ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 2ನೆ ಹಂತ: ಶೇ.55ರಷ್ಟು ಮತದಾನ, ಬಹುತೇಕ ಶಾಂತಿಯುತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2ನೆ ಹಂತ: ಶೇ.55ರಷ್ಟು ಮತದಾನ, ಬಹುತೇಕ ಶಾಂತಿಯುತ
ಕರ್ನಾಟಕ ಸೇರಿದಂತೆ ಹನ್ನೆರಡು ರಾಜ್ಯಗಳಲ್ಲಿ ನಡೆದ ಎರಡನೆ ಹಂತದ ಲೋಕಸಭಾ ಚುನಾವಣೆಯಲ್ಲಿ ಅಂದಾಜು ಸುಮಾರು ಶೇ.55ರಷ್ಟು ಮತದಾನವಾಗಿದೆ. ಕರ್ನಾಟಕದಲ್ಲಿ ಶೇ. 51ರಷ್ಟು ಮತದಾನವಾಗಿದೆ ಎಂಬುದಾಗಿ ಪ್ರಾಥಮಿಕ ವರದಿಗಳು ಹೇಳಿವೆ. ನಿಖರ ವರದಿಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ನಕ್ಸಲ್ ಪೀಡಿತ ಜಾರ್ಖಂಡ್ ಹೊರತು ಪಡಿಸಿದರೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಆಂಧ್ರಪ್ರದೇಶ ಹಾಗೂ ಅಸ್ಸಾಮ್‌ನಲ್ಲಿ ಸಣ್ಣಪುಟ್ಟ ಗಲಭೆಗಳು ನಡೆದಿವೆ.

ತ್ರಿಪುರಾದಲ್ಲಿ ಶೇ.78ರಷ್ಟು ಗರಿಷ್ಠ ಮತದಾನವಾಗಿದ್ದರೆ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಕನಿಷ್ಠ ಶೇ.44ರಷ್ಟು ಮತದಾನವಾಗಿದೆ. ಎರಡನೆಯ ಹಂತದಲ್ಲಿ 121 ಮಹಿಳೆಯರು ಸೇರಿದಂತೆ 2,041 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೊಡ್ಡಿಕೊಂಡಿದ್ದಾರೆ.

ಜಾರ್ಖಂಡ್‌ನಲ್ಲಿ ಶೇ.50, ಆಂಧ್ರ ಶೇ.58, ಬಿಹಾರ ಶೇ.44, ಅಸ್ಸಾಂ ಶೇ.60 ತ್ರಿಪುರಾದಲ್ಲಿ ಶೇ.78 ಹಾಗೂ ಕರ್ನಾಟಕದಲ್ಲಿ ಶೇ. 51ರಷ್ಟು ಮತದಾರರು ಮತಗಟ್ಟೆಯತ್ತ ಮುಖಮಾಡಿದ್ದಾರೆ.

ಆಂಧ್ರಪ್ರದೇಶದ 20, ಅಸ್ಸಾಮಿನ 11, ಬಿಹಾರದ 12, ಗೋವಾದ ಎರಡು, ಜಮ್ಮು ಕಾಶ್ಮೀರದ ಒಂದು, ಕರ್ನಾಟಕದ 17, ಮಧ್ಯಪ್ರದೇಶದ 13, ಮಹಾರಾಷ್ಟ್ರದ 25, ಒರಿಸ್ಸಾದ 11, ತ್ರಿಪುರಾದ ಎರಡು, ಉತ್ತರಪ್ರದೇಶದ 17 ಮತ್ತು ಜಾರ್ಖಂಡ್‌ನ ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಇದರೊಂದಿಗೆ ಆಂಧ್ರಪ್ರದೇಶದಲ್ಲಿ(140) ಹಾಗೂ ಒರಿಸ್ಸಾದಲ್ಲಿ (77) ವಿಧಾನಸಭಾ ಸ್ಥಾನಗಳಿಗೆ ದ್ವಿತೀಯ ಹಾಗೂ ಕೊನೆಯ ಹಂತದ ಮತದಾನ ನಡೆಯಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರ್ನಾಟಕ, ಮತದಾನ, ಲೋಕಸಭೆ, Election, Lok Sabha, Karnaktaka
ಮತ್ತಷ್ಟು
ಬಿಜೆಪಿ ಕುಟುಂಬ ಒಂದರ ಗುಲಾಮವಲ್ಲ: ರಾಜ್‌ನಾಥ್
ವಿದ್ಯಾರ್ಥಿನಿ ಸಾವು: ಶಾಲಾಡಳಿತ ವಿರುದ್ಧ ಆಕ್ರೋಶ
ನಕ್ಸಲ್ ಪೀಡಿತ ಜಾರ್ಖಂಡ್‌ನಲ್ಲಿ ಮತದಾನ ಅಂತ್ಯ
ಯುಪಿಎಗೆ ಎಡಪಕ್ಷಗಳ ಆಶೀರ್ವಾದ ಬೇಕು: ಪವಾರ್
ಅಸ್ಸಾಂನಲ್ಲಿ ಮತಚಲಾಯಿಸಿದ ಸಿಂಗ್ ದಂಪತಿ
26/11: ಅಂತುಳೆ, ರಾಣೆ ಹೇಳಿಕೆ ಪಡೆಯಲು ಅನುಮತಿ