ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಮತ ಚಲಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಯಲ್ಲಿ ಪ್ರಿಯಾಂಕಾ ಗಾಂಧಿ ಮತ ಚಲಾವಣೆ
PTI
ನಾಲ್ಕನೆ ಹಂತದ ಮತದಾನ ಗರುವಾರ ಮುಂಜಾನೆ ಆರಂಭಗೊಂಡಿದ್ದು ಘಟಾನುಘಟಿಗಳು ಮತಚಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕಿ, ಸೋನಿಯಾ ಪುತ್ರಿ, ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ತನ್ನ ಪತಿ ರಾಬರ್ಟ್ ವಾದ್ರ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇದಲ್ಲದೆ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಾಲ್, ಶೇಖರ್ ಸುಮನ್ ಸೇರಿದಂತೆ ಹಲವು ಪ್ರಮುಖರು ಮತಚಲಾಯಿಸಿದ್ದಾರೆ.

ತನ್ನ 35 ಲೋಧಿ ಎಸ್ಟೇಟ್ ನಿವಾಸದಿಂದ ಸುಮಾರು 20 ಮೀಟರ್ ದೂರದಲ್ಲಿರುವ ವಿದ್ಯಾಭವನ್ ಮಹಾವಿದ್ಯಾಲಯ ಮತಗಟ್ಟೆಗೆ ಆಗಮಿಸಿದ ಪ್ರಿಯಾಂಕ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಂತೆ ಸೀರೆ ಧರಿಸಿರಲಿಲ್ಲ. ಅವರು ಕಪ್ಪು ಬಣ್ಣದ ಜೀನ್ಸ್ ಹಾಗೂ ಕಡು ನೀಲಿ ಬಣ್ಣದ ಟಾಪ್ ತೊಟ್ಟಿದ್ದರು. ಮುಂಜಾನೆ ಸುಮಾರು 7.10ರ ವೇಳೆಗೆ ಆಗಮಿಸಿ ಮತಚಲಾಯಿಸಿದರು.

ದೆಹಲಿಯ ಏಳೂ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ತಾನು ಹಾಗೆ ಭಾವಿಸಿರುವುದಾಗಿ ನುಡಿದರು.

ಮತಚಲಾಯಿಸಿರೆಂದು ಜನತೆಗೆ ಮನವಿ ಮಾಡಿದ ಅವರು ಪ್ರಧಾನಿ ಮನಮನೋಹನ್ ಸಿಂಗ್ ಅವರ ರಾಷ್ಟ್ರದ ಅಭಿವೃದ್ಧಿಗಾಗಿ ಮಾಡಿರುವ ಕಾರ್ಯಗಳನ್ನು ಪರಿಗಣಿಸಿ ತಮ್ಮ ಪಕ್ಷಕ್ಕೆ ಮತಚಲಾಯಿಸುವಂತೆ ನುಡಿದರು.

ರಾಷ್ಟ್ರಾದ್ಯಂತ ಕಾಂಗ್ರೆಸ್ ಉತ್ತಮ ಫಲಿತಾಂಶ ದಾಖಲಿಸಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದ ಅವರು, ನಿಮ್ಮ ಸಹೋದರ ಬಿಂಬಿಸಿರುವಂತೆ ಚುನಾವಣೋತ್ತರದಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಮಿತ್ರರ ಅವಶ್ಯಕತೆ ಬೀಳಲಿದೆಯೇ ಎಂಬ ಪ್ರಶ್ನೆಗೆ, ಮೇ. 16 ಬಳಿಕ ನೋಡೋಣ ಎಂದಷ್ಟೆ ನುಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
4ಹಂತದ ಚುನಾವಣೆಗೆ ಬಿರುಸಿನ ಮತದಾನ ಆರಂಭ
ಚುನಾವಣೆ ಹಿನ್ನೆಯಲ್ಲಿ ಭಾರೀ ಭದ್ರತೆ
ನಕ್ಸಲ್ ದಾಳಿಗೆ ಜವಾನ ಸಹಿತ 11 ಮಂದಿ ಬಲಿ
ಪ್ರಧಾನಿ ಆಡ್ವಾಣಿಯೇ ಹೊರತು ಮೋದಿಯಲ್ಲ: ನಿತೀಶ್
ನಾನು ನಿರಪರಾಧಿ: ನರಹಂತಕ ಉಗ್ರ ಕಸಬ್
ಮತಹಾಕಲು ಇಷ್ಟವಿಲ್ಲದಿದ್ದರೆ, ಫಾರಂ 49-o ತುಂಬಿ