ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲೋಕಸಭೆ: ಮೊದಲದಿನ, ಮೊದಲ ಶೋ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ: ಮೊದಲದಿನ, ಮೊದಲ ಶೋ ಆರಂಭ
ಒಂದು ತಿಂಗಳ ಕಾಲ ಐದು ಹಂತದ ಚುನಾವಣೆ, ಮತಎಣಿಕೆ ಬಳಿಕ ಸಂಪುಟ ರಚನೆ ಈ ಎಲ್ಲ ಹಂತಗಳನ್ನು ದಾಟಿ ಇದೀಗ ಹದಿನೈದನೆ ಲೋಕಸಭೆಯ ಪ್ರಥಮ ಅಧಿವೇಶನ ಆರಂಭಗೊಂಡಿದೆ.

ಅಧಿವೇಶನದಲ್ಲಿ ಪ್ರಥಮವಾಗಿ ನೂತನವಾಗಿ ಆಯ್ಕೆಯಾಗಿರುವ ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸಲು ಆರಂಭಿಸಿದ್ದಾರೆ.

ಲೋಕಸಭಾ ನಾಯಕ ಪ್ರಣಬ್ ಮುಖರ್ಜಿ ಪ್ರಥಮವಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು.

ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸೋನಿಯಾ ಸತ್ಯನಿಷ್ಠೆಯ ಹೆಸರಿಲ್ಲಿ ಪ್ರಮಾಣಮಾಡಿದರು. ಹಿರಿಯ ನಾಯಕಿ ಸುಮಿತ್ರಾ ಮಹಾಜನ್ ಸಂಸ್ಕೃತದಲ್ಲಿ, ಪಿ.ಚಿದಂಬರಂ ತಮಿಳಿನಲ್ಲಿ ಪ್ರಮಾಣ ಮಾಡಿದರು. ಕರ್ನಾಟಕದ ಸಂಸದ, ಕಾನೂನು ಸಚಿವ ವೀರಪ್ಪ ಮೊಯ್ಲಿ ಆಂಗ್ಲ ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಿದರು.

ಹಿರಿಯ ಸಂಸದ ಮಾಣಿಕ್ ರಾವ್ ಗಾವಿತ್ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಸಂಸದೀಯ ಸಮಿತಿಗಳ ಅಧ್ಯಕ್ಷರುಗಳ ಬಳಿಕ ಇತರ ಸಂಸದರು ರಾಜ್ಯವಹಿಯಾಗಿ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ.

ತೃತೀಯ ದಿನದಂದು ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸ್ಪೀಕರ್ ಸ್ಥಾನ ಆಡಳಿತ ಪಕ್ಷಕ್ಕಾದರೆ, ಡೆಪ್ಯುಟಿ ಸ್ಪೀಕರ್ ಸ್ಥಾನ ವಿರೋಧ ಪಕ್ಷ ಪಡೆಯಲಿದೆ. ಕಾಂಗ್ರೆಸ್‌ನ ಮೀರಾ ಕುಮಾರ್ ಅವರು ಸ್ಪೀಕರ್ ಸ್ಥಾನ ವಹಿಸುವುದು ಬಹುತೇಕ ನಿಚ್ಚಳವಾಗಿದೆ.

ಸ್ಪೀಕರ್ ಆಯ್ಕೆ ಪ್ರಕ್ರಿಯೆ ಬುಧವಾರ ನಡೆದರೆ ಗುರುವಾರದಂದು ರಾಷ್ಟ್ರಪತಿಯವರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಜೆಟ್ ಅಧಿವೇಶನವು ಜುಲೈ ಪ್ರಥಮ ವಾರದಲ್ಲಿ ನಡೆಯಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೆರೆ ಮೇಲೆ ಧೂಮಪಾನಕ್ಕೆ ಅಜಾದ್ ಅಡ್ಡಿಇಲ್ಲ
ಸಚಿವೆ ಸ್ಥಾನಕ್ಕೆ ಮೀರಾ ರಾಜೀನಾಮೆ, ಸ್ಪೀಕರ್‌ಗಿರಿ ಹಾದಿ ಸುಗಮ
ಪಾಟ್ನದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ನಿಗೂಢ ಸಾವು
ಬಿಜೆಪಿ: ವಿಪಕ್ಷ ನಾಯಕನಾಗಿ ಆಡ್ವಾಣಿ ಆಯ್ಕೆ
ಪಕ್ಷದ ಹಿನ್ನಡೆಗೆ ಅಡ್ವಾಣಿ ನಾಯಕತ್ವ ಕಾರಣವಲ್ಲ: ವೆಂಕಯ್ಯ
ಪ್ರದೀಪ್ ನಾಯಕ್ ವಾಯುಪಡೆ ಮುಖ್ಯಸ್ಥ