ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹರ್ಯಾಣದಲ್ಲಿ ವಿಶ್ವದ 2ನೇ ತದ್ರೂಪಿ ಎಮ್ಮೆ 'ಗರಿಮಾ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹರ್ಯಾಣದಲ್ಲಿ ವಿಶ್ವದ 2ನೇ ತದ್ರೂಪಿ ಎಮ್ಮೆ 'ಗರಿಮಾ'
ಕರ್ನಾಲ್ (ಹರ್ಯಾಣ): ವಿಶ್ವದ ಎರಡನೇ ತದ್ರೂಪಿ ಎಮ್ಮೆ ಮರಿ 'ಗರಿಮಾ' ಭಾರತದಲ್ಲಿ ಜನಿಸಿದ್ದು, ಹರ್ಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ (ಎನ್‌ಡಿಆರ್ಐ) ವಿಜ್ಞಾನಿಗಳ ಶ್ರಮ ಯಶಸ್ವಿಯಾಗಿದೆ.

ವಿನೂತನ ಮತ್ತು ಆಧುನಿಕ 'ಹಸ್ತ ಚಾಲಿತ ತದ್ರೂಪಿ ತಂತ್ರಜ್ಞಾನ'ವನ್ನು ಬಳಸಿ ವಿಜ್ಞಾನಿಗಳು ಈ ಸಾಧನೆ ಮಾಡಿದ್ದು, ಸಿಸೇರಿಯನ್ ಮೂಲಕ ಮರಿಯೆಮ್ಮೆಯನ್ನು ಹೊರತೆಗೆಯಲಾಯಿತು. ಜನನ ಸಮಯದಲ್ಲಿ ಮರಿಯೆಮ್ಮೆಯ ತೂಕ ಸುಮಾರು 43 ಕೆ.ಜಿ. ಇತ್ತು.

ಈ ಕ್ಲೋನಿಂಗ್ ತಂತ್ರಜ್ಞಾನವನ್ನು ಎನ್‌ಡಿಆರ್ಐ ಅಭಿವೃದ್ಧಿಪಡಿಸಿದ್ದು, ನಮಗೆ ಬೇಕಾದ ಲಿಂಗದ ಎಮ್ಮೆ ಮರಿಯನ್ನು ಪಡೆಯಬಹುದು. ಈ ತಂತ್ರಜ್ಞಾನ ಅನುಸರಿಸಿದಲ್ಲಿ ಭಾರತದಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಈ ಸಂಶೋಧನಾತ್ಮಕ ಸಾಧನೆಯಲ್ಲಿ ಡಾ.ಎಸ್.ಕೆ.ಸಿಂಗ್ಲಾ, ಡಾ.ಆರ್.ಎಸ್.ಮಾಣಿಕ್, ಡಾ.ಎಂ.ಎಸ್.ಚೌಹಾಣ್, ಡಾ.ಪಿ.ಪಾಲ್ಟಾ, ಡಾ.ಶಿವಪ್ರಸಾದ್, ಡಾ.ಆರ್.ಎಸ್.ಶಾ ಮತ್ತು ಡಾ.ಎ.ಜಾರ್ಜ್ ಅವರನ್ನೊಳಗೊಂಡ ವಿಜ್ಞಾನಿಗಳ ತಂಡಕ್ಕೆ ಡಾ.ಎ.ಕೆ.ಶ್ರೀವಾಸ್ತವ ನೇತೃತ್ವ ವಹಿಸಿದ್ದರು.

ಕೋಣಗಳ ಸಂಖ್ಯೆಯಲ್ಲಿ ಕೊರತೆಯನ್ನು ಮನಗಂಡ ಈ ವಿಜ್ಞಾನಿಗಳು, ಈ ಹಸ್ತಚಾಲಿತ ಕ್ಲೋನಿಂಗ್ ವಿಧಾನವು ಎಮ್ಮೆ ಮತ್ತು ಕೋಣಗಳ ಸಂಖ್ಯೆಯ ಅಂತರ ಕಡಿಮೆ ಮಾಡುವಲ್ಲಿ ನೆರವಾಗಬಹುದು ಎಂದು ಆಶಿಸಿದ್ದಾರೆ.

ವಿಶ್ವದ ಪ್ರಪ್ರಥಮ ಮರಿ ಎಮ್ಮೆ ಕೂಡ 2009ರ ಫೆಬ್ರವರಿ 6ರಂದು ಇದೇ ಎನ್‌ಡಿಆರ್ಐಯಲ್ಲೇ ಜನ್ಮ ತಳೆದಿತ್ತು. ಆದರೆ, ನ್ಯುಮೋನಿಯಾದಿಂದಾಗಿ ಅದು ಒಂದು ವಾರದೊಳಗೆ ಅಸು ನೀಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾನವ ಹಕ್ಕು ಆಯೋಗದಿಂದ ಮಾನವ ಹಕ್ಕು ಉಲ್ಲಂಘನೆ!
ಅಕ್ರಮ ಭೂಮಿ ಖರೀದಿ: 'ಐಶ್' ವಿರುದ್ಧ ದೂರು
ಉತ್ತರಾಖಂಡ ನೂತನ ಸಿಎಂ ರಮೇಶ್ ಪೋಖ್ರಿಯಾಲ್
ಸಂಸದ ವರುಣ್ ಗಾಂಧಿ ವಿರುದ್ಧ ಆರೋಪಪಟ್ಟಿ ಸಿದ್ಧ
ಬಾರದ ಮಳೆರಾಯ: ರೈತ ಸಮುದಾಯ ಕಂಗಾಲು
ರಾಜಧಾನಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ