ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ನಕ್ಸಲರಿಂದ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರಿಂದ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಕೆಟ್ ಲಾಂಚರ್‌ಗಳನ್ನು ಬಳಸಿ ಎಲ್ಲರನ್ನೂ ಚಕಿತಗೊಳಿಸಿದ್ದ ನಕ್ಸಲೀಯರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ತಯಾರಿಕೆಯ ನಾಲ್ಕು ಘಟಕಗಳನ್ನು ಈಗಾಗಲೇ ಸ್ಥಾಪಿಸಿದ್ದಾರೆಂದು ಕೇಂದ್ರ ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ

ಭದ್ರತಾ ಪಡೆಗಳ ಮೇಲೆ ಸಾಮಾನ್ಯವಾಗಿ ಕೈಯಿಂದ ಸ್ಫೋಟಿಸುವ ಸುಧಾರಿತ ಸ್ಫೋಟಕ ಉಪಕರಣ ಬಳಸುತ್ತಿದ್ದ ನಕ್ಸಲರು ಈಗ ನಿಧಾನವಾಗಿ ದೂರನಿಯಂತ್ರಕ ಸುಧಾರಿತ ಸ್ಫೋಟಕ ಉಪಕರಣ ಬಳಸುತ್ತಿದ್ದು, ಕೇವಲ ಗುಂಡಿ ಅದುಮುವ ಮ‌ೂಲಕ ದೂರದಿಂದಲೂ ಅದನ್ನು ಸಕ್ರಿಯಗೊಳಿಸಬಹುದು.

ಸ್ಫೋಟಕಗಳ ಸುಧಾರಣೆ ಜತೆಗೆ ಸಾಮಾನ್ಯ ಪಡೆಗಳ ಮಾದರಿಯಲ್ಲೇ ನಕ್ಸಲರಿಗೆ ತೀವ್ರ ತರಬೇತಿ ಬೆಂಬಲವನ್ನೂ ನೀಡಲಾಗುತ್ತಿದೆಯೆಂದು ಮ‌ೂಲಗಳು ಹೇಳಿವೆ. ಜಾರ್ಖಂಡ್ ಮತ್ತು ಚತ್ತೀಸ್‌ಗಢದ ದಟ್ಟ ಕಾಡುಗಳಲ್ಲಿ ಮತ್ತು ಪರ್ವತಗಳಲ್ಲಿ ಮಾವೋವಾದಿಗಳು ಎರಡು ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆಂದು ಕೇಂದ್ರ ಭದ್ರತಾ ಪಡೆಗಳು ಮತ್ತು ಸ್ಥಳೀಯ ಪೊಲೀಸ್ ಮ‌ೂಲಗಳು ಹೇಳಿವೆ.

ಬಿಹಾರದಲ್ಲಿ ಈ ಮುಂಚೆ ಇನ್ನೊಂದು ಕಾರ್ಖಾನೆ ಅಸ್ತಿತ್ವದಲ್ಲಿದ್ದರೂ ಅದನ್ನು ನಕ್ಸಲೀಯರು ನೆಲಸಮಗೊಳಿಸಿದ್ದರು. ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ತಂಡವು ಜಾರ್ಖಂಡ್‌ನಲ್ಲಿ ಸಣ್ಣ ಬಾಂಬ್ ಮತ್ತು ಮೋರ್ಟಾರ್ ಶೆಲ್ ತಯಾರಿಸುವ ಕಾರ್ಖಾನೆಯೊಂದನ್ನು ಪತ್ತೆಹಚ್ಚಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈದ್ಯರ ಅಮಾನತು
ಸ್ಫೋಟಕ ವಶ
ನಾಪತ್ತೆಯಾದ ವಿಜ್ಞಾನಿ ಮಹಾಲಿಂಗಂ ಶವ ಪತ್ತೆ
ಭಯೋತ್ಪಾದನೆ ಭಾರತದ ಪ್ರಧಾನ ಸವಾಲು: ಚಿದು
ಆಸ್ಟ್ರೇಲಿಯಾ ಭಾರತೀಯರಿಗೆ ಪ್ರತ್ಯೇಕ ನಿಯಮಾವಳಿ!
ಉಲ್ಬಣಿಸಿದ ಬಿಜೆಪಿ ಬಿಕ್ಕಟ್ಟು: ಯಶವಂತ್ ಸಿನ್ಹಾ ಪದತ್ಯಾಗ