನಕ್ಕೀಡಾಗಲು ಆಗಮಿಸುವ ವೇಳೆಗೆ ಅವರ ಮೇಲೆ ಗುಂಡೆಸೆಯಲು ಈ ಪಾತಕಿಗಳು ಯೋಜಿಸಿದ್ದರು ಎಂದು ಹೇಳಲಾಗಿದೆ.

ವಿಶ್ವಹಿಂದೂ ಪರಿಷತ್ ಬುಧವಾರ ಸಂಪೂರ್ಣ ಬರೇಲಿ ಬಂದ್‌ಗೆ ಕರೆನೀಡಿದ್ದು, ವರುಣ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿಕೆಯನ್ನು ಪ್ರತಿಭಟಿಸಲು ಮುಂದಾಗಿರುವ ಕೆಲವೇ ಗಂಟೆಗಳ ಮುಂಚಿತವಾಗಿ ಈ ನಾಟಕೀಯ ಬೆಳವಣಿಗೆ ಸಂಭವಿಸಿದೆ.

ಮಾಯಾವತಿ ಸರ್ಕಾರವು ಭಾನುವಾರ ತಡರಾತ್ರಿ ವರುಣ್ ವಿರುದ್ಧ, ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿರುವ ಮತ್ತು ಅವರ ಬಂಧನದ ವೇಳೆ ಗುಂಪು ಗಲಭೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಪ್ರಕರಣ ದಾಖಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌ಗೆ ಅಂಜಲಿಯೇ ವಕೀಲರು: ಮಹಾ ಸರ್ಕಾರ
ಕೇರಳದಲ್ಲಿ ರಾಜನಾಥ್ ಸಿಂಗ್
ಅಸ್ಸಾಂ: ಬಾಂಬ್ ಸ್ಫೋಟಕ್ಕೆ ಓರ್ವ ಬಲಿ
ಎನ್‌ಡಿಎ ಗೆದ್ದರೆ ಸ್ವಿಸ್ ಬ್ಯಾಂಕಲ್ಲಿದ್ದ ಹಣ ರಾಷ್ಟ್ರಕ್ಕೆ
ಕಾಂಗ್ರೆಸ್ ಪಕ್ಷ ಬಡವರ ಪಕ್ಷ: ರಾಹುಲ್ ಗಾಂಧಿ
ವ್ಯಕ್ತಫಲಿತಾಂಶ ತೋರುವ ತನಕ ಪಾಕ್ ಜತೆ ಮಾತಿಲ್ಲ: ಸಿಂಗ್