ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಿತೀಶ್ ಜಾತ್ಯತೀತತೆ ಬಣ್ಣ ಬಯಲು: ಲಾಲೂ ಲೇವಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿತೀಶ್ ಜಾತ್ಯತೀತತೆ ಬಣ್ಣ ಬಯಲು: ಲಾಲೂ ಲೇವಡಿ
PTI
ನಿತೀಶ್ ಕುಮಾರ್ ಅವರನ್ನು ಒಬ್ಬ ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸಿದ್ದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾವದ್ ಅವರು, ಬಿಹಾರದ ಮುಖ್ಯಮಂತ್ರಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಳಿಕ ಅವರ 'ಜಾತ್ಯತೀತ ಮುಖವಾಡ'ದ ಬಣ್ಣವು ಬಯಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

"ನಿತೀಶ್ ಯಾವಾಗಲೂ ಹೇಳೊದೊಂದು ಮಾಡೋದೊಂದು. ಅವರೊಬ್ಬ ಗೊಂದಲಕಾರಿ ವ್ಯಕ್ತಿ. ನಿತೀಶ್ ಅವರಿಗೆ ಜಾತ್ಯತೀತ ಎಂಬ ಸರ್ಟಿಫಿಕೇಟ್ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯಂತಹವರಿಗೆ ಈಗ ನಿತೀಶ್ ಏನೆಂಬ ಅರಿವಾಗಿರಬಹುದು" ಎಂಬುದಾಗಿ ಪಾಟ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲೂ ಹೇಳಿದ್ದಾರೆ,

"ನಿತೀಶ್ ಅವರು ನವದೆಹಲಿಯಲ್ಲಿ ನಡೆದ ಎನ್‌ಡಿಎ ರ‌್ಯಾಲಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ತಾನು ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲು ತಯಾರಾಗಿಲ್ಲ ಎಂದು ಹೇಳಿದ್ದರು. ಆದರೆ ಬಿಹಾರದಲ್ಲಿ ಯಾವಾಗ ಚುನಾವಣೆಗಳು ಮುಗಿಯಿತೋ ನಿತೀಶ್ ತನ್ನ ನೈಜ ಬಣ್ಣವನ್ನು ಬಿಚ್ಚಿಟ್ಟಿದ್ದಾರೆ ಎಂದು ಲಾಲೂ ದೂರಿದರು. ನಾಲ್ಕನೆ ಹಂತದ ಚುನಾವಣೆ ಬಳಿಕ ಲಾಲೂ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿರುವುದು ಇದೇ ಪ್ರಥಮವಾಗಿದೆ.

ಚುನಾವಣೆ ವೇಳೆ ತನ್ನ ಬಗ್ಗೆ ಮಾಧ್ಯಮಗಳು ಕೆಟ್ಟ ಪ್ರಚಾರ ನೀಡಿವೆ ಎಂದು ಮುನಿಸಿಕೊಂಡಿದ್ದ ಲಾಲೂ, ಮಾಧ್ಯಮಗಳು ಅವರನ್ನು ಕೆದಕಿದ್ದರೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಚುನಾವಣೆ ದಿನವೂ ಮತದಾನದ ಬಳಿಕ ಮಾಧ್ಯಮಗಳತ್ತ ಮುಖ ತಿರುವಿ ನಡೆದಿದ್ದರು.

ಭಾನುವಾರ ಲೂಧಿಯಾನದಲ್ಲಿ ನಡೆದ ಎನ್‌ಡಿಎ ಬೃಹತ್ ರ‌್ಯಾಲಿಯಲ್ಲಿ ನಿತೀಶ್ ಕುಮಾರ್ ಹಾಗೂ ಮೋದಿ ಪರಸ್ಪರ ಕೈಕುಲುಕಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಮೋದಿ ಅವರು ಬಿಹಾರದಲ್ಲಿ ನಿತೀಶ್ ಅವರು ಮಾಡಿರುವ ಕೃಷಿ ಕ್ರಾಂತಿಯನ್ನು ಹೊಗಳಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಜಂಖಾನ್ ವಿರುದ್ಧ ಆಯೋಗಕ್ಕೆ ಜಯಪ್ರದಾ ದೂರು
ಸೋನಿಯಾ ಎದುರೇ ಎಲ್ಟಿಟಿಇ ಹೊಗಳಿದ ಕರುಣಾನಿಧಿ
ಚಟರ್ಜಿಯವರನ್ನು ಮಿಸ್ ಮಾಡುತ್ತಿರುವ ಬುದ್ಧದೇವ್
ನಿವೃತ್ತಿ ನಂತರವೂ ಇಲಾಖಾ ತನಿಖೆ ನಡೆಸಬಹುದು: ಸು.ಕೋ
ಪಂಜಾಬಿನಲ್ಲಿ ಎನ್‌ಡಿಎ ದಿಢೀರ್ ತಾಕತ್ತು ಪ್ರದರ್ಶನ
ಅಮರ್‌ ಸಿಂಗ್‌ ಆಸ್ಪತ್ರೆಗೆ ದಾಖಲು