ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಗದೆ ಶಿಸ್ತಿನಿಂದ ವರ್ತಿಸಿ: ಕಸಬ್‌ಗೆ ನ್ಯಾಯಾಧೀಶರ ತಾಕೀತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಗದೆ ಶಿಸ್ತಿನಿಂದ ವರ್ತಿಸಿ: ಕಸಬ್‌ಗೆ ನ್ಯಾಯಾಧೀಶರ ತಾಕೀತು
PTI
ಮುಂಬೈ ಉಗ್ರರ ದಾಳಿ ಸಾಕ್ಷಿಗೆ ಇನ್ನಷ್ಟು ಪುಷ್ಟಿ ದೊರೆತಿದೆ. ದಾಳಿಯಲ್ಲಿ ಸೆರೆಸಿಕ್ಕ ಆರೋಪಿ ಮಹಮ್ಮದ್ ಅಜ್ಮಲ್ ಅಮೀರ್ ಕಸಬ್ ಹಾಗೂ ಆತನ ಸಹಚರ ಅಬು ಇಸ್ಮಾನಿಲ್ ಅವರು ಜನರನ್ನು ಕೊಲ್ಲಲು ಬಳಸಿದ್ದಾರೆ ಎನ್ನಲಾದ ಎರಡು ಎಕೆ47 ರೈಫಲ್‌ಗಳನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯಾಯಾಲಯ ಸಾಕ್ಷಿಯಾಗಿ ಗುರುತಿಸಿದ ಈ ಅಸ್ತ್ರಗಳನ್ನು ನೋಡಿ ಕಸಬ್ ಜೋರಾಗಿ ನಕ್ಕು ತಲೆಯನ್ನು ಅಲ್ಲಾಡಿಸಿದ್ದಾನೆ. ಈ ಅಸ್ತ್ರಗಳನ್ನು ತಾನು ಬಳಸಿಲ್ಲ. ಹಾಗೂ ಇದು ತನ್ನದಲ್ಲ ಎಂದು ಕಸಬ್ ಆ ಮೂಲಕ ಹೇಳಿದ್ದಾನೆ ಎಂದು ವರದಿಯಾಗಿದೆ.

ಕಸಬ್‌ನ ಈ ವರ್ತನೆ ನ್ಯಾಯಾಧೀಶರಾದ ಎಂ.ಎಲ್.ತಹಲಿಯಾನಿ ಅವರನ್ನು ಸಿಟ್ಟಿಗೆಬ್ಬಿಸಿದೆ. ಅವರು ಕಸಬ್‌ಗೆ ನ್ಯಾಯಾಲಯದಲ್ಲಿ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಿ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಪ್ರತಿ ಬಾರಿಯೂ ಯಾವುದೇ ವಿಷಯಕ್ಕೂ ಜೋರಾಗಿ ನಗುತ್ತಿದ್ದ ಕಸಬ್‌ ನಡತೆಯಿಂದ ನ್ಯಾಯಾಧೀಶರು ಕೋಪಗೊಂಡಿದ್ದು, ಇಂತಹ ಹುಚ್ಛುತನಗಳನ್ನು ಬಿಟ್ಟು, ಸ್ವಲ್ಪವಾದರೂ ಗಂಭೀರವಾಗಿ ಶಿಸ್ತಿನಿಂದ ಇರುವುದನ್ನು ಕಲಿತರೆ ಒಳ್ಳೆಯದು ಎಂದೂ ಕಸಬ್‌ಗೆ ತಾಕೀತು ಮಾಡಿದ್ದಾರೆ.

ಇಬ್ಬರು ಶಂಕಿತ ಉಗ್ರವಾದಿಗಳ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಭಾಸ್ಕರ್ ಕದಮ್ ಹೇಳುವ ಪ್ರಕಾರ, ಆ ಎರಡೂ ರೈಫಲ್‌ಗಳನ್ನು ಕಸಬ್‌ ಹಾಗೂ ಇಸ್ಮಾಯಿಲ್ (ಕಸಬ್ ಬಂಧಿತನಾದರೆ, ಇಸ್ಮಾಯಿಲ್ ಮರಣ ಹೊಂದಿದ) ಬಳಸುತ್ತಿದ್ದುದು ಸ್ಪಷ್ಟ. ಇದರಲ್ಲಿ ಒಂದು ಎಕೆ 47 ರೈಫಲ್ ಕಸಬ್ ಬಳಿಯಿದ್ದರೆ, ಇನ್ನೊಂದು ರೈಫಲ್ ಇಸ್ಮಾಯಿಲ್ ಬಳಿಯಿತ್ತು. ಇಸ್ಮಾಯಿಲ್ ಬಳಿಯಿದ್ದ ರೈಫಲ್ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅಶೋಕ್ ಕಾಮತೆ ಅವರಿಗೆ ಸೇರಿದ್ದು. ಅಶೋಕ್ ಅವರು ಅದೇ ದಿನ ಕ್ಯಾಮಾ ಆಸ್ಪತ್ರೆ ಬಳಿ ನಡೆದ ಕದನದಲ್ಲಿ ಸಾವಿಗೀಡಾಗಿದ್ದರು ಎಂದ ನ್ಯಾಯಾಧೀಶರಿಗೆ ವಿವರಿಸಿರು.

ಕೇವಲ ಇಷ್ಟೇ ಅಲ್ಲ. ಕಸಪ್ ಹಾಗೂ ಇಸ್ಮಾಯಿಲ್ ಬಳಿ ಈ ಎರಡು ರೈಫಲ್ ಹೊರತಾಗಿ 9ಎಂಎಂನ ಎರಡು ಪಿಸ್ತೂಲ್‌ಗಳಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ಪಿಸ್ತೂಲ್ ಪಾಕಿಸ್ತಾನದಲ್ಲಿ ತಯಾರಾಗಿದ್ದು, ಅದರಲ್ಲಿ ಡೈಮಂಡ್ ನಡಿ ಫ್ರಾಂಡಿಯರ್ ಆರ್ಮ್ಸ್ ಕಂಪೆನಿ, ಪೇಶಾವರ್ ಎಂದು ಸಂಸ್ಥೆಯ ಹೆಸರೂ ಬರೆಯಲಾಗಿತ್ತು ಎಂದು ಕದಮ್ ವಿವರಿಸಿದರು.

ಪಾಕಿಸ್ತಾನಲ್ಲಿ ತಯಾರಾಗಿರುವ ಪಿಸ್ತೂಲ್‌ಗಳಿಂದಾಗಿ ಇವರು ಪಾಕಿಸ್ತಾನದಿಂದ ಅಸ್ತ್ರಗಳನ್ನು ತಂದಿದ್ದರು ಎಂಬುದನ್ನು ಸೂಚಿಸುತ್ತದೆ ಎಂದು ಕಸಬ್ ವಿರೋಧಿ ವಕೀಲರು ವಾದಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇ 16ರಿಂದ ಸರಕಾರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿರುವ ಸೋನಿಯಾ
ಚುನಾವಣೆಯ ನಂತರ ರಾಜಕೀಯ ನಿವೃತ್ತಿ: ಅಮರ್ ಸಿಂಗ್
ಯುಪಿಎ ಆಡಳಿತದಲ್ಲಿ ಮೂರು ಪಟ್ಟು ಬೆಲೆ ಏರಿಕೆ: ಬಿಜೆಪಿ
ಅಂತಿಮ ಹಂತ ಚುನಾವಣೆ: ಪ್ರಚಾರ ಅಂತ್ಯ
ನಕ್ಸಲರ ಅಟ್ಟಹಾಸಕ್ಕೆ 13 ಪೊಲೀಸರು ಬಲಿ
ಪ್ರಧಾನಿ ಲೆಫ್ಟ್ ಟರ್ನ್; ಕಾಂಗ್ರೆಸ್ ಅಸ್ಪೃಶ್ಯ ಅಲ್ಲ: ಎಡರಂಗ