ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 25ರೂ ಲಂಚಪಡೆದು ಸಿಕ್ಕಿಬಿದ್ದ ಆರೋಪಿಗೆ ಮುಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
25ರೂ ಲಂಚಪಡೆದು ಸಿಕ್ಕಿಬಿದ್ದ ಆರೋಪಿಗೆ ಮುಕ್ತಿ
ಇಪ್ಪತ್ತೈದು ರೂಪಾಯಿ ಲಂಚಪಡೆದ ಆಪಾದನೆಯಲ್ಲಿ 20 ವರ್ಷಗಳ ಹಿಂದೆ ಬಂಧನಕ್ಕೀಡಾಗಿದ್ದ ಗುಮಾಸ್ತನೊಬ್ಬನನ್ನು ಸುಪ್ರೀಂಕೋರ್ಟ್ ಶುಕ್ರವಾರ ದೋಷಮುಕ್ತಗೊಳಿಸಿದೆ.

"ಪ್ರಾಸಿಕ್ಯೂಶನ್ ಪ್ರಸ್ತುತ ಪಡಿಸಿರುವ ಪುರಾವೆಯು ಗುಣಮಟ್ಟದ್ದೂ ಅಲ್ಲ ಅಥವಾ ವಿಶ್ವಾಸಾರ್ಹವೂ ಅಲ್ಲ, ಇಂತಹ ಪುರಾವೆಯಾಧಾರದಲ್ಲಿ ಶಿಕ್ಷೆ ನೀಡುವುದು ಸುರಕ್ಷಿತವಲ್ಲ" ಎಂಬುದಾಗಿ ವಿ.ಎಸ್. ಸಿರ್ಪುಕರ್ ಹಾಗೂ ಆರ್.ಎಂ. ಲೋಧಾ ಅವರನ್ನೊಳಗೊಂಡ ರಜಾಕಾಲದ ನ್ಯಾಯಾಪೀಠ ಗುಮಾಸ್ತ ಎ. ಸುಬೈರ್ ಎಂಬವರನ್ನು ದೋಷಮುಕ್ತಿಗೊಳಿಸುತ್ತಾ ಹೇಳಿದೆ. ಸುಬೈರ್ ಅವರು ಕೇರಳದ ಉಪ-ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಳದರ್ಜೆಯ ಗುಮಾಸ್ತರಾಗಿದ್ದರು.

ಸುಬೈರ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ 1989ರ ಎಪ್ರಿಲ್ 24ರಂದು ಬಂಧಿಸಲಾಗಿತ್ತು. ಕಚೇರಿಕೆಲಸಕ್ಕಾಗಿ ಬಂದಿದ್ದ ಮುನಾಫ್ ಎಂಬವರ ಬಳಿ 25 ರೂಪಾಯಿ ಲಂಚಕ್ಕಾಗಿ ಒತ್ತಾಯಿಸಿ ಲಂಚಪಡೆಯುತ್ತಿರುವ ವೇಳೆಗೆ ವಿಚಕ್ಷಣದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

ತಿರುವನಂತಪುರಂನ ವಿಚಾರಣಾ ನ್ಯಾಯಾಲಯವು ಸುಬೈರ್‌ಗೆ ಆರು ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿದ್ದು, ಕೇರಳ ಹೈ ಕೋರ್ಟ್ ಶಿಕ್ಷೆಯನ್ನು ದೃಢಪಡಿಸಿತ್ತು. ಆದರೆ, ಈ ಶಿಕ್ಷೆ ಜಾರಿಗೆ ಇವೆರಡು ನ್ಯಾಯಾಲಯಗಳು 15 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದವು.

ಹಲವಾರು ಪುರಾವೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಅಪರಾಧವನ್ನು ಸಾಬೀತುಪಡಿಸುವಂತಹ ಯಾವುದೇ ದಾಖಲೆಗಳಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು ಆರೋಪಿಯನ್ನು ಖುಲಾಸೆಗೊಳಿಸಿದೆ.

ಕೆಳನ್ಯಾಯಾಲಯವು ದೋಷಿ ಎಂಬುದಾಗಿ ನೀಡಿರುವ ತೀರ್ಪನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ "ದಾಖಲೆಯಲ್ಲಿರುವ ಪುರಾವೆಗಳು ಸುಬೈರ್ ಅಪರಾಧ ಸಾಬೀತು ಪಡಿಸಲು ಸಾಕಾಗುವುದಿಲ್ಲ" ಎಂದು ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಂಬಾಜ್: ಹಗಲು ಕರ್ಫ್ಯೂ ಹಿಂತೆಗೆತ
ವಂಶಾಡಳಿತ: ಉಪಮುಖ್ಯಮಂತ್ರಿಯಾಗಿ ಸ್ಟಾಲಿನ್‌ಗೆ ಬಡ್ತಿ
ಪುಟ್ಟಬಾಟಲಿಯಲ್ಲಿ ಅಧಿಕ ಮಧ್ಯದಂತಿದೆ ಸಂಪುಟ: ಅರುಣ್ ಜೇಟ್ಲಿ
ಸಿಂಗ್ ಸಂಪುಟದ 9 ಸಚಿವರಿಗೆ ಅಪರಾಧಿ ಹಿನ್ನೆಲೆ
ನೂತನ ಸಂಪುಟದ ಸಚಿವರು,ಖಾತೆಯ ಸಂಪೂರ್ಣ ವಿವರ
ಆರ್‌ಜೆಡಿಗೆ ಪುನರುಜ್ಜೀವನ ನೀಡಲಿರುವ ಲಾಲೂ