ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಉತ್ತರಪ್ರದೇಶ: ಯುವಕಾಂಗ್ರೆಸ್ ಕಟ್ಟುವತ್ತ ರಾಹುಲ್ ದಿಟ್ಟ ಹೆಜ್ಜೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರಪ್ರದೇಶ: ಯುವಕಾಂಗ್ರೆಸ್ ಕಟ್ಟುವತ್ತ ರಾಹುಲ್ ದಿಟ್ಟ ಹೆಜ್ಜೆ
Rahul Gandhi
PTI
ಲೋಕಸಭಾ ಚುನಾವಣೆ ಮುಗಿದ ನಂತರ ಇದೀಗ ಕಾಂಗ್ರೆಸ್‌ನ ಯುವ ಉತ್ಸಾಹಿ ನೇತಾರ ರಾಹುಲ್ ಗಾಂಧಿ ನೇತೃತ್ವದ ಯುವ ತಂಡ ಇದೀಗ ಉತ್ತರ ಪ್ರದೇಶದಲ್ಲಿ ಜಿಲ್ಲಾ ಹಾಗೂ ನಗರಗಳಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ.

ಸೋಮವಾರದಿಂದ ಅಧಿಕೃತವಾಗಿ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸುಮಾರು 500 ಆಕಾಂಕ್ಷಿಗಳ ಅರ್ಜಿ ಬಂದಿವೆ. ಈ ಅರ್ಜಿಯಲ್ಲಿ ಯುವ ಎಂಬಿಎ ಪದವೀಧರರು, ಉಪನ್ಯಾಸಕರು, ಕಾರ್ಪೋರೇಟ್ ಉದ್ಯೋಗಿಗಳೂ ಸೇರಿದ್ದಾರೆ.

ಆದರೆ ಕೇವಲ ಪದವಿಯೇ ಇದಕ್ಕೆ ಮಾನದಂಡವಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯ ಜತೆಗೆ ಮುಂದಿನ ಆರು ತಿಂಗಳ ಅವಧಿಯಲ್ಲಿ ತಾವು ಹಮ್ಮಿಕೊಳ್ಳುವ ಕಾರ್ಯಗಳ ವಿವರವನ್ನು ನೀಡಬೇಕು. ರಾಹುಲ್ ಗಾಂಧಿ ಈಗಾಗಲೇ ಗಂಭೀರವಾಗಿ ಈ ಬಗ್ಗೆ ರೂಪುರೇಷೆ ತಯಾರಿಸುತ್ತಿದ್ದು, ಜಿಲ್ಲಾ ಹಾಗೂ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದವರು ರಾಹುಲ್ ಮಾರ್ಗದರ್ಶನದಲ್ಲಿ ನಡೆಯಬೇಕಿದೆ.

ಆದರೆ ಈ ಆಯ್ಕೆಯಲ್ಲಿ ಕಾಂಗ್ರೆಸ್ ಜತೆಗಿನ ಹಳೆಯ ಸಂಬಂಧಗಳೆಲ್ಲ ಪ್ರಮುಖ ಆಯ್ಕೆಯ ಮಾನದಂಡವಾಗುವುದಿಲ್ಲ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದಿದ್ದರೂ, ತುಂಬ ಚುರುಕುತನ, ವಿದ್ಯಾವಂತ, ಬುದ್ಧಿವಂತ ಹಾಗೂ ಸಮಾಜಕ್ಕಾಗೆ ಕೆಲಸ ಮಾಡುವ ಆಸಕ್ತಿ, ಉತ್ಸಾಹ ಇರುವ ವ್ಯಕ್ತಿಯನ್ನು ಆರಿಸಲಾಗುತ್ತದೆ ಎಂದು ಹಿರಿಯ ಯುವ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಇದಕ್ಕಾಗಿಯೇ ಮುಂದಿನ ಆರು ತಿಂಗಳಲ್ಲಿ ನಡೆಸುವ ಕಾರ್ಯಗಳ ವಿವರಗಳನ್ನೂ ಅರ್ಜಿಗಳ ಜತೆಗೆ ನೀಡಲು ಹೇಳಿದ್ದೇವೆ ಎಂದು ಅವರು ವಿವರಿಸುತ್ತಾರೆ.

500ಕ್ಕೂ ಹೆಚ್ಚು ಅರ್ಜಿಗಳಲ್ಲಿ ಆಯ್ಕೆಯಾದ ಮಂದಿಗೆ ವಿಭಾಗೀಯ ಮಟ್ಟದ ಸಂದರ್ಶನ ಜೂ.17 ಹಾಗೂ ಜೂ.24ರಂದು ನಡೆಯಲಿದೆ. ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಈ ತಿಂಗಳಾಂತ್ಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಉತ್ತರ ಪ್ರದೇಶ ಯುವ ಕಾಂಗ್ರೆಸ್‌ನ ಕೇಂದ್ರ ವಿಭಾಗದ ಅಧ್ಯಕ್ಷ ಪಂಕಜ್ ತಿವಾರಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕರುಪ್ಪಸ್ವಾಮಿ ದೈವವಾಗಿ ಪೂಜೆಗೊಳ್ಳುತ್ತಿದ್ದ ಮಹಾವೀರ!
ಬಲಿಪಶು ಹುಡುಕಾಟದ ಭಾರದಲ್ಲಿ ನಲುಗುತ್ತಿರುವ ಬಿಜೆಪಿ
ತಿರುಪತಿ ತಿಮ್ಮಪ್ಪನ ಮಾಣಿಕ್ಯ ಹರಾಜಿಗಿದೆ!?
ವಿಜ್ಞಾನಿ ಮಹಾಲಿಂಗಂ ಪತ್ತೆಗೆ ಕ್ರಮ: ಚಿದಂಬರಂ
ಜಸ್ವಂತ್ ವಿರುದ್ಧ ಕ್ರಮ ತಳ್ಳಿಹಾಕಿದ ಬಿಜೆಪಿ
ಜೂನ್ 15ರಿಂದ ಅಮರನಾಥ ತೀರ್ಥಯಾತ್ರೆ