ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಯಾವತಿ ಖರೀದಿಸಿದ ವಿಮಾನಕ್ಕೆ 76 ಕೋಟಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಯಾವತಿ ಖರೀದಿಸಿದ ವಿಮಾನಕ್ಕೆ 76 ಕೋಟಿ!
Mayawati
PTI
ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೊಸ ಹಾಕರ್ 900 ಎಕ್ಸ್‌ಪಿ ಎಂಬ ವಿಮಾನ ಖರೀದಿಸಿದ್ದಾರೆ. ಈಗಾಗಲೇ ಅದು ಐಜಿಐ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ತಂಗಿದ್ದು, ಉತ್ತರ ಪ್ರದೇಶ ಸರ್ಕಾರಕ್ಕೆ ಮುಂದಿನ ವಾರದಲ್ಲಿ ತಲುಪಲಿದೆ.

ಅಮೆರಿಕದ ಮಧ್ಯಮಗಾತ್ರದ ಬ್ಯುಸಿನೆಸ್ ಜೆಟ್ ವಿಮಾನಗಳ ದೈತ್ಯ ಸಂಸ್ಥೆ ಹಾಕರ್ ಬೀಚ್‌ಕ್ರಾಫ್ಟ್ ತಯಾರಿದ ಎರಡನೇ ಅತಿ ಹೆಚ್ಚು ಬೆಲೆಯ ವಿಮಾನ ಇದಾಗಿದೆ. ಇದರ ಬೆಲೆ 15.5 ಮಿಲಿಯನ್ ಡಾಲರ್ ಅರ್ಥಾತ್ ಸುಮಾರು 76 ಕೋಟಿ ರೂಪಾಯಿಗಳು.

ಈ ವಿಮಾನ ಹಾಕರ್ 4000 ಮಾದರಿಯದ್ದಾಗಿದೆ. ಇದು 5,420 ಕಿ.ಮೀ ದೂರವನ್ನು ಯಾವುದೇ ನಿಲುಗಡೆಯಿಲ್ಲದೆ ಕೈರೋ, ಮಾಸ್ಕೋ, ಶಾಂಘೈ, ಹಾಂಗ್‌ಕಾಂಗ್‌ಗಳನ್ನು ದಾಟಿ ಕ್ರಮಿಸಬಲ್ಲುದು. ಹಾಕರ್ 4000 ಮಾದರಿಯಲ್ಲಿ 6,075ಕಿ.ಮೀ ದೂರವನ್ನು ನಿಲುಗಡೆಯೇ ಇಲ್ಲದೆ ಕ್ರಮಿಸುವ ವಿಮಾನವನ್ನೂ ಈ ಸಂಸ್ಥೆ ತಯಾರಿಸಿದೆ. ಈ ವಿಮಾನದ ಬೆಲೆ 110 ಕೋಟಿ (22.5 ಮಿ.ಡಾ) ರೂಪಾಯಿಗಳಾಗಿದೆ.

ಈಗ ಈ ವಿಮಾನ ಸಾರ್ಕ್ ವಿಭಾಗಕ್ಕೆ ಒಳಪಡುವ ಇಂಟರ್ ಗ್ಲೋಬ್ ಏವಿಯೇಶನ್‌ನ ನಿಲ್ದಾಣದಲ್ಲಿ ನಿಂತಿದೆ. ಈ ವಿಮಾವನ್ನು ಖರೀದಿಸುವ ಮೂಲಕ ಉತ್ತರ ಪ್ರದೇಶ ಸರ್ಕಾರವೂ ಉಳಿದ ರಾಜ್ಯಗಳಂತೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ತನ್ನ ತಲೆತೂರಿಸಿಕೊಂಡಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಶ್ಚಿಮ ಕರಾವಳಿಯಲ್ಲಿ ಕೋಸ್ಟ್ ಗಾರ್ಡ್ 'ರಾಸ್ತಾ ರೋಕೋ'
ಲಾಲು ಅವರ ಉಚಿತ ಪ್ರಯಾಣ ಆದೇಶ ರದ್ದು?
ಗಲ್ಲು: ಅಫ್ಜಲ್ ಗುರುಗೆ ಮುನ್ನ ಹಲವರಿದ್ದಾರೆ - ಸರಕಾರ
ನೀವು ಸರ್ಕಾರಿ ನೌಕರರೇ? ಮುಂದಿನ ವರ್ಷ ರಜೆ ನಷ್ಟ!
ಬಿಜೆಪಿಯಲ್ಲಿ ಭಿನ್ನ ಧ್ವನಿ: ಬೃಜೇಶ್ ಮಿಶ್ರಾ ಸರದಿ
ಕೋರ್ಟ್ ತರಾಟೆ: ಎಟಿಎಸ್‌ಗೆ ತಕ್ಷಣ ಹೊಸ ಅಧ್ಯಕ್ಷ