ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೋನಿಯಾ ಜಯಾಲಲಿತಾ 'ಕೈ' ಹಿಡಿತಾರಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋನಿಯಾ ಜಯಾಲಲಿತಾ 'ಕೈ' ಹಿಡಿತಾರಾ?
PTI
ಚೆನ್ನೈ ಮತ್ತು ಪುದುಚೇರಿಯಲ್ಲಿ ಬುಧವಾರ ನಿಗದಿಯಾಗಿದ್ದ ಸೋನಿಯಾ ಮೇಡಮ್ ಭಾಷಣವನ್ನು ಕರುಣಾನಿಧಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂದೂಡಿರುವುದಾಗಿ ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

"ಮುಖ್ಯಮಂತ್ರಿಯರಿಗೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಾರದು. ಇದು ಒಂದು ಜಂಟಿ ಸಭೆಯಾಗಿ ನಿಗದಿಯಾಗಿದ್ದ ಕಾರಣ ಮುಂದೂಡಲಾಗಿದೆ. ಸೋನಿಯಾ ಗಾಂಧಿ ಹಾಗೂ ಕರುಣಾನಿಧಿಯವರ ಅನುಕೂಲವನ್ನು ಗಮನದಲ್ಲಿರಿಸಿಕೊಂಡು ಹೊಸ ದಿನವನ್ನು ನಿಗದಿ ಮಾಡಲಾಗುವುದು ಎಂಬುದಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಬುಧವಾರ ಮಧ್ಯಾಹ್ನ ಪುದುಚೇರಿ ಹಾಗೂ ಸಾಯಂಕಾಲ ಚೆನ್ನೈಯಲ್ಲಿ ಸೋನಿಯಾ ಭಾಷಣ ನಿಗದಿಯಾಗಿತ್ತು. ತಮಿಳ್ನಾಡಿನ ಎಲ್ಲಾ 39 ಕ್ಷೇತ್ರಗಳಲ್ಲಿ ಮೇ 13ರ ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.


ಭದ್ರತಾ ಕಾರಣ
ಆದರೆ, ಭದ್ರತಾ ಕಾರಣಗಳಿಂದಾಗಿ ಸೋನಿಯಾ ಭೇಟಿ ರದ್ದಾಗಿದೆ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಶ್ರೀಲಂಕಾ ತಮಿಳರ ಪರ ಸಂಘಟನೆಗಳು ಸೋನಿಯಾ ಭೇಟಿ ವೇಳೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದವು. ಸೋನಿಯಾ ಗಾಂಧಿ ಲಂಕಾ ತಮಿಳರಿಗಾಗಿ ಏನೂ ಮಾಡಿಲ್ಲ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
PTI

ಸೋನಿಯಾ ಜಯಾ ಕೈಹಿಡಿತಾರಾ?
ಆದರೆ, ಕಾಂಗ್ರೆಸ್ ಎಐಎಡಿಎಂಕೆಯೊಡನೆ ಒಪ್ಪಂದ ನಡೆಸಲು ಉತ್ಸುಕವಾಗಿದೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಹಬ್ಬಿದೆ. ಇದೇ ಕಾರಣದಿಂದ ಡಿಎಂಕೆಯಿಂದ ದೂರ ಸರಿಯಲು ಇಚ್ಚಿಸಿರುವ ಕಾಂಗ್ರೆಸ್ 'ಅಮ್ಮನಿಗೆ' ಹತ್ತಿರವಾಗುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದ್ದು, ಇದೇ ಕಾರಣಕ್ಕೆ ಸೋನಿಯಾ ಮೇಡಮ್ ಪ್ರವಾಸ ರದ್ದಾಗಿದೆ ಎಂದು ಹೇಳಲಾಗುತ್ತಿದೆ. ಎಐಎಡಿಎಂಕೆ ಈಗ ಎಡಪಕ್ಷಗಳೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಯುಪಿಎಯಲ್ಲಿದ್ದ ಪಿಎಂಕೆ ಈಗ ಎಐಎಡಿಎಂಕೆಯ ಮಿತ್ರಪಕ್ಷ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
164 ಕ್ರಿಮಿನಲ್‌ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ರಾಷ್ಟ್ರ ಭಕ್ತ ಮುಸ್ಲಿಮರಿಗೆ ಠಾಕ್ರೆ ಸಲಾಂ
ಸಿಂಗ್‌ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ
ನಿಲ್ಡಾಣದ ಏರೋ ಬ್ರಿಡ್ಜ್‌ಗೆ ವಿಮಾನ ಢಿಕ್ಕಿ
ಬಸ್ ವಿದ್ಯುತ್ ತಂತಿಗೆ ಸ್ಫರ್ಶ: 17 ಬಲಿ