ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕೆಲವರಿಗೆ ಮೀರಾ ಕುಮಾರ್ ಇನ್ನೂ 'ಸ್ಪೀಕರ್ ಸರ್'!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಲವರಿಗೆ ಮೀರಾ ಕುಮಾರ್ ಇನ್ನೂ 'ಸ್ಪೀಕರ್ ಸರ್'!
ಲೋಕಸಭೆಗೆ ಮಹಿಳಾ ಸ್ಪೀಕರ್ ಆಗಿ ಮೀರಾ ಕುಮಾರ್ ಬಂದು ದಾಖಲೆಯೇನೋ ನಿರ್ಮಿಸಿದ್ದಾರೆ. ಆದರೆ ಪುರುಷ ಪ್ರಧಾನ ಲೋಕಸಭೆಯಲ್ಲಿ ಮೀರಾ ಕುಮಾರ್ ಅವರನ್ನು 'ಸ್ಪೀಕರ್ ಸರ್' ಎಂದೇ ಬಾಯ್ತಪ್ಪಿಯೋ ಅಥವಾ ಅಭ್ಯಾಸ ಬಲದಿಂದಲೋ, ಸಂಬೋಧಿಸುವ ಪ್ರಕ್ರಿಯೆ ಮುಂದುವರಿದಿದೆ.

ಸಿಪಿಎಂ ಹಿರಿಯ ಮುಖಂಡ ವಾಸುದೇವ ಆಚಾರ್ಯ ಅವರಂತೂ ಹಲವಾರು ಬಾರಿ ಮೀರಾ ಕುಮಾರ್ ಅವರನ್ನು 'ಸ್ಪೀಕರ್ ಮೇಡಂ' ಎಂಬುದರ ಬದಲ್ 'ಸ್ಪೀಕರ್ ಸರ್' ಎಂದೇ ಸಂಬೋಧಿಸಿ ಪೇಚಿಗೀಡಾದರು.

ಆಡಳಿತ ಪಕ್ಷದವರಲ್ಲದೆ ವಿರೋಧ ಪಕ್ಷದವರೂ ಆಚಾರ್ಯರನ್ನು, 'ಸಭಾಧ್ಯಕ್ಷರ ಪೀಠದಲ್ಲಿರುವುದು ಮೇಡಂ ಸ್ಪೀಕರ್, ಆದುದರಿಂದ ತಿದ್ದಿಕೊಳ್ಳಿ' ಎಂದು ಈ ಕುರಿತು ಎಚ್ಚರಿಸಿದರು. ಆದರೂ ವಾಸುದೇವ ಆಚಾರ್ಯರ ನಾಲಿಗೆ ಕೇಳಬೇಕಲ್ಲ, ಎಂದಿನಂತೆಯೇ 'ಸರ್' ಎಂಬ ಸಂಬೋಧನೆಯೇ ಮುಂದುವರಿಯಿತು. ಕೊನೆಗೂ ಅವರು ಮೇಡಂ ಎಂದು ತಪ್ಪು ತಿದ್ದಿಕೊಳ್ಳುವಲ್ಲಿ ಯಶಸ್ವಿಯೂ ಆದರು.

ಸಮಾಜವಾದಿ ಪಕ್ಷದ ಸಂಸದ ಮುಲಾಯಂ ಸಿಂಗ್ ಯಾದವ್ ಕೂಡ 'ಸ್ಪೀಕರ್ ಮಹೋದಯಾ' ಬದಲು 'ಸ್ಪೀಕರ್ ಮಹೋದಯ್' ಎಂದೇ ಸಂಬೋಧಿಸಿದರು.

ದೇಶದ ಪ್ರಪ್ರಥಮ ಮಹಿಳಾ ಸ್ಪೀಕರ್ ಆಗಿ ಮೀರಾ ಕುಮಾರ್ ಅವರು ಬುಧವಾರ ಅಧಿಕಾರಕ್ಕೇರಿ ಚರಿತ್ರೆ ನಿರ್ಮಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಿಷ್ಪಕ್ಷಪಾತಿಯಾಗಿ ಕಾರ್ಯ ನಿರ್ವಹಿಸುವೆ: ಮೀರಾ
ಶ್ರೀನಗರದಲ್ಲಿ ಕರ್ಫ್ಯೂ, ಸಿಎಂ ಪ್ರತಿಕೃತಿ ದಹನ
ಆಗ್ರಾದಲ್ಲಿ ಸಪ್ತಪದಿ ತುಳಿದ ಅಮೆರಿಕ ಜೋಡಿ
ದಲಿತನಾಯಕಿಯರಿಗೆ ಮಣೆ, ಮಾಯಾಗೆ ಸಡ್ಡು?
ಬರ್ತ್‌ಡೇ ಬಾಯ್ ಕರುಣಾನಿಧಿ, ಡಿಎಂಕೆ ಸಂಭ್ರಮ
ಮಹಿಳಾ ಸ್ಪೀಕರ್ ಆಗಿ ಚರಿತ್ರೆ ಬರೆದ ಮೀರಾ ಕುಮಾರ್