ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರಧಾನಿ ಆಡ್ವಾಣಿಯೇ ಹೊರತು ಮೋದಿಯಲ್ಲ: ನಿತೀಶ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಆಡ್ವಾಣಿಯೇ ಹೊರತು ಮೋದಿಯಲ್ಲ: ನಿತೀಶ್
ಎನ್‌ಡಿಎಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಅವರೇ ಹೊರತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅಲ್ಲ ಎಂಬುದಾಗಿ ಎನ್‌ಡಿಎಯ ಮಿತ್ರಪಕ್ಷ ಜೆಡಿಯು ನಾಯಕ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.

ಆಡ್ವಾಣಿ ಪ್ರಧಾನಿಯಾದರೆ ಮಾತ್ರ ತಮ್ಮ ಪಕ್ಷ ಎನ್‌ಡಿಎಯನ್ನು ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿರುವ ಅವರು ಮೋದಿಯವರಿಗೆ ನಮ್ಮ ವೋಟ್ ಇಲ್ಲ ಎಂಬುದಾಗಿ ದೃಢಪಡಿಸಿದ್ದಾರೆ.

"ನಾವು ಆಡ್ವಾಣಿ ಅವರಿಗೆ ಮಾತ್ರ ವೋಟ್ ಮಾಡುತ್ತೇವೆ. ಆಡ್ವಾಣಿ ಹೊರತು ಪಡಿಸಿದರೆ ಇತರರು ನಮಗೆ ತಿಳಿದಿಲ್ಲ" ಎಂಬುದಾಗಿ ಪಾಟ್ನಾದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಬಿಹಾರದ ಮುಖ್ಯಮಂತ್ರಿ ನುಡಿದರು.

ಮೋದಿ ಅವರನ್ನು ಆಡ್ವಾಣಿಯವರ ಉತ್ತರಾಧಿಕಾರಿಯಾಗಿ ಬಿಜೆಪಿಯು ಬಿಂಬಿಸುತ್ತಿರುವ ಹೊತ್ತಿನಲ್ಲೇ ನಿತೀಶ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ ಹಾಗೂ ಅರುಣ್ ಶೌರಿ ಅವರುಗಳು ನರೇಂದ್ರ ಮೋದಿಯವರು ಪ್ರಧಾನಿ ಸ್ಥಾನವನ್ನೇರುವ ಅರ್ಹತೆಗಳನ್ನು ಪಡೆದಿದ್ದಾರೆ ಎಂಬರ್ಥದ ಮಾತುಗಳನ್ನು ಇತ್ತೀಚೆಗೆ ಹೇಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಾನು ನಿರಪರಾಧಿ: ನರಹಂತಕ ಉಗ್ರ ಕಸಬ್
ಮತಹಾಕಲು ಇಷ್ಟವಿಲ್ಲದಿದ್ದರೆ, ಫಾರಂ 49-o ತುಂಬಿ
ಸೋನಿಯಾ ಜಯಾಲಲಿತಾ 'ಕೈ' ಹಿಡಿತಾರಾ?
164 ಕ್ರಿಮಿನಲ್‌ಗಳು, 259 ಕೋಟ್ಯಾಧಿಪತಿಗಳು ಸ್ಫರ್ಧೆಯಲ್ಲಿ
ಕಾಂಗ್ರೆಸ್ ಎಡಕ್ಕೆ ಹೊರಳಿದರೆ, ನಾವು ಹೊರಕ್ಕೆ: ಮಮತಾ
ರಾಷ್ಟ್ರ ಭಕ್ತ ಮುಸ್ಲಿಮರಿಗೆ ಠಾಕ್ರೆ ಸಲಾಂ