ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಿಜೆಪಿಯಲ್ಲಿ ಭಿನ್ನ ಧ್ವನಿ: ಬೃಜೇಶ್ ಮಿಶ್ರಾ ಸರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯಲ್ಲಿ ಭಿನ್ನ ಧ್ವನಿ: ಬೃಜೇಶ್ ಮಿಶ್ರಾ ಸರದಿ
ಕರ್ನಾಟಕ ಬಿಜೆಪಿಯ ಮಾದರಿಯಲ್ಲಿ ಪಕ್ಷದ ಕೇಂದ್ರೀಯ ಮಟ್ಟದಲ್ಲೂ ಅಸಮಾಧಾನದ ಅಲೆಯು ತೀವ್ರಗೊಳ್ಳುತ್ತಿದ್ದು, ಜಸ್ವಂತ್ ಸಿಂಗ್ ಬಳಿಕ ಇದೀಗ ಮತ್ತೊಬ್ಬ ಹಿರಿಯ ಮುಖಂಡ ಬೃಜೇಶ್ ಮಿಶ್ರಾ ಧ್ವನಿಯೆತ್ತಿದ್ದಾರೆ. ಯುವ ನೇತಾರ ವರುಣ್ ಗಾಂಧಿ ಅವರ 'ದ್ವೇಷ ಭಾಷಣ'ವೇ ಪಕ್ಷಕ್ಕೆ ಮುಳುವಾಯಿತು ಎಂಬುದು ಅವರ ಅಭಿಪ್ರಾಯ.

ಎನ್‌ಡಿಎ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಮಿಶ್ರಾ, ಚುನಾವಣಾ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ವೈಖರಿ ವಿರುದ್ಧ ಕಿಡಿ ಕಾರುತ್ತಾ, ಬಿಜೆಪಿಯು ಅನುಸರಿಸಿದ 'ಋಣಾತ್ಮಕ ರಾಜಕೀಯ'ವನ್ನು ಜನತೆ ಇಷ್ಟಪಡಲಿಲ್ಲ ಎಂದಿದ್ದಾರೆ.

ಎನ್‌ಡಿಟಿವಿಯ 'ವಾಕ್ ದಿ ಟಾಕ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುತ್ವದ ಸಂದೇಶವು ಸರಿಯಾಗಿ ಕೆಲಸ ಮಾಡಿಲ್ಲ. ವಾಸ್ತವಿಕವಾಗಿ ಬಿಜೆಪಿಯು ವರುಣ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.

ಬುಧವಾರ ಮುಚ್ಚಿದ ಬಾಗಿಲ ಕೊಠಡಿಯಲ್ಲಿ ನಡೆದ ಬಿಜೆಪಿ ಪರಾಮರ್ಶನಾ ಸಭೆಯಲ್ಲಿ ಜಸ್ವಂತ್ ಸಿಂಗ್ ಅವರು ಕೂಡ ಬಿಜೆಪಿ ನಾಯಕತ್ವದ ಹಲವಾರು ನಿರ್ಧಾರಗಳನ್ನು ಟೀಕಿಸಿದ್ದರು.

ಹಿಂದುತ್ವ ಎಂದರೆ ಏನರ್ಥ ಮತ್ತು ಯಾವ ನಿಲುವು ಹೊಂದಬೇಕು ಎಂಬ ಬಗ್ಗೆ ಪಕ್ಷಕ್ಕೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಅತಿರೇಕದ ಶಕ್ತಿಗಳು ಪಕ್ಷದ ಪ್ರತಿಷ್ಠೆಗೆ ಹಾನಿ ಮಾಡಿದವು ಮತ್ತು ಅದು ಹಳೆಯ ಪಕ್ಷವಾಗುವ ಎಲ್ಲ ಅಪಾಯಗಳಿದ್ದವು ಎಂದು ಮಿಶ್ರಾ ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೋರ್ಟ್ ತರಾಟೆ: ಎಟಿಎಸ್‌ಗೆ ತಕ್ಷಣ ಹೊಸ ಅಧ್ಯಕ್ಷ
ಕಸಬ್‌ನನ್ನು ಗುರುತಿಸಿದ ನಾಲ್ಕು ಮಂದಿ ಸಾಕ್ಷಿಗಳು!
ಕಾಶ್ಮೀರದಲ್ಲಿ ಅರೆಮಿಲಿಟರಿಗೆ ಎರಡನೇ ಪಾತ್ರ: ಚಿದಂಬರಂ
ಅಮೆರಿಕ ಪ್ರಜೆಯ ಬಂಧನ
ದೇಶದಲ್ಲಿ ಹಂದಿಜ್ವರ ಪ್ರಕರಣ 14ಕ್ಕೆ ಏರಿಕೆ
ಸೃಜನಾತ್ಮಕವಾಗಿ ಯೋಚಿಸಿ: ಅಧಿಕಾರಿಗಳಿಗೆ ಪಿಎಂ