ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಓಟಿಗಾಗಿ ನೋಟಿನಲ್ಲೀಗ ಬಿಜೆಪಿಯ ಜಸ್ವಂತ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಓಟಿಗಾಗಿ ನೋಟಿನಲ್ಲೀಗ ಬಿಜೆಪಿಯ ಜಸ್ವಂತ್
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಗಗಾರಿಯಾ ಜಿಲ್ಲೆಯಲ್ಲಿ ತನ್ನ ಪುತ್ರನ ಪರ ಚುನಾವಣಾ ಪ್ರಚಾರ ವೇಳೆ ಹಿರಿಯ ಬಿಜೆಪಿ ನಾಯಕ ಜಸ್ವಂತ್ ಸಿಂಗ್ 100 ರೂಪಾಯಿ ನೋಟುಗಳನ್ನು ಹಂಚಿದ್ದಾರೆ ಎಂದು ಆಪಾದಿಸಲಾಗಿದೆ.

ನೋಟು ಹಂಚುವ ಮೂಲಕ ಜಸ್ವಂತ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ರಾಮಸರ್‌ನ ತಹಶೀಲ್ದಾರರು ದೂರು ದಾಖಲಿಸಿದ್ದಾರೆ ಎಂದು ಬಾರ್ಮರ್ ಜಿಲ್ಲಾ ದಂಡಾಧಿಕಾರಿ ರವಿ ಜೈನ್ ತಿಳಿಸಿದ್ದಾರೆ.

ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ವೀಡಿಯೋ ಟೇಪನ್ನು ಪರೀಕ್ಷಿಸಲಾಗುತ್ತಿದೆ ಎಂದು ಜೈನ್ ಹೇಳಿದ್ದಾರೆ. ಅವರು ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ತನ್ನ ಪುತ್ರನ ಪರ ಭಾರೀ ಪ್ರಚಾರಕ್ಕೆ ಇಳಿದಿರುವ ಸಿಂಗ್, ಬಾರ್ಮರ್ ಜಿಲ್ಲೆಯ ಗದ್ರಾರೋಡ್ ಹಾಗೂ ರಾಮಸರ್ ತೇಹ್ಶಿಲ್ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದ್ದಾರೆ.

ಆಡ್ವಾಣಿ ಪ್ರತಿಕ್ರಿಯೆ
ಜಸ್ವಂತ್ ಸಿಂಗ್ ಅವರು ನಿಜವಾಗಿಯೂ ತಪ್ಪು ಎಸಗಿದ್ದಾರೆ ಎಂದಾದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಕ್ಷದ ವರಿಷ್ಠ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವಭಯೋತ್ಪಾದನೆಯ ಕೇಂದ್ರ ಪಾಕ್: ಪ್ರಧಾನಿ ಸಿಂಗ್
ವರುಣ್ ಕೊಲೆ ಸಂಚು: ಬಂಧಿತ ಮಲಬಾರಿಯಿಂದ ಬಯಲು
ಕಸಬ್‌ಗೆ ಅಂಜಲಿಯೇ ವಕೀಲರು: ಮಹಾ ಸರ್ಕಾರ
ಕೇರಳದಲ್ಲಿ ರಾಜನಾಥ್ ಸಿಂಗ್
ಅಸ್ಸಾಂ: ಬಾಂಬ್ ಸ್ಫೋಟಕ್ಕೆ ಓರ್ವ ಬಲಿ
ಎನ್‌ಡಿಎ ಗೆದ್ದರೆ ಸ್ವಿಸ್ ಬ್ಯಾಂಕಲ್ಲಿದ್ದ ಹಣ ರಾಷ್ಟ್ರಕ್ಕೆ