ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಶರಣಾಗಲು ರಾಜ್‌ಠಾಕ್ರೆಗೆ ಹೈ.ಕೋ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶರಣಾಗಲು ರಾಜ್‌ಠಾಕ್ರೆಗೆ ಹೈ.ಕೋ ಆದೇಶ
ಕಲ್ಯಾಣ್ ಗಲಭೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನನ್ನು ವಜಾಗೊಳಿಸಿರುವ ಮುಂಬೈ ಹೈಕೋರ್ಟ್, ಜೂನ್ 29ರಂದು ರೈಲ್ವೇ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶಿಸಿದೆ.

ರಾಜ್‌ಠಾಕ್ರೆಗೆ ನೀಡಲಾಗಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶೆ ರೇಖಾ ಸೌಂದುರ್ಬಲದೊಟ ಅವರು ಈ ಹಂತದಲ್ಲಿ ಕಸ್ಟೋಡಿಯಲ್ ಇಂಟರಾಗೇಶನ್ ಅಗತ್ಯವಿಲ್ಲ ಎಂದು ಹೇಳಿದರು.

ಅವರನ್ನು ಅದಾಗಲೇ ರೈಲ್ವೇ ಪೊಲೀಸರು ಬಂಧಿಸಿರುವ ಕಾರಣ ಸೆಶನ್ಸ್ ನ್ಯಾಯಲಯದ ನಿರೀಕ್ಷಣಾ ಜಾಮೀನು ಅಸಿಂಧುವಾಗುತ್ತದೆ ಎಂಬ ಸರ್ಕಾರದ ವಾದವನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ರೈಲ್ವೇ ನ್ಯಾಯಾಲಯದ ಮುಂದೆ ಶರಣಾಗಲು ಸೂಚಿಸಿದೆ.

ರಾಜ್ ಅವರನ್ನು ಅಕ್ಟೋಬರ್ 22ರಂದು ಬಂಧಿಸಲಾಗಿದ್ದು ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನಾಂಗೀಯ ಕಲಹಕ್ಕೆ 12 ಬಲಿ
ಪುರಿ ಜಗನ್ನಾಥ ರಥಯಾತ್ರೆಗೆ ವಿಶೇಷ ರೈಲು
ನಾನ್ಯಾರಿಗೂ ಬಾಯ್ಮುಚ್ಚಲು ಆದೇಶಿಸಿರಲಿಲ್ಲ: ಜೋಷಿ
ಮೊದಲ ಬಾರಿಗೆ ವರುಣ್ ವಿರುದ್ಧ ಅಸಮಾಧಾನ ತೋರಿದ ಆರೆಸ್ಸೆಸ್
ಮಹಾ: ಕೋಲಾಹಲದ ನಡುವೆ ಎಟಿಆರ್ ಮಂಡನೆ
ಜಲಂಧರ್: ಮತ್ತೆ 7ವಿದ್ಯಾರ್ಥಿಗಳಿಗೆ ಎಚ್1ಎನ್1