ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಾರ್ಕೋಜಿ 'ಬುರ್ಖಾ' ಟೀಕೆಗೆ ದಿಯೋಬಂದ್ ಫತ್ವಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾರ್ಕೋಜಿ 'ಬುರ್ಖಾ' ಟೀಕೆಗೆ ದಿಯೋಬಂದ್ ಫತ್ವಾ
ಇಸ್ಲಾಮಿಕ್ ಧಾರ್ಮಿಕ ಶಾಲೆ ದರ್-ಉಲ್-ಉಲೂಂ ದಿಯೋಬಂದ್ ಫ್ರಾನ್ಸ್‌ನಲ್ಲಿ ತಯಾರಾದ ಸರಕುಗಳನ್ನು ಖರೀದಿಸುವುದರ ವಿರುದ್ಧ ಫತ್ವಾ ಹೊರಡಿಸುವ ಬಗ್ಗೆ ಚಿಂತನೆ ನಡೆಸಿದೆ. ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಅವರು ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದು ಗುಲಾಮಗಿರಿಯ ಸಂಕೇತವೆಂದು ಪ್ರತಿಕ್ರಿಯೆ ನೀಡಿದ್ದ ಹಿನ್ನೆಲೆಯಲ್ಲಿ ಈ ಫತ್ವಾ ಹೊರಡಿಸುವ ಬಗ್ಗೆ ಪರಿಶೀಲನೆ ನಡೆಸಿದೆ.

ಧಾರ್ಮಿಕ ಶಾಲೆಯ ಫತ್ವಾ ಶಾಖೆಯಾದ ದರ್ ಉಲ್ ಉಫ್ಬಾದ ಮುಫ್ತಿ ಮೌಲಾನಾ ಅರ್ಶದ್ ಫರೂಕಿ ತಮ್ಮ ಶಾಖೆಯು ಸಾರ್ಕೋಜಿ ಬಹಿಷ್ಕಾರಕ್ಕೆ ಕೂಡ ಕರೆ ನೀಡುವುದಾಗಿ ತಿಳಿಸಿದರು. ಅಗತ್ಯವಾದರೆ, ಎಲ್ಲ ಅನುಯಾಯಿಗಳಿಗೆ ಫ್ರೆಂಚ್ ಸರಕುಗಳ ನಿಷೇಧಕ್ಕೆ ಹುಕುಂ ವಿಧಿಸುವುದಾಗಿ ಅವರು ಹೇಳಿದ್ದಾರೆ.

ಬುರ್ಖಾ, ನಕಾಬ್ ಅಥವಾ ಪರ್ದಾ ಮಹಿಳೆಯರ ಗುಲಾಮಗಿರಿಯ ಸಂಕೇತವೆಂದು ಫ್ರೆಂಚ್ ಅಧ್ಯಕ್ಷರು ನೀಡಿದ ಪ್ರತಿಕ್ರಿಯೆಯು ಮಾನವಜನಾಂಗದ ನಾಚಿಗೆಗೇಡಿನ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದು, ಯಾವುದೇ ಧರ್ಮದ ಆಚರಣೆಗೆ ಪೌರರಿಗೆ ಖಾತರಿ ನೀಡುವ ಅವರ ರಾಷ್ಟ್ರದ ಕಾನೂನನ್ನು ಫ್ರೆಂಚ್ ಅಧ್ಯಕ್ಷರು ಉಲ್ಲಂಘಿಸಿದ್ದಾರೆಂದು ಅವರು ತಿಳಿಸಿದರು.

ಸಾರ್ಕೋಜಿ ಪ್ರತಿಕ್ರಿಯೆಯು ಫ್ರಾನ್ಸ್‌ಗೆ ಅಪಖ್ಯಾತಿ ತರುವ ಗುರಿ ಹೊಂದಿರುವ ನೀಚ ಪಿತೂರಿ ಎಂದು ಫರೂಕಿ ಹೇಳಿದ್ದು, ಕ್ರೈಸ್ತ ಧರ್ಮದ ಮೇರಿ ಚಿತ್ರಗಳಲ್ಲಿ ಮತ್ತು ಕೆತ್ತನೆಗಳಲ್ಲಿ ಸದಾ ಅವರ ತಲೆಯನ್ನು ಮುಚ್ಚಿದ ಉಡುಪಿನಲ್ಲಿರುವುದರಿಂದ ಕ್ರೈಸ್ತಧರ್ಮದ ವಿರುದ್ಧ ಕೂಡ ಒಳಸಂಚು ಹೂಡಿದ್ದಾರೆಂದು ಅವರು ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಿಕ್ಷಣ ಸುಧಾರಣೆ: ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ?
ಸಾಮೂಹಿಕ ಅತ್ಯಾಚಾರ ಆರೋಪ ನ್ಯಾಯೋಚಿತವಲ್ಲ: ದೀಕ್ಷಿತ್
ಬಸ್ ಪ್ರಪಾತಕ್ಕೆ: 25 ಸಾವು
ಜಮ್ಮು: ಅಮರನಾಥ ಯಾತ್ರೆ ಅಮಾನತು
ಹರ್ಯಾಣದಲ್ಲಿ ವಿಶ್ವದ 2ನೇ ತದ್ರೂಪಿ ಎಮ್ಮೆ 'ಗರಿಮಾ'
ಮಾನವ ಹಕ್ಕು ಆಯೋಗದಿಂದ ಮಾನವ ಹಕ್ಕು ಉಲ್ಲಂಘನೆ!