ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿವಿಲ್ ಕೋರ್ಟ್‌ಗಳಲ್ಲಿ ಕಾರ್ಮಿಕ ವಿವಾದ ನಡೆಸುವಂತಿಲ್ಲ: ಸು.ಕೋ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿವಿಲ್ ಕೋರ್ಟ್‌ಗಳಲ್ಲಿ ಕಾರ್ಮಿಕ ವಿವಾದ ನಡೆಸುವಂತಿಲ್ಲ: ಸು.ಕೋ
ಔದ್ಯಮಿಕ ವಿವಾದಗಳ ಕಾಯ್ದೆಯನ್ವಯ ಅಸ್ತಿತ್ವಕ್ಕೆ ಬಂದಿರುವ ಕಾರ್ಮಿಕ ನ್ಯಾಯಾಲಯಗಳು ಮತ್ತು ಟ್ರಿಬ್ಯುನಲ್‌ಗಳು ಮಾತ್ರ ಕೆಲಸದಿಂದ ವಜಾ, ಅಮಾನತ್ತು ಮತ್ತು ವರ್ಗಾವಣೆ ಮುಂತಾದ ಕಾರ್ಮಿಕರ ಸಮಸ್ಯೆ ಪ್ರಕರಣಗಳ ಕುರಿತು ವಿಚಾರಣೆ ನಡೆಸಬಹುದೇ ಹೊರತು ಸಿವಿಲ್ ಕೋರ್ಟ್‌ಗಳಿಗೆ ಈ ಪ್ರಕರಣಗಳ ವಿಚಾರಣೆಯ ನ್ಯಾಯವ್ಯಾಪ್ತಿ ಇವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ನೇತೃತ್ವದ ನ್ಯಾಯಪೀಠವು, ಯಾವುದೇ ಔದ್ಯಮಿಕ ವಿವಾದಗಳ ಕಾಯ್ದೆಯ ವ್ಯಾಪ್ತಿಗೆ ಬರುವ ಯಾವುದೇ ಉದ್ಯೋಗಿಗಳು ನಮ್ಮ ನೋವುಗಳನ್ನು ಕಾರ್ಮಿಕ ನ್ಯಾಯಾಧಿಕರಣ ಅಥವಾ ಕಾರ್ಮಿಕ ನ್ಯಾಯಾಲಯದಲ್ಲಿ ಎತ್ತಬೇಕೇ ವಿನಹ ಸಿವಿಲ್ ಕೋರ್ಟ್‌ನಲ್ಲಿ ಅಲ್ಲ ಎಂದು ಹೇಳಿದೆ.

ಕಾರ್ಮಿಕ ನ್ಯಾಯಾಲಯ ಮತ್ತು ನ್ಯಾಯಾಧಿಕರಣಗಳಿಗೆ ಸಿವಿಲ್ ಕೋರ್ಟ್‌ಗಳಿಗಿಂತ ಹೆಚ್ಚು ಅಧಿಕಾರವನ್ನು ಹೊಂದಿದೆ ಎಂದು ಅವರು ನುಡಿದರು. ಉದಾಹರಣೆಗೆ, ವೈಯಕ್ತಿಕ ಸೇವೆಯ ಗುತ್ತಿಗೆಯನ್ನು ಜಾರಿಗೆ ತರಲು, ಸೃಷ್ಟಿಸಲು ಮತ್ತು ಇವುಗಳನ್ನು ಬದಲಿಸುವ ಅಧಿಕಾರಗಳನ್ನು ಸಿವಿಲ್ ಕೋರ್ಟ್ ಹೊಂದಿಲ್ಲ.

ಸಿವಿಲ್ ನ್ಯಾಯಾಲಯದಲ್ಲಿ ಕಾರ್ಮಿಕ ವಿವಾದಗಳನ್ನು ವಿಚಾರಿಸುವ ನ್ಯಾಯವ್ಯಾಪ್ತಿ ಇದೆ ಎಂಬುದಾಗಿ ಕೇರಳ ಹೈ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಅಪೊಲೋ ಟೈರ್ಸ್ ಲಿಮಿಟೆಡ್ ಸಲ್ಲಿಸಿದ್ದ ಮನವಿಯನ್ನು ಎತ್ತಿ ಹಿಡಿಯುತ್ತಾ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.

ಈ ಪ್ರಕರಣದಲ್ಲಿ ಸಿ.ಪಿ. ಸಬಾಸ್ಟಿಯನ್ ಎಂಬವರು ತನ್ನ ವರ್ಗಾವಣೆಯನ್ನು ಪ್ರಶ್ನಿಸಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬೈದಾಳಿ: ಪೊಲೀಸರು ಎಸಗಿದ ತಪ್ಪುಗಳೇನು?
ಶರಣಾಗಲು ರಾಜ್‌ಠಾಕ್ರೆಗೆ ಹೈ.ಕೋ ಆದೇಶ
ಜನಾಂಗೀಯ ಕಲಹಕ್ಕೆ 12 ಬಲಿ
ಪುರಿ ಜಗನ್ನಾಥ ರಥಯಾತ್ರೆಗೆ ವಿಶೇಷ ರೈಲು
ನಾನ್ಯಾರಿಗೂ ಬಾಯ್ಮುಚ್ಚಲು ಆದೇಶಿಸಿರಲಿಲ್ಲ: ಜೋಷಿ
ಮೊದಲ ಬಾರಿಗೆ ವರುಣ್ ವಿರುದ್ಧ ಅಸಮಾಧಾನ ತೋರಿದ ಆರೆಸ್ಸೆಸ್