ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅತ್ಯಾಚಾರ ಆರೋಪಿಗಳಿಗೆ ತ್ವರಿತಕೋರ್ಟ್ ವಿಚಾರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತ್ಯಾಚಾರ ಆರೋಪಿಗಳಿಗೆ ತ್ವರಿತಕೋರ್ಟ್ ವಿಚಾರಣೆ
ಅತ್ಯಾಚಾರದ ಆರೋಪಕ್ಕೊಳಗಾದ ಮ‌ೂವರ ಮೇಲೆ ಆಕ್ರೋಶಿತ ಜನರ ಗುಂಪು ದಾಳಿ ಮಾಡಿದ ಘಟನೆ ನಡೆದ ಮರುದಿನವೇ ಗುಜರಾತ್ ಸರ್ಕಾರ ಆರೋಪಿಗಳನ್ನು ತ್ವರಿತಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದು ಆದೇಶಿಸಿದೆ.

ಸೂರತ್‌ನಲ್ಲಿ ನಿಯೋಜಿತರಾದ ಪೊಲೀಸರ ಮಕ್ಕಳಾಶಾಹಿದ್ ಸಯ್ಯದ್, ತಾರಿಖ್ ಸೈಯದ್ ಹಾಗೂ ಅಬು ಬಕರ್ ಶೇಖ್ ಚಲಿಸುತ್ತಿದ್ದ ಕಾರಿನಲ್ಲಿ ಜೂ.12ರಂದು 17 ವರ್ಷ ವಯಸ್ಸಿನ ಯುವತಿಯ ಮೇಲೆ ಸಾಮ‌ೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ವಿಡಿಯೊ ಚಿತ್ರೀಕರಣ ನಡೆಸಿದ್ದರೆಂದು ಆರೋಪಿಸಲಾಗಿದೆ. ಮ‌ೂವರನ್ನು 14 ದಿನಗಳ ಪೊಲೀಸ್ ರಿಮಾಂಡ್‌ಗೆ ಭಾನುವಾರ ಒಪ್ಪಿಸಲಾಗಿದೆ.ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಶಿಫಾರಸು ಮಾಡಲಾಗಿದೆಯೆಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ಆರೋಪಿಗಳ ವೈದ್ಯಕೀಯ ಪರೀಕ್ಷೆಗಾಗಿ ಸೂರತ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವಾಗ ಮ‌ೂವರ ಮೇಲೆ ಜನರ ಗುಂಪು ಹಲ್ಲೆ ಮಾಡಿತೆಂದು ವರದಿಯಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ಜನರು ಮತ್ತು ರೋಗಿಗಳು ಸಾಮ‌ೂಹಿಕ ಅತ್ಯಾಚಾರದ ಬಗ್ಗೆ ತಿಳಿದು ಆರೋಪಿಗಳಿಗೆ ತೀವ್ರವಾಗಿ ಥಳಿಸಿದರೆಂದು ಪೊಲೀಸರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನಕ್ಸಲರಿಂದ ಶಸ್ತ್ರಾಸ್ತ್ರ ತಯಾರಿಕೆ ಕಾರ್ಖಾನೆ
ವೈದ್ಯರ ಅಮಾನತು
ಸ್ಫೋಟಕ ವಶ
ನಾಪತ್ತೆಯಾದ ವಿಜ್ಞಾನಿ ಮಹಾಲಿಂಗಂ ಶವ ಪತ್ತೆ
ಭಯೋತ್ಪಾದನೆ ಭಾರತದ ಪ್ರಧಾನ ಸವಾಲು: ಚಿದು
ಆಸ್ಟ್ರೇಲಿಯಾ ಭಾರತೀಯರಿಗೆ ಪ್ರತ್ಯೇಕ ನಿಯಮಾವಳಿ!