ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಎಳಸಿದ್ದ ಡಿಎಂಕೆ ಕೊನೆಗೂ ಯಾವುದೇ ಅಧಿಕಾರ ಸಿಗದಂತಾಗುವ ಆತಂಕದಿಂದ ಕೊನೆಗೂ ಸಂಪುಟ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದು, ಈ ಕುರಿತು ನಡೆಸಲಾದ ಮಾತುಕತೆ ಫಲ ನೀಡಿದೆ ಎಂದು ಮೂಲಗಳು ತಿಳಿಸಿವೆ. ಒಪ್ಪಂದದ ಅನುಸಾರ ಡಿಎಂಕೆಗೆ 3 ಕ್ಯಾಬಿನೆಟ್ ಹಾಗೂ 4 ರಾಜ್ಯ ಖಾತೆಯ ಸಚಿವ ಪಟ್ಟಗಳು ದೊರೆಯಲಿವೆ ಎಂದು ಮೂಲಗಳು ಹೇಳಿವೆ.
ಮೂಲಗಳ ಪ್ರಕಾರ, ಡಿಎಂಕೆ-ಕಾಂಗ್ರೆಸ್ ನಡುವೆ ಸಹಮತ ಏರ್ಪಟ್ಟಿದ್ದು, ಕರುಣಾನಿಧಿ ಪುತ್ರ, ಮೊದಲ ಬಾರಿ ಸಂಸತ್ ಪ್ರವೇಶಿಸಿದ ಅಳಗಿರಿಗೆ ಆರೋಗ್ಯ ಖಾತೆ, ಎ.ರಾಜಾರಿಗೆ ಭಾರೀ ಕೈಗಾರಿಕೆ, ಕರುಣಾನಿಧಿ ಪುತ್ರಿ ಕಾನಿಮೋಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಜಗದ್ರಕ್ಷಕನ್‌ಗೆ ಪ್ರವಾಸೋದ್ಯಮ ಖಾತೆ, ವಿಜಯನ್‌ಗೆ - ರೈಲ್ವೇ ಸಹಾಯಕ ಖಾತೆ, ಟಿ.ಆರ್,ಬಾಲುಗೆ - ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ದಯಾನಿಧಿ ಮಾರನ್‌ಗೆ ಐಟಿ ಮತ್ತು ಟೆಲಿಕಾಂ ಖಾತೆ ನೀಡಲು ನಿರ್ಧರಿಸಲಾಗಿದೆ. |