ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಲಾಲು ಅವರ ಉಚಿತ ಪ್ರಯಾಣ ಆದೇಶ ರದ್ದು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲು ಅವರ ಉಚಿತ ಪ್ರಯಾಣ ಆದೇಶ ರದ್ದು?
Lalu Prasad Yadav
PTI
ಮಾಜಿ ರೈಲ್ವೆ ಸಚಿವರಿಗೆ ತಮ್ಮ ಮೂರು ಮಂದಿ ಸಹಚರರ ಜತೆಗೆ ಪ್ರಥಮ ದರ್ಜೆ ಎಸಿ ವಿಭಾಗದ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರ ಆದೇಶವನ್ನು ಹಾಲಿ ರೈಲ್ವೆ ಸಚಿವಾಲಯ ರದ್ದು ಮಾಡಲು ಚಿಂತಿಸಿದೆ.

ಚುನಾವಣೆ ಫಲಿತಾಂಶ ಹೊರಬಿದ್ದ ಎರಡೇ ದಿನಗಳಲ್ಲಿ ಮೇ 19ರಂದು ಹಿಂದಿದ್ದ ಆದೇಶಕ್ಕೆ ರೈಲ್ವೆ ಇಲಾಘೆ ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಿತ್ತು. ಹಿಂದಿದ್ದ ಆದೇಶದ ಪ್ರಕಾರ, ಮಾಜಿ ಸಚಿವರ ಜತೆಗೆ ಒಬ್ಬ ಮಾತ್ರ ಉಚಿತವಾಗಿ ಪ್ರಯಾಣಿಸಬಹುದಿತ್ತು. ಲಾಲು ಅದನ್ನು ತಕ್ಷಣ ಮೂರಕ್ಕೇರಿಸಿದ್ದರು.

ಮಾಜಿ ರೈಲ್ವೆ ಸಚಿವರಾಗಿದ್ದ ಬಿಜೆಪಿ ಮುಖಂಡ ರಾಮ್ ನಾಯ್ಕ್, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದು, ಸಚಿವರ ಪ್ರಾಧಿಕಾರದ ಭಾರೀ ದುರುಪಯೋಗ ನಡೆಯುತ್ತಿದೆ ಎಂದಿದ್ದರು. ಜತೆಗೆ ಖಾಸಗಿ ಹಿತಕ್ಕಾಗಿ ಲೋಕಸಭಾ ಫಲಿತಾಂಶ ಬಂದ ಮೇಲೆ ಬದಲಾವಣೆ ಮಾಡುವುದು ತಪ್ಪು ಹಾಗೂ ನೀತಿಯುಕ್ತ ಬೆಳವಣಿಗೆ ಅಲ್ಲ ಎಂದಿದ್ದರು.

ಈ ಬೆಳವಣಿಗೆಯ ನಂತರ ತಕ್ಷಣ ಪ್ರತಿಕ್ರಿಯಿಸಿರುವ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ರಾಮ್ ನಾಯ್ಕ್ ಅವರ ಪತ್ರ ನನಗೆ ತಲುಪಿದೆ. ಅವರ ವಾದ ಸರಿಯಾಗಿಯೇ ಇದೆ. ಮಾಜಿ ರೈಲ್ವೆ ಸಚಿವರ ಜತೆಗೆ ಪ್ರಯಾಣ ಮಾಡುವ ಜನರ ಸಂಖ್ಯೆ ಹೆಚ್ಚಿಸುವುದು ಸಲ್ಲ. ಹಾಗೂ ಇದು ಸಾಮಾನ್ಯ ಜನರ ಪ್ರಯಾಣಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

ಹಾಗಾದರೆ ಬದಲಾವಣೆ ತಂದ ಆದೇಶವನ್ನು ರದ್ದುಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ಯಾನರ್ಜಿ, ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ಲಾಲು ಅವರನ್ನು ಗೌರವಿಸುತ್ತೇನೆ ಎಂದಷ್ಟೆ ಹೇಳಿದರು. ರೈಲ್ವೆ ಸಚಿವಾಲಯದ ಆಪ್ತ ಮೂಲಗಳ ಪ್ರಕಾರ, ಕೆಲವೇ ದಿನಗಳಲ್ಲಿ ಈ ಹೊಸ ಆದೇಶ ರದ್ದುಗೊಳ್ಳಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಲ್ಲು: ಅಫ್ಜಲ್ ಗುರುಗೆ ಮುನ್ನ ಹಲವರಿದ್ದಾರೆ - ಸರಕಾರ
ನೀವು ಸರ್ಕಾರಿ ನೌಕರರೇ? ಮುಂದಿನ ವರ್ಷ ರಜೆ ನಷ್ಟ!
ಬಿಜೆಪಿಯಲ್ಲಿ ಭಿನ್ನ ಧ್ವನಿ: ಬೃಜೇಶ್ ಮಿಶ್ರಾ ಸರದಿ
ಕೋರ್ಟ್ ತರಾಟೆ: ಎಟಿಎಸ್‌ಗೆ ತಕ್ಷಣ ಹೊಸ ಅಧ್ಯಕ್ಷ
ಕಸಬ್‌ನನ್ನು ಗುರುತಿಸಿದ ನಾಲ್ಕು ಮಂದಿ ಸಾಕ್ಷಿಗಳು!
ಕಾಶ್ಮೀರದಲ್ಲಿ ಅರೆಮಿಲಿಟರಿಗೆ ಎರಡನೇ ಪಾತ್ರ: ಚಿದಂಬರಂ